ಸಾಂದರ್ಭಿಕ ಚಿತ್ರ
ವಿದೇಶ
ಸಮಾಧಿಯಾಗಿದ್ದ ನವಜಾತ ಶಿಶುವನ್ನು ರಕ್ಷಿಸಿ ಹೀರೋ ಆದ 'ನಾಯಿ'!
ಹದಿಹರೆಯದ ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಸಮಾಧಿ ಮಾಡಿದ್ದಳು, ಪಿಂಗ್ ಪಾಂಗ್ ಎಂಬ ಹೆಸರಿನ ನಾಯಿಯೊಂದು ಸರಿಯಾದ ಸಮಯಕ್ಕೆ ...
ಬ್ಯಾಂಕಾಂಕ್: ಹದಿಹರೆಯದ ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಸಮಾಧಿ ಮಾಡಿದ್ದಳು, ಪಿಂಗ್ ಪಾಂಗ್ ಎಂಬ ಹೆಸರಿನ ನಾಯಿಯೊಂದು ಸರಿಯಾದ ಸಮಯಕ್ಕೆ ಜಾಗ್ರತೆ ವಹಿಸಿದ ಪರಿಣಾಮ ಮಗು ಬದುಕುಳಿದಿದೆ.
ನವಜಾತ ಶಿಶುವೊಂದು ಚುಂಪಾಂಗ್ ಜಿಲ್ಲೆಯ ತೋಟವೊಂದರ ಕೊಳಕು ಪದರದ ಕೆಳಗೆ ಮಲಗಿತ್ತು, ಇದನ್ನು ಗಮನಿಸಿದ ನಾಯಿ ಆ ಸ್ಥಳದಲ್ಲಿ ಸುತ್ತುತ್ತಾ ಬೊಗಳುತ್ತಿತ್ತು. ತನ್ನ ಮಾಲೀಕ ಹಸು ಕಾಯಲು ಹೋಗಿದ್ದ ಆತನಿಗೆ ವಿಷಯ ತಿಳಿಸಲು ನಾಯಿ ಬೊಗಳುತ್ತಿತ್ತು.
ತಾಯಿಯು ಮಗುವನ್ನು ಸಮಾಧಿ ಮಾಡಿ ಹೋದ ಕೆಲ ಸಮಯದಲ್ಲೇ ನಾಯಿ ಪತ್ತೆ ಹಚ್ಚಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೂಡಲೇ ಮಗುವನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಲಾಗಿದೆ, ಗಂಡು ಮಗು ಆರೋಗ್ಯವಾಗಿದೆ, ಕೊಲೆ ಪ್ರಯತ್ನ ಕೇಸ್ ನಲ್ಲಿ ಮಗುವಿನ ತಾಯಿ ವಿರುದ್ಧ ಕೇಸ್ ದಾಖಲಾಗಿದೆ.
ಮಗುವನ್ನು ಬಿಟ್ಟುಹೋದವಳು 15 ವರ್ಷ ವಯಸ್ಸಿನವಳಾಗಿದ್ದಾಳೆ. ತನ್ನ ಪೋಷಕರು ಕೋಪಗೊಳ್ಳುತ್ತಾರೆ ಎಂಬ ಕಾರಣಕ್ಕಾಗಿ ಆಕೆ, ಮಗುವಿಗೆ ಜನ್ಮ ನೀಡಿದ ನಂತರ ಮಗುವನ್ನು ಅಲ್ಲಿ ಸಮಾಧಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಂಗ್ ಪಾಂಗ್ ನ ಈ ಕೆಲಸದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹೀರೋ ಆಗಿದ್ದಾನೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ