'ಸಾಧು' ಮನಮೋಹನ್ ಸಿಂಗ್ ಸಹ ಪಾಕ್ ಮೇಲೆ ಯುದ್ಧಕ್ಕೆ ಮುಂದಾಗಿದ್ದರು: ಬ್ರಿಟನ್ ಮಾಜಿ ಪ್ರಧಾನಿ ಕ್ಯಾಮರೂನ್

ಬ್ರಿಟಿಷ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಗುರುವಾರ ತಮ್ಮ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಧು ಮನುಷ್ಯ, ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಹ ಪಾಕಿಸ್ತಾನದ....
ಡೇವಿಡ್ ಕ್ಯಾಮರೂನ್ - ಮನಮೋಹನ್ ಸಿಂಗ್
ಡೇವಿಡ್ ಕ್ಯಾಮರೂನ್ - ಮನಮೋಹನ್ ಸಿಂಗ್
Updated on

ಲಂಡನ್: ಬ್ರಿಟಿಷ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಗುರುವಾರ ತಮ್ಮ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಧು ಮನುಷ್ಯ, ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಹ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಮುಂದಾಗಿದ್ದರು ಎಂದು ಹೇಳಿದ್ದಾರೆ.

'ಫಾರ್ ದಿ ರೆಕಾರ್ಡ್' ಎಂಬ ಆತ್ಮಚರಿತ್ರೆಯಲ್ಲಿ 52 ವರ್ಷದ ಕ್ಯಾಮರೂನ್ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ, ಅದರಲ್ಲೂ ವಿಶೇಷವಾಗಿ 2010ರಿಂದ 2016ರ ವರೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ಪ್ರಧಾನಿಯಾಗಿದ್ದ ವೇಳೆ 2010-2016ರ ಅವಧಿಯಲ್ಲಿ ಕ್ಯಾಮರಾನ್ ಅವರು ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರು ಒಬ್ಬ ಸಾಧು ಮನುಷ್ಯ. ಆದರೆ ಭಾರತ ಎದುರಿಸುವ ಬೆದರಿಕೆಗಳ ಬಗ್ಗೆ ಅವರು ತುಂಬಾ ಕಠಿಣವಾಗಿದ್ದರು. ಒಂದು ಸಲ ಭಾರತದಲ್ಲಿ ಅವರನ್ನು ಭೇಟಿ ಮಾಡಿದಾಗ, ಮುಂಬೈ ದಾಳಿಯಂತಹ ಮತ್ತೊಂದು ಉಗ್ರ ದಾಳಿ ನಡೆದರೆ, ಭಾರತ, ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚಾರಣೆ ಕೈಗೊಳ್ಳಲಿದೆ ಎಂದು ಹೇಳಿರುವುದಾಗಿ ಬ್ರಿಟನ್ ಮಾಜಿ ಪ್ರಧಾನಿ ಉಲ್ಲೇಖಿಸಿದ್ದಾರೆ. 

ಭಾರತದ ವಿಚಾರ ಬಂದಾಗ, ನಮಗೆ ಆಧುನಿಕ ಸಹಭಾಗಿತ್ವದ ಅಗತ್ಯವಿದೆ ಎಂದೇ ನಾನು ಪ್ರತಿಪಾದಿಸಿದ್ದೇನೆ. ಇದು ವಸಾಹತುಶಾಹಿ ಕಾಲದ ತಪ್ಪಿತಸ್ಥ ಮನೋಭಾವವನ್ನು ಹೊಂದಿರಬಾರದು. ಆದರೆ ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಎಲ್ಲ ಸಾಧ್ಯತೆಗಳನ್ನು ಜೀವಂತಗೊಳಿಸಬೇಕು' ಎಂದು ಕ್ಯಾಮರೂನ್ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com