ಮೂವರು ಸಾಧಕರಿಗೆ ವೈದ್ಯಕೀಯ ನೋಬೆಲ್ ಗೌರವ

ವೈದ್ಯಕೀಯ ಶಾಸ್ತ್ರಕ್ಕಾಗಿನ 2019 ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು ವಿಲಿಯಂ ಜಿ ಕೈಲಿನ್ ಜೂನಿಯರ್, ಸರ್ ಪೀಟರ್ ಜೆ ರಾಟ್‌ಕ್ಲಿಫ್ ಮತ್ತು ಗ್ರೆಗ್ ಎಲ್ ಸೆಮೆನ್ಜಾ ಅವರುಗಳು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂವರು ಸಾಧಕರಿಗೆ ವೈದ್ಯಕೀಯ ನೋಬೆಲ್ ಗೌರವ
ಮೂವರು ಸಾಧಕರಿಗೆ ವೈದ್ಯಕೀಯ ನೋಬೆಲ್ ಗೌರವ
Updated on

ವೈದ್ಯಕೀಯ ಶಾಸ್ತ್ರಕ್ಕಾಗಿನ 2019 ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು ವಿಲಿಯಂ ಜಿ ಕೈಲಿನ್ ಜೂನಿಯರ್, ಸರ್ ಪೀಟರ್ ಜೆ ರಾಟ್‌ಕ್ಲಿಫ್ ಮತ್ತು ಗ್ರೆಗ್ ಎಲ್ ಸೆಮೆನ್ಜಾ ಅವರುಗಳು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜೀವಕೋಶಗಳು ಹೇಗೆ ಗ್ರಹಿಸುತ್ತವೆ ಹಾಗೂ ಹೇಗೆ ಆಮ್ಲಜನಕದ ಲಭ್ಯತೆಗೆ ಹೊಂದಿಕೊಳ್ಳುತ್ತವೆ ಎಂಬ ಆವಿಷ್ಕಾರಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಜೀವಕೋಶಗಳು ಆಮ್ಲಜನಕದ ಲಭ್ಯತೆಯನ್ನು ಹೇಗೆ ಗ್ರಹಿಸುತ್ತವೆ ಮತ್ತು ಅದಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಸಂಶೋಧಕರು ಪರಿಶೀಲಿಸಿ ಕಂಡುಕೊಂಡಿದ್ದಾರೆ. "ಆಮ್ಲಜನಕದ ಮೂಲಭೂತ ಪ್ರಾಮುಖ್ಯತೆಯನ್ನು ಶತಮಾನಗಳಿಂದ ಅರ್ಥಮಾಡಿಕೊಳ್ಳಲಾಗಿದೆ, ಆದರೆ ಜೀವಕೋಶಗಳು ಆಮ್ಲಜನಕದ ಮಟ್ಟದಲ್ಲಿನ ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದು ಬಹುಕಾಲದಿಂದ ಇದ್ದ ಪ್ರಶ್ನೆಯಾಗಿತ್ತು. ಈ ವರ್ಷದ ನೊಬೆಲ್ ಪ್ರಶಸ್ತಿ ಪುರಸ್ಕೃತರು ಈ ಕುರಿತಂತೆ ಉತ್ತರ ಹುಡುಕಿದ್ದಾರೆ. ಆಮ್ಲಜನಕ ಪೂರೈಕೆಯಲ್ಲಿನ ವ್ಯತ್ಯಾಸಗಳಿಗೆ ಜೀವಕೋಶಗಳು ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಅವರು ವಿವರಿಸುವಲ್ಲಿ ಸಫಲವಾಗಿದ್ದಾರೆ"ನೊಬೆಲ್ ಪ್ರಶಸ್ತಿ ವಿಜೇತರ ಸಂಶೋಧನೆ ಕುರಿತ ವಿವರಣೆ ಹೇಳಿದೆ.

ಆಮ್ಲಜನಕ ಸಂವೇದನೆಯು ಹೆಚ್ಚಿನ ಸಂಖ್ಯೆಯ ರೋಗಗಳಿ ಮೂಲ ಕಾರಣವಾಗಿದೆ./ಈ ಸಾಲಿನ ನೊಬೆಲ್ ವಿಜೇತರು ನಡೆಸಿರುವ ಸಂಶೋಧನೆ ರೀರ ವಿಜ್ಞಾನಕ್ಕೆ ಮೂಲಭೂತ ಪ್ರಾಮುಖ್ಯತೆಯನ್ನು ಖಚಿತಪಡಿಸಿದೆ. ರಕ್ತಹೀನತೆ, ಕ್ಯಾನ್ಸರ್ ಮತ್ತು ಇತರ ಅನೇಕ ಕಾಯಿಲೆಗಳ ವಿರುದ್ಧ ಹೋರಾಡಲು ಹೊಸ ತಂತ್ರಗಳ ಅನುಸರಿಸುವಿಕೆಗೆ  ದಾರಿ ಮಾಡಿಕೊಟ್ಟಿದೆ.

ಪ್ರಶಸ್ತಿಯ ಮೊತ್ತ 9 ಮಿಲಿಯನ್ ಸ್ವೀಡಿಷ್ ಕ್ರೌನ್ಸ್ ಗಳನ್ನು ಒಳಗೊಂಡಿದೆ ($ 913000).

ಗೆಡ್ಡೆಗಳ ಮೇಲೆ ದಾಳಿ ಮಾಡಲು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಳಸುವ ಹೊಸ ಕ್ಯಾನ್ಸರ್ ಚಿಕಿತ್ಸೆಗೆ ಕಾರಣವಾದ ಆವಿಷ್ಕಾರಗಳಿಗಾಗಿ ಕಳೆದ ವರ್ಷದ ಬಹುಮಾನವನ್ನು ಟೆಕ್ಸಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇಮ್ಸ್ ಪಿ ಆಲಿಸನ್ ಮತ್ತು ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ತಸುಕು ಹೊಂಜೊ ಹಂಚಿಕೊಂಡಿದ್ದಾರೆ.

ಕಳೆದ 1901ರಿಂದ ನೀಡಲಾಗುವ ವಾರ್ಷಿಕ ಬಹುಮಾನವಾದ ನೊಬೆಲ್, ಮಾನವಕುಲದ ಅನುಕೂಲಕ್ಕಾಗಿ ಪ್ರಮುಖ ಆವಿಷ್ಕಾರಗಳನ್ನು ಮಾಡಿದ ವಿಜ್ಞಾನಿಗಳನ್ನು ಗುರುತಿಸುತ್ತದೆ.

ಪ್ರತಿ ವರ್ಷ ನೀಡಲಾಗುವ ನೊಬೆಲ್ ಬಹುಮಾನಗಳಲ್ಲಿ ಔಷಧಿ ವಿಭಾಗಕ್ಕೆ ಮೊದಲು ಪ್ರಶಸ್ತಿ ಪ್ರಕಟಿಸಲಾಗುತ್ತದೆ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com