ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
ವಿದೇಶ
9 ನಿಮಿಷದಲ್ಲಿ ಆರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಮೆರಿಕ ಮಹಿಳೆ!
ಅಮೆರಿಕದಲ್ಲಿ ಮಹಿಳೆಯೊಬ್ಬರು 9 ನಿಮಿಷಗಳಲ್ಲಿ ಆರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಪ್ರಕರಣ ವರದಿಯಾಗಿದೆ.
ಹೌಸ್ಟನ್: ಅಮೆರಿಕದಲ್ಲಿ ಮಹಿಳೆಯೊಬ್ಬರು 9 ನಿಮಿಷಗಳಲ್ಲಿ ಆರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಪ್ರಕರಣ ವರದಿಯಾಗಿದೆ.
ಟೆಕ್ಸಾಸ್ ನ ಮಹಿಳಾ ಆಸ್ಪತ್ರೆಯಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಥೆಲ್ಮಾ ಚೈಕಾ ಎಂಬ ಮಹಿಳೆಯ ಹೊಟ್ಟೆ ಸಾಮಾನ್ಯ ಗರ್ಭಿಣಿಯ ಹೊಟ್ಟೆಗಿಂತ ದೊಡ್ಡದಾಗಿತ್ತು. ಈ ಮಹಿಳೆ ಶುಕ್ರವಾರ ಬೆಳಗ್ಗೆ 4:50-4:59ರ ಅವಧಿಯಲ್ಲಿ ಮೂರು ಜೊತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಮೊದಲು ಹುಟ್ಟಿದ ಎರಡು ಜೊತೆ ಅವಳಿಗಳು ಗಂಡಾಗಿದ್ದು, ನಂತರ ಹುಟ್ಟಿದ ಅವಳಿ ಹೆಣ್ಣು. ತಾಯಿ ಹಾಗೂ ಆರು ಮಕ್ಕಳು ಆರೋಗ್ಯವಾಗಿವೆ. ವಿಶೇಷ ಘಟಕದಲ್ಲಿ ಅವರನ್ನು ಇಡಲಾಗಿದೆ.
“ಈ ರೀತಿ ಪ್ರಕರಣಗಳು ವರದಿಯಾಗುವುದು ತುಂಬಾನೇ ಅಪರೂಪ. ವಿಶ್ವದಲ್ಲಿ ವರ್ಷಕ್ಕೆ ಇಂಥ ಒಂದು ಅಥವಾ ಎರಡು ಪ್ರಕರಣಗಳು ವರದಿಯಾಗಬಹುದು. ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ,” ಎಂದು ವೈದ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ