1930ರ ವಿಮಾನ ಪತನ, ಮೇಯರ್, ಪತಿ-ಮಗಳು ಸೇರಿ 12 ಜನರ ಭೀಕರ ಸಾವು!

1930ರ ದಶಕದಲ್ಲಿ ಮೊದಲ ಬಾರಿಗೆ ನಿರ್ಮಾಣವಾಗಿದ್ದ ಅಮೆರಿಕನ್ ನಿರ್ಮಿತ ಅವಳಿ ಎಂಜಿನ್ ವಿಮಾನ ಪತನವಾಗಿದ್ದು ಮೇಯರ್ ಕುಟುಂಬ ಸೇರಿ 12 ಜನರ ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕೊಲೊಂಬಿಯಾ: 1930ರ ದಶಕದಲ್ಲಿ ಮೊದಲ ಬಾರಿಗೆ ನಿರ್ಮಾಣವಾಗಿದ್ದ ಅಮೆರಿಕನ್ ನಿರ್ಮಿತ ಅವಳಿ ಎಂಜಿನ್ ವಿಮಾನ ಪತನವಾಗಿದ್ದು ಮೇಯರ್ ಕುಟುಂಬ ಸೇರಿ 12 ಜನರ ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ನಡೆದಿದೆ.
1930ರ ದಶಕದಲ್ಲಿ ಮೊದಲ ಬಾರಿಗೆ ಉತ್ಪಾದಿಸಲ್ಪಟ್ಟ ಅಮೆರಿಕನ್ ನಿರ್ಮಿಸಿ ಅವಳಿ ಎಂಜಿನ್ ಪ್ರೊಪೆಲ್ಲರ್ ಪ್ಲೇನ್ ಡೌಗ್ಲಾನ್ DC-3 ವಿಮಾನವು ಸ್ಯಾನ್ ಜೋಸ್ ಡೆಲ್ ಗುವಿಯಾರೆ ಮತ್ತು ವಿಲ್ಲವಿಸೆನ್ಸಿಯೊ ನಗರಗಳ ನಡುವೆ ಪತನಗೊಂಡಿದೆ.
ವಿಮಾನದಲ್ಲಿ ತರೈರಾ ಮುನಿಸಿಪಾಲಿಟಿ ಮೇಯರ್ ಡೊರಿಸ್ ವಿಲೆಗಾಸ್, ಆಕೆಯ ಗಂಡ ಮತ್ತು ಮಗಳು, ವಿಮಾನದ ಮಾಲೀಕರು, ಪೈಲಟ್ ಜೈಮ್ ಕಾರಿಲ್ಲೋ, ಕೋ-ಪೈಲಟ್ ಜೈಮ್ ಹೆರೆರಾ ಮತ್ತು ಟೆಕ್ನಿಷನ್ ಸೇರಿ 12 ಜನ ಮೃತ ಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.
ವಿಮಾನ ಹಾರುತ್ತಿರುವಾಗ ಎಂಜಿನ್ ಫೇಲ್ ಆಗಿದೆ. ಪೈಲಟ್ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿದ್ದರಿಂದ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com