ವಾವ್.. ಅದ್ಭುತ ಜೋಡಿ, 'ಬ್ಯೂಟಿ ಅಂಡ್ ಬೀಸ್ಟ್' ಎಂದು ಸುದ್ದಿಯಾದ ಡೊನಾಲ್ಡ್ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ತಮ್ಮ ಮಾತುಗಳಿಂದ ಸಾರ್ವಜನಿಕವಾಗಿ ಜನರ ಹುಬ್ಬೇರಿಸಿದ ಘಟನೆಗ...
ಡೊನಾಲ್ಡ್ ಟ್ರಂಪ್-ಇವಾಂಕಾ ಮತ್ತು ಮೈಕ್ ಪೊಂಪಿಯೊ
ಡೊನಾಲ್ಡ್ ಟ್ರಂಪ್-ಇವಾಂಕಾ ಮತ್ತು ಮೈಕ್ ಪೊಂಪಿಯೊ
Updated on: 
ಪಿಯೊಂಗ್ಟೇಕ್ (ದಕ್ಷಿಣ ಕೊರಿಯಾ): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ತಮ್ಮ ಮಾತುಗಳಿಂದ ಸಾರ್ವಜನಿಕವಾಗಿ ಜನರ ಹುಬ್ಬೇರಿಸಿದ ಘಟನೆಗಳು ನಡೆದಿವೆ.
ಅನೇಕ ಬಾರಿ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ನಿನ್ನೆ ದಕ್ಷಿಣ ಕೊರಿಯಾದ ರಾಜಧಾನಿ ಸಿಯೊಲ್ ನ ದಕ್ಷಿಣದಲ್ಲಿರುವ ಬಂದರು ನಗರಿ ಪಿಯೊಂಗ್ಟೇಕ್ ನಲ್ಲಿ ಕೂಡ ಅಂತಹದ್ದೇ ಘಟನೆ ನಡೆಯಿತು. 
ಅಲ್ಲಿ ಟ್ರಂಪ್ ತಮ್ಮ ಪುತ್ರಿ ಮತ್ತು ತಮಗೆ ಸಲಹೆಗಾರ್ತಿ ಕೂಡ ಆಗಿರುವ ಇವಾಂಕಾ ಟ್ರಂಪ್ ಹಾಗೂ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊರ ಜೊತೆ ಒಸಾನ್ ವಾಯುನೆಲೆಗೆ ಭೇಟಿ ನೀಡಿ ವಾಯುಪಡೆ ಸಿಬ್ಬಂದಿಯನ್ನುದ್ದೇಶಿ ಮಾತನಾಡಿದರು.
ವೇದಿಕೆ ಮೇಲೆ ನಿಂತು ಮಾತನಾಡುತ್ತಾ ವೇದಿಕೆಯ ಹಿಂಭಾಗದಲ್ಲಿದ್ದ ಮೈಕ್ ಪಾಂಪಿಯೊ ಮತ್ತು ಇವಾಂಕಾ ಟ್ರಂಪ್ ರನ್ನು ವೇದಿಕೆಗೆ ಕರೆದರು. ಅವರು ವೇದಿಕೆಗೆ ಬಂದಾಗ, ಇವರಿಬ್ಬರು ಅದ್ಭುತವಾದ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿ ವಾವ್ ಎಂತಹ ಬ್ಯೂಟಿಫುಲ್ ಜೋಡಿ ಎಂದು ಉದ್ಘರಿಸಿದರು.
ಆಗ ಕೆಳಗಿದ್ದವರು ಓ.. ಎಂದು ಕೂಗಿದರು. ಅಷ್ಟಕ್ಕೇ ಸುಮ್ಮನಾಗದ ಟ್ರಂಪ್, ‘ಬ್ಯೂಟಿ ಆ್ಯಂಡ್ ಬಿಸ್ಟ್’ ಎಂದರು. ಆ ವಿಡಿಯೊ ಈಗ ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com