'ವಿಶ್ವದ ಅತಿ ಶ್ರೀಮಂತ' ಪಟ್ಟ ಕಳೆದುಕೊಂಡ ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್: ಮತ್ತೆ ಬಿಲ್ ಗೇಟ್ಸ್ ನಂಬರ್ 1

ವಿಶ್ವದ ಅತ್ಯಂತ ಆಗರ್ಭ ಶ್ರೀಮಂತ ಬಿರುದನ್ನು ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಕಳೆದುಕೊಂಡಿದ್ದಾರೆ. ಇದೀಗ ಆ ಸ್ಥಾನ ಬಿಲ್ ಗೇಟ್ಸ್ ಪಾಲಾಗಿದೆ. 
ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್
ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್

ಸೀಟಲ್: ವಿಶ್ವದ ಅತ್ಯಂತ ಆಗರ್ಭ ಶ್ರೀಮಂತ ಬಿರುದನ್ನು ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಕಳೆದುಕೊಂಡಿದ್ದಾರೆ. ಇದೀಗ ಆ ಸ್ಥಾನ ಬಿಲ್ ಗೇಟ್ಸ್ ಪಾಲಾಗಿದೆ. 


ಪ್ರಸಕ್ತ ಹಣಕಾಸು ವರ್ಷದ ಕಳೆದ ತ್ರೈಮಾಸಿಕದಲ್ಲಿ ಬೆಜೋಸ್ ಸುಮಾರು 7 ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದ್ದಾರೆ.


ನಿನ್ನೆ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಅಮೆಜಾನ್ ಷೇರುಗಳ ಬೆಲೆ ಶೇಕಡಾ 7ರಷ್ಟು ಕುಸಿದು ಬೆಜೋಸ್ ಅವರ ಕಂಪೆನಿ ಆದಾಯ 103.9 ಶತಕೋಟಿ ಡಾಲರ್ ನಷ್ಟು ಕಡಿಮೆಯಾಯಿತು.


ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಸಂಪತ್ತಿನ ಮೌಲ್ಯ ಈಗ 105.7 ಶತಕೋಟಿ ಡಾಲರ್ ಆಗಿದೆ. ಸತತ 24 ವರ್ಷಗಳಿಂದ ಕಳೆದ ವರ್ಷದವರೆಗೂ ಬಿಲ್ ಗೇಟ್ಸ್ ಅವರೇ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿದ್ದರು. ಕಳೆದ ವರ್ಷ ಬಿಜೋಸ್ ಅವರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ್ದರು. ಆಗ ಅವರ ಒಟ್ಟಾರೆ ಸಂಪತ್ತಿನ ಮೌಲ್ಯ 160 ಶತಕೋಟಿ ಡಾಲರ್ ಆಗಿತ್ತು.


2017ರ ನಂತರ ತ್ರೈಮಾಸಿಕ ಅವಧಿಯ ಆದಾಯದಲ್ಲಿ ಅಮೆಜಾನ್ ಆದಾಯ ಶೇಕಡಾ 26ರಷ್ಟು ಇಳಿಕೆ ಕಂಡುಬಂದಿದೆ. ವಿಶ್ವದ ಅತಿ ಶ್ರೀಮಂತರ ಫೋರ್ಬ್ಸ್ ಮ್ಯಾಗಜಿನ್ ಪಟ್ಟಿಯಲ್ಲಿ ಬಿಲ್ ಗೇಟ್ಸ್ 1987ರಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆಗ ಅವರ ಆಸ್ತಿ ಮೌಲ್ಯ 1.25 ಶತಕೋಟಿ ಡಾಲರ್ ಆಗಿತ್ತು.


ಫೋರ್ಬ್ಸ್ ಪಟ್ಟಿಗೆ ಬೆಜೊಸ್ ಸೇರ್ಪಡೆಯಾಗಿದ್ದು 1998ರಲ್ಲಿ. ಅದರ ಹಿಂದಿನ ವರ್ಷವಷ್ಟೇ ಅದು ಸಾರ್ವಜನಿಕ ಕ್ಷೇತ್ರದಲ್ಲಿ ವಹಿವಾಟು ಆರಂಭಿಸಿದ್ದು. ಆಗ ಕಂಪೆನಿಯ ಒಟ್ಟಾರೆ ಆದಾಯ 1.6 ಶತಕೋಟಿ ಡಾಲರ್ ಆಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com