ನಿಯಮಾವಳಿ ಬ್ರೇಕ್! ಕೆನಡಾ, ಬ್ರಿಟೀಷ್ ಲೇಖಕಿಯರಿಗೆ ಒಲಿದ ಬೂಕರ್, ರಶ್ದಿಗೆ ನಿರಾಶೆ

ಇದೇ ಮೊದಲ ಬಾರಿಗೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿಯನ್ನು ಇಬ್ಬರು ಲೇಖಕಿಯರಿಗೆ ಜಂಟಿಯಾಗಿ ನೀಡಲಾಗಿದೆ. ಕೆನಡಾದ ಲೇಖಕಿ ಮಾರ್ಗರೇಟ್ ಅಟ್‌ವುಡ್ ಮತ್ತು ಬ್ರಿಟಿಷ್ ಬರಹಗಾರ್ತಿ ಬರ್ನಾರ್ಡಿನ್ ಎವಾರಿಸ್ಟೊ ಈ ಬಾರಿಯ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಈ ಸಾಲಿನ ಬೂಕರ್ ಪ್ರಶಸ್ತಿ ವಿಜೇತರು
ಈ ಸಾಲಿನ ಬೂಕರ್ ಪ್ರಶಸ್ತಿ ವಿಜೇತರು

ಲಂಡನ್: ಇದೇ ಮೊದಲ ಬಾರಿಗೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿಯನ್ನು ಇಬ್ಬರು ಲೇಖಕಿಯರಿಗೆ ಜಂಟಿಯಾಗಿ ನೀಡಲಾಗಿದೆ. ಕೆನಡಾದ ಲೇಖಕಿ ಮಾರ್ಗರೇಟ್ ಅಟ್‌ವುಡ್ ಮತ್ತು ಬ್ರಿಟಿಷ್ ಬರಹಗಾರ್ತಿ ಬರ್ನಾರ್ಡಿನ್ ಎವಾರಿಸ್ಟೊ ಈ ಬಾರಿಯ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಈ ಸಾಲಿನಲ್ಲಿ ಪ್ರಶಸ್ತಿಯನ್ನು ಇಬ್ಬರು ಲೇಖಕಿಯರಿಗೆ ಹಂಚಿಕೆ ಮಾಡುವ ಮೂಲಕ ಜ್ಯೂರಿಗಳು ಇದುವರೆಗಿನ ಪ್ರಶಸ್ತಿ ಆಯ್ಕೆ ನಿಯಮಾವಳಿಗಳನ್ನು ಮುರಿದಿದ್ದಾರೆ. 

ಬೂಕರ್ ಪ್ರಶಸ್ತಿ ಅಂತಿಮ ಸುತ್ತಿಗೆ ಭಾರತೀಯ ಮೂಲದ ಬ್ರಿಟೀಷ್ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರ 'Quichotte' ಸಹ ಸೇರಿತ್ತು. ಆದರೆ ಪ್ರಶಸ್ತಿ ಲಭಿಸದೆ ನಿರಾಶೆ ಅನುಭವಿಸುವಂತಾಗಿದೆ.

79 ರ ವಯೀಓಮಾನದ ಅಟ್‌ವುಡ್ ಈ ಪ್ರಶಸ್ತಿ ಪಡೆದ ಅತ್ಯಂತ ಹಿರಿಯರೆನಿಸಿಕೊಂಡಿದ್ದರೆ 60 ವರ್ಷದ ಎವಾರಿಸ್ಟೊ 1969ರ ನಂತರ ಈ ಪ್ರತಿಷ್ಠಿತ ಬಹುಮಾನ ಪಡೆದ ಮೊದಲ ಕಪ್ಪು ಮಹಿಳೆ. ಅಟ್‌ವುಡ್ ಅವರ  'The Testament' ಹಾಗೂ ಎವಾರಿಸ್ಟೊ ಅವರ  'Girl, Woman, Other' ಕೃತಿಗಳಿಗೆ ಈ ಸಾಲಿನ ಪ್ರಶಸ್ತಿ ಲಭಿಸಿದೆ.

ಬಹುಮಾನವನ್ನು ವಿಂಗಡಿಸಬಾರದು ಎಂದು ಬುಕರ್ ನಿಯಮಗಳು ಹೇಳುತ್ತವೆ, ಆದರೆ ಜ್ಯೂರಿ ಮಾತ್ರ ಅಟ್‌ವುಡ್ ಹಾಗೂ ಎವಾರಿಸ್ಟೊ ಅವರುಗಳ ಕೃತಿಗಳಲ್ಲಿ ಸಾಮ್ಯತೆಯನ್ನು ಹಾಗೂ ಅವುಗಳನ್ನು ಬೇರ್ಪಡಿಸಲು ಸಾಧ್ಯವಾಗದೇ ಹೋಗುವಿಕೆಯನ್ನು ಪ್ರತಿಪಾದಿಸಿದ್ದಾರೆ. ಈ ಮೂಲಕ 1992 ರಲ್ಲಿ ಬೂಕರ್ ಪ್ರಶಸ್ತಿ ನಿಯಮಾವಳಿ ಬದಲಾದ ನಂತರ ಇದೇ ಮೊದಲ ಬಾರಿಗೆ ಇಬ್ಬರು ಲೇಖಕಿಯರು ಬಹುಮಾನ ಪಡೆದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com