ಭಾರತ ಮತ್ತು ಸೌದಿ ಅರೇಬಿಯಾ, ರಕ್ಷಣಾ ಕೈಗಾರಿಕೆಗಳಲ್ಲಿನ ಭದ್ರತೆ ಹಾಗೂ ಒಪ್ಪಂದದಲ್ಲಿ ಹೊಸ ಎತ್ತರಕ್ಕೆ ಏರಲಿದೆ- ಮೋದಿ

ಭಾರತ ಮತ್ತು ಸೌದಿ ಅರೇಬಿಯಾ,'ಭದ್ರತಾ ಸಹಕಾರ ಮತ್ತು ರಕ್ಷಣಾ ಕೈಗಾರಿಕೆಗಳ ಸಹಯೋಗದ ಬಗ್ಗೆ ಒಪ್ಪಂದ ಮಾಡಿಕೊಳ್ಳಲಿವೆ' ಉಭಯ ದೇಶಗಳ ನಡುವೆ, ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ಸಹಕಾರ ಪ್ರಗತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ರಿಯಾದ್ : ಭಾರತ ಮತ್ತು ಸೌದಿ ಅರೇಬಿಯಾ,'ಭದ್ರತಾ ಸಹಕಾರ ಮತ್ತು ರಕ್ಷಣಾ ಕೈಗಾರಿಕೆಗಳ ಸಹಯೋಗದ ಬಗ್ಗೆ ಒಪ್ಪಂದ ಮಾಡಿಕೊಳ್ಳಲಿವೆ' ಉಭಯ ದೇಶಗಳ ನಡುವೆ, ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ಸಹಕಾರ ಪ್ರಗತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಮ್ಮ ಸಹಕಾರ ವಿಷಯ, ಅದರಲ್ಲೂ ಭಯೋತ್ಪಾದನೆ ನಿಗ್ರಹ, ಭದ್ರತೆ ಮತ್ತು ವ್ಯೂಹಾತ್ಮಕ ವಿಷಯಗಳಲ್ಲಿ ಬಹಳ ಚೆನ್ನಾಗಿದೆ. ಎಂದು ಮೋದಿ ಅವರು ಅರಬ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 ನಾವು ರಕ್ಷಣಾ ಸಹಕಾರದ ಜಂಟಿ ಸಮಿತಿಯನ್ನು ಹೊಂದಿದ್ದೇವೆ, ಅದು ನಿಯಮಿತ ಸಭೆಗಳನ್ನು ನಡೆಸುತ್ತದೆ. ರಕ್ಷಣಾ ಮತ್ತು ಭದ್ರತಾ ಕ್ಷೇತ್ರದಲ್ಲಿ ಪರಸ್ಪರ ಆಸಕ್ತಿ ಮತ್ತು ಸಹಕಾರದ ಹಲವಾರು ಕ್ಷೇತ್ರಗಳನ್ನು ನಾವು ಗುರುತಿಸಿದ್ದೇವೆ. ಭದ್ರತಾ ಸಹಕಾರ ಕುರಿತು ನಾವು ಒಪ್ಪಂದಗಳನ್ನು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ. ರಕ್ಷಣಾ ಕೈಗಾರಿಕೆಗಳಲ್ಲಿನ ಸಹಯೋಗ, ಮತ್ತು ಉಭಯ ದೇಶಗಳ ನಡುವೆ ಸಮಗ್ರ ಭದ್ರತಾ ಸಂವಾದ ವ್ಯವಸ್ಥೆಯನ್ನು ನಡೆಸಲು ಸಹ ಒಪ್ಪಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಮಧ್ಯಪ್ರಾಚ್ಯ ಅಥವಾ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಪ್ರಕ್ಷುಬ್ಧತೆ ಮತ್ತು ಈ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಭಾರತ ವಹಿಸಬಹುದಾದ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, " ಈ ಪ್ರಮುಖ ಕ್ಷೇತ್ರದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ತರಲು ಎಲ್ಲಾ ಮಧ್ಯಸ್ಥಗಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮಾತುಕತೆ ಪ್ರಕ್ರಿಯೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಸಂಘರ್ಷಗಳನ್ನು ಪರಿಹರಿಸಲು ಸಮತೋಲಿತ ವಿಧಾನದ ಅಗತ್ಯವಿದೆ ಎಂದು ನಾವು ನಂಬುತ್ತೇವೆ, ಆದರೆ ಸಾರ್ವಭೌಮತ್ವದ ತತ್ವಗಳನ್ನು ಗೌರವಿಸುತ್ತೇವೆ ಮತ್ತು ಪರಸ್ಪರರ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಭಾರತವು ಈ ಪ್ರದೇಶದ ಎಲ್ಲಾ ದೇಶಗಳೊಂದಿಗೆ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧವನ್ನು ಹಂಚಿಕೊಳ್ಳುತ್ತದೆ, 8 ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಭಾರತೀಯರು   ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಸವಾಲುಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರಧಾನಿ ಮೋದಿ, ಆರ್ಥಿಕ ಅನಿಶ್ಚಿತತೆಯು ಅಸಮತೋಲಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗಳ ಒಂದು ಅಂಗವಾಗಿದೆ. ಜಿ 20 ಯೊಳಗೆ ಭಾರತ ಮತ್ತು ಸೌದಿ ಅರೇಬಿಯಾವು ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

"ಜಾಗತಿಕ ಆರ್ಥಿಕ ದೃಷ್ಟಿಕೋನವು ಭಾರತದಂತಹ ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ಒಪ್ಪತದ ಹಾದಿಯನ್ನು ಬಲವಾಗಿ ಅವಲಂಬಿಸಿದೆ. ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನನ್ನ ಭಾಷಣದಲ್ಲಿ ನಾನು ಹೇಳಿದಂತೆ, ಎಲ್ಲರ ಬೆಳವಣಿಗೆಗೆ ನಮಗೆ ಎಲ್ಲರ ನಂಬಿಕೆಯೊಂದಿಗೆ ಸಾಮೂಹಿಕ ಪ್ರಯತ್ನಗಳು ಬೇಕು ಎಂದು ನಾವು ಪ್ರಾಮಾಣಿಕವಾಗಿ ನಂಬುತ್ತೇವೆ ಎಂದರು.

ಮುಂದಿನ ವರ್ಷ ಜಿ 20 ಶೃಂಗಸಭೆಯನ್ನು ಸೌದಿ ಅರೇಬಿಯಾ ಆಯೋಜಿಸಲಿದೆ ಮತ್ತು ಭಾರತವು 2022 ರಲ್ಲಿ ಆತಿಥ್ಯ ವಹಿಸಲಿದೆ, ಇದು ನಮ್ಮ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವೂ ಆಗಿದೆ ಎಂದರು.

ಸೌದಿ ಅರೇಬಿಯಾ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರ ಅಧಿಕೃತ ಆಹ್ವಾನದ ಮೇರೆಗೆ ಪ್ರಧಾನಿ ಸೌದಿ ಅರೇಬಿಯಾದ
 ರಿಯಾದ್‌ನಲ್ಲಿ ನಡೆಯಲಿರುವ ಭವಿಷ್ಯದ ಹೂಡಿಕೆ ಸಂಸ್ಥೆ ವೇದಿಕೆಯ ಮೂರನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಕಾರ್ಯತಂತ್ರದ ಸಹಭಾಗಿತ್ವ ಮಂಡಳಿಯ ಪ್ರಮುಖ ಒಪ್ಪಂದವನ್ನು ಪ್ರಧಾನ ಮಂತ್ರಿಯ ಭೇಟಿಯ ಸಮಯದಲ್ಲಿ ತಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com