ನಾನು ಸಲಿಂಗಕಾಮಿಯಾಗಲು ಆಪಲ್ ಕಾರಣ: ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ! 

ನಾನು ಸಲಿಂಗಕಾಮಿಯಾಗುವುದಕ್ಕೆ ಆಪಲ್ ಮೊಬೈಲ್ ಕಾರಣ, ಇದರ ಪರಿಣಾಮವಾಗಿ ನೈತಿಕ ಹಾಗೂ ಮಾನಸಿಕ ಹಾನಿಗೆ ಪರಿಹಾರ ಕೊಡಿಸಬೇಕೆಂದು ವ್ಯಕ್ತಿಯೊಬ್ಬ ಕೋರ್ಟ್ ಮೊರೆ ಹೋಗಿದ್ದಾನೆ! 
ನಾನು ಸಲಿಂಗಕಾಮಿಯಾಗಲು ಆಪಲ್ ಕಾರಣ: ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ!
ನಾನು ಸಲಿಂಗಕಾಮಿಯಾಗಲು ಆಪಲ್ ಕಾರಣ: ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ!
Updated on

ಮಾಸ್ಕೋ: ನಾನು ಸಲಿಂಗಕಾಮಿಯಾಗುವುದಕ್ಕೆ ಆಪಲ್ ಮೊಬೈಲ್ ಕಾರಣ, ಇದರ ಪರಿಣಾಮವಾಗಿ ನೈತಿಕ ಹಾಗೂ ಮಾನಸಿಕ ಹಾನಿಗೆ ಪರಿಹಾರ ಕೊಡಿಸಬೇಕೆಂದು ವ್ಯಕ್ತಿಯೊಬ್ಬ ಕೋರ್ಟ್ ಮೊರೆ ಹೋಗಿದ್ದಾನೆ! 

ರಷ್ಯಾದಲ್ಲಿ ಈ ವಿಲಕ್ಷಣ ಘಟನೆ ವರದಿಯಾಗಿದೆ. ಕೋರ್ಟ್ ಮೊರೆ ಹೋಗಿರುವ ವ್ಯಕ್ತಿಯ ಪ್ರಕಾರ ಐಫೋನ್ ಆಪ್ ನಿಂದ ಆತ ಸಲಿಂಗಕಾಮಿಯಾಗಿದ್ದಾನಂತೆ! ಇದಕ್ಕಾಗಿ ಕೋರ್ಟ್ ಆತನಿಗೆ 15,000 ಅಮೆರಿಕನ್ ಡಾಲರ್ ಪರಿಹಾರ ಕೊಡಿಸಬೇಕಂತೆ!  

ಆಗಿದ್ದಿಷ್ಟು: ಇಂದು ಕೋರ್ಟ್ ಮೆಟ್ಟಿಲೇರಿರುವ ವ್ಯಕ್ತಿ ಇತ್ತೀಚೆಗೆ ತಾನು ಬಿಟ್ ಕಾಯಿನ್ ಗಾಗಿ ಆರ್ಡರ್ ನೀಡಿದ್ದ ಆದರೆ ಆತನಿಗೆ ಅದರ ಬದಲು ಗೇಕಾಯಿನ್ (GayCoin) ಎಂಬ ಕ್ರಿಪ್ಟೋಕರೆನ್ಸಿ ಸ್ಮಾರ್ಟ್ ಫೋನ್ ಆಪ್ ಮೂಲಕ ತಲುಪಿತ್ತು.

ಗೇ ಕಾಯಿನ್ ನ್ನು ತಲುಪಿಸಿದಾಗ ಅದರ ಮೇಲೆ "Don't judge until you try," ಎಂಬ ಸಂದೇಶ ಬಂದಿತ್ತು. ಇದೇ ಸಂದೇಶವನ್ನು ನಂಬಿಕೊಂಡು ನಿಜವಾಗಿಯೂ ನಾನು ಪ್ರಯೋಗ ಮಾಡದೇ ಹೇಗೆ ನಿರ್ಧಾರ ಮಾಡಲು ಸಾಧ್ಯ? ಎಂದು ಸಲಿಂಗಕಾಮ ಸಂಬಂಧವನ್ನು ಬೆಳೆಸಲು ಯತ್ನಿಸಿದೆ. ಈಗ ನನಗೆ ಓರ್ವ ಬಾಯ್ ಫ್ರೆಂಡ್ ಇದ್ದಾನೆ. ಇದನ್ನು ನನ್ನ ಪೋಷಕರಿಗೆ ಹೇಗೆ ತಿಳಿಸಲಿ? ನನ್ನ ಜೀವನ ಸಾಮಾನ್ಯ ಸ್ಥಿತಿಗೆ ಬರಲಾರದಷ್ಟುಅತ್ಯಂತ ಕೆಟ್ಟದಾಗಿ ಬದಲಾಗಿದೆ. 

ಆಪಲ್ ಫೋನ್ ನಿಂದ ನಾನು ಸಲಿಂಗಕಾಮಕ್ಕೆ ತುತ್ತಾದೆ. ಇದರಿಂದಾಗಿ ನೈತಿಕ ಹಾಗೂ ಮಾನಸಿಕ ಹಾನಿ ಉಂಟಾಗಿದೆ ಎಂದು ಆರೋಪಿಸಿದ್ದಾನೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com