ಸಹೋದರ ಮಹಿಂದಾ ರಾಜಪಕ್ಸೆಯನ್ನು ಲಂಕಾ ಪ್ರಧಾನಿಯಾಗಿ ಆಯ್ಕೆ ಮಾಡಿದ ಶ್ರೀಲಂಕಾ ಅಧ್ಯಕ್ಷ

ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಬುಧವಾರ ರಾಜೀನಾಮೆ ನೀಡಲಿದ್ದು, ರಾಜೀನಾಮೆ ಬೆನ್ನಲ್ಲೇ ನೂತನ ಅಧ್ಯಕ್ಷ ಗೊಟಬಾಯ ರಾಜಪಕ್ಸ್ ಅವರು ತಮ್ಮ ಹಿರಿಯ ಸಹೋದರ ಮಹಿಂದಾ ರಾಜಪಕ್ಸೆ ಅವರನ್ನು...
ಮಹಿಂದಾ ರಾಜಪಕ್ಸೆ - ಗೋಟಬಯ ರಾಜಪಕ್ಸೆ
ಮಹಿಂದಾ ರಾಜಪಕ್ಸೆ - ಗೋಟಬಯ ರಾಜಪಕ್ಸೆ

ಕೊಲಂಬೋ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಬುಧವಾರ ರಾಜೀನಾಮೆ ನೀಡಲಿದ್ದು, ರಾಜೀನಾಮೆ ಬೆನ್ನಲ್ಲೇ ನೂತನ ಅಧ್ಯಕ್ಷ ಗೊಟಬಾಯ ರಾಜಪಕ್ಸ್ ಅವರು ತಮ್ಮ ಹಿರಿಯ ಸಹೋದರ ಮಹಿಂದಾ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ.

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಗೋಟಬಯ ರಾಜಪಕ್ಸೆ ಅವರು ನಿರೀಕ್ಷೆಯಂತೆ ಇಂದು ಶ್ರೀಲಂಕಾದ ಮಾಜಿ ಅಧ್ಯಕ್ಷ, ತಮ್ಮ ಹಿರಿಯ ಅಣ್ಣ ಮಹಿಂದಾಾ ರಾಜಪಕ್ಸೆಯನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಸದ್ಯ ಪ್ರತಿಪಕ್ಷದ ನಾಯಕರಾಗಿರುವ ಮಹಿಂದಾ ರಾಜಪಕ್ಸೆ ಅವರು ಶೀಘ್ರದಲ್ಲೇ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಎಎಫ್ ಪಿ ವರದಿ ಮಾಡಿದೆ.

ಶಕಗಳ ಹಿಂದೆ ಶ್ರೀಲಂಕಾದ ನಾಗರಿಕರ ಯುದ್ಧ, ತಮಿಳ್ ಟೈಗರ್ಸ್ ಅನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಂದು ಶ್ರೀಲಂಕಾದ ಅಧ್ಯಕ್ಷರಾಗಿದ್ದ ಮಹೀಂದಾ ರಾಜಪಕ್ಸೆ, ಕಿರಿಯ ಸಹೋದರ ಗೋಟಬಯ ಅವರನ್ನು ಸೇನೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು. ನಂತರ ಲಂಕಾ ಸೇನಾ ಪಡೆ ಎಲ್ ಟಿಟಿ ಇ ಪ್ರಭಾಕರ್ ಹಾಗೂ ಪಡೆಯನ್ನು ಹೊಡೆದುರುಳಿಸುವ ಮೂಲಕ ತಮಿಳ್ ಟೈಗರ್ಸ್ ಅಟ್ಟಹಾಸವನ್ನು ಹೆಡೆಮುರಿಕಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com