ಜಪಾನ್ ಗೆ ಆಗಮಿಸಿದ ನರೇಂದ್ರ ಮೋದಿ; ನಾಳೆಯಿಂದ ಎರಡು ದಿನ ಜಿ20 ಶೃಂಗಸಭೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಜಪಾನ್ ಗೆ ಆಗಮಿಸಿದ್ದು ನಾಳೆ ಮತ್ತು ನಾಡಿದ್ದು ...
ಒಸಾಕಾಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ ಸಿಕ್ಕಿತು
ಒಸಾಕಾಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ ಸಿಕ್ಕಿತು
Updated on
ಒಸಕಾ(ಜಪಾನ್): ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಜಪಾನ್ ಗೆ ಆಗಮಿಸಿದ್ದು ನಾಳೆ ಮತ್ತು ನಾಡಿದ್ದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದು ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. 

ಒಸಾಕಾಗೆ ಇಂದು ಬೆಳಗ್ಗೆ ಆಗಮಿಸಿದೆ. ಜಿ20 ಶೃಂಗಸಭೆ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆಗಳು ಮುಂದಿನ ಎರಡು ದಿನಗಳಲ್ಲಿ ನಡೆಯಲಿವೆ. ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳನ್ನು ಮತ್ತು ಭಾರತದ ದೃಷ್ಟಿಕೋನವನ್ನು ಜಗತ್ತಿನ ನಾಯಕರಿಗೆ ಪ್ರಧಾನಿ ಮೋದಿ ತಲುಪಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ಮೋದಿಯವರು ಪ್ರಧಾನಿಯಾದ ನಂತರ ಇದು ಅವರು ಭಾಗವಹಿಸುತ್ತಿರುವ 6ನೇ ಜಿ20 ಶೃಂಗಸಭೆಯಾಗಿದೆ. 

ಮಹಿಳಾ ಸಶಕ್ತೀಕರಣ, ಕೃತಕ ಬುದ್ದಿಮತ್ತೆ, ಭಯೋತ್ಪಾದನೆಯಂತಹ ಸಾಮಾನ್ಯ ಸಮಸ್ಯೆ, ಸವಾಲುಗಳನ್ನು ಎದುರಿಸುವುದು ತಮ್ಮ ಶೃಂಗಸಭೆಯ ಮಾತುಕತೆಯಲ್ಲಿನ ವಿಷಯವಾಗಿದೆ ಎಂದು ಪ್ರಧಾನಿ ನಿನ್ನೆ ಹೇಳಿದ್ದರು.

ಸುಧಾರಿತ ಬಹುಪಕ್ಷೀಯತೆಯನ್ನು ಬೆಂಬಲಿಸಲು ಪುನರುಚ್ಛರಿಸಿ ಬಲಪಡಿಸಲು ಶೃಂಗಸಭೆ ಮುಖ್ಯ ಅವಕಾಶ ನೀಡಲಿದೆ. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಿಯಮ ಆಧಾರಿತ ಅಂತರರಾಷ್ಟ್ರೀಯ ಕ್ರಮವನ್ನು ಕಾಪಾಡಲು ಇದು ನಿರ್ಣಾಯಕವಾಗಿದೆ ಎಂದು ಮೋದಿ ಹೇಳಿದ್ದಾರೆ.

ಕಳೆದ 5 ವರ್ಷಗಳಲ್ಲಿ ಭಾರತದ ಬಲಿಷ್ಠ ಅಭಿವೃದ್ಧಿಶೀಲ ಅನುಭವಗಳನ್ನು ಹಂಚಿಕೊಳ್ಳಲು ಶೃಂಗಸಭೆ ವೇದಿಕೆಯಾಗಲಿದ್ದು ಮುಂದಿನ ದಿನಗಳಲ್ಲಿ ಸ್ಥಿರ ಬೆಳವಣಿಗೆಗೆ ಇದೊಂದು ದಾರಿಯಾಗಿ ಮುಂದುವರಿಯಲಿದೆ ಎಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com