ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ತೈವಾನ್

ತೈವಾನ್ ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದೆ. ಈ ಸಂಬಂಧದ ಮಸೂದೆಯು ಸಂಸತ್ತಿನಲ್ಲಿ ಬಹುಮತದೊಂದಿಗೆ ಅಂಗೀಕಾರಗೊಂಡಿದ್ದು, ಇಂಥ ಮಸೂದೆಯನ್ನು ಅಂಗೀಕರಿಸಿದ ಏಷ್ಯಾದ ಮೊದಲ ದೇಶವಾಗಿದೆ.

ತೈಪೆ: ತೈವಾನ್  ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದೆ. ಈ ಸಂಬಂಧದ ಮಸೂದೆಯು ಸಂಸತ್ತಿನಲ್ಲಿ ಬಹುಮತದೊಂದಿಗೆ ಅಂಗೀಕಾರಗೊಂಡಿದ್ದು, ಇಂಥ ಮಸೂದೆಯನ್ನು ಅಂಗೀಕರಿಸಿದ ಏಷ್ಯಾದ ಮೊದಲ ದೇಶವಾಗಿದೆ.

2017 ರಲ್ಲಿ, ಸಲಿಂಗ ದಂಪತಿಗಳಿಗೆ ಕಾನೂನುಬದ್ಧವಾಗಿ ಮದುವೆಯಾಗಲು ಹಕ್ಕಿದೆ ಎಂದು ದ್ವೀಪ ರಾಷ್ಟ್ರದ ಸಾಂವಿಧಾನಿಕ ನ್ಯಾಯಾಲಯವು ತೀರ್ಪು ನೀಡಿತು. ಸಂಸತ್ತಿಗೆ ಎರಡು ವರ್ಷಗಳ ಗಡುವು ನೀಡಲಾಯಿತು ಮತ್ತು ಮೇ 24 ರೊಳಗೆ ಬದಲಾವಣೆಗಳನ್ನು ರವಾನಿಸಬೇಕಾಯಿತು.

ಸಲಿಂಗ ವಿವಾಹ ಕಾನೂನು ಬದ್ಧಗೊಳಿಸುವ ಮೂರು ಪ್ರತ್ಯೇಕ ಮಸೂದೆಗಳ ಬಗ್ಗೆ ಶಾಸನ ರಚನಕಾರರು, ಪ್ರಗತಿಪರರು, ಚರ್ಚಿಸಿದ್ದು, ನಂತರ ಬಹುಮತದೊಂದಿಗೆ ಮಸೂದೆ ಅಂಗೀಕಾರಗೊಂಡಿದೆ.

ಭಾರೀ ಮಳೆಯ ಹೊರತಾಗಿಯೂ ಸಂಸತ್ತಿನ ಹೊರಗೆ ಸಾವಿರಾರು ಸಲಿಂಗಕಾಮ ಹಕ್ಕುಗಳ ಬೆಂಬಲಿಗರು ನೆರದಿದ್ದರು. ಈ ಸುದ್ದಿ ಹರಡುತ್ತಿದ್ದಂತೆ ಅವರು ಸಂಭ್ರಮಾಚರಣೆ ನಡೆಸಿದರು.

Related Stories

No stories found.

Advertisement

X
Kannada Prabha
www.kannadaprabha.com