ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

ಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನ ಮಂಡಿಸಿದ್ದ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಮೂವರು ಅರ್ಥಶಾಸ್ತ್ರಜ್ಞರಿಗೆ ಈ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿದೆ.
ಅಭಿಜಿತ್ ಬ್ಯಾನರ್ಜಿ
ಅಭಿಜಿತ್ ಬ್ಯಾನರ್ಜಿ

ಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನ ಮಂಡಿಸಿದ್ದ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಮೂವರು ಅರ್ಥಶಾಸ್ತ್ರಜ್ಞರಿಗೆ ಈ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿದೆ.

ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡುಫ್ಲೋ ಮತ್ತು ಮೈಕೆಲ್ ಕ್ರೆಮರ್ ಅವರುಗಳು 2019ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 "2019ರ ಅರ್ಥಶಾಸ್ತ್ರ ನೊಬೆಲ್ ವಿಜೇತರು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ, ಅವರ ಹೊಸ ಪ್ರಯೋಗ ಆಧರಿಸಿದ ವಿಧಾನವು ವು ಅಭಿವೃದ್ಧಿ ಅರ್ಥಶಾಸ್ತ್ರದ ಕಲ್ಪನೆಯನ್ನು ಬದಲಿಸಿದೆ.ಇದೀಗ ಆ ಕ್ಷೇತ್ರ ಮತ್ತಷ್ಟು ಬೆಳವಣಿಗೆ ಸಾಧಿಸುವತ್ತ ಹೊರಟಿದೆ." ನೊಬೆಲ್ ಆಯ್ಕೆ ಸಮಿತಿ ಹೇಳಿಕೆ ತಿಳಿಸಿದೆ.

"ಜಾಗತಿಕ ಬಡತನದ ವಿರುದ್ಧ ಹೋರಾಡುವ ಅತ್ಯುತ್ತಮ ಮಾರ್ಗಗಳ ಬಗ್ಗೆ ವಿಶ್ವಾಸಾರ್ಹ ಉತ್ತರಗಳನ್ನು ಪಡೆಯಲು ಈ ವರ್ಷದ ಪ್ರಶಸ್ತಿ ವಿಜೇತರು ಹೊಸ ವಿಧಾನವನ್ನು ಪರಿಚಯಿಸಿದ್ದಾರೆ. ಇದು ಈ ಸಮಸ್ಯೆಯನ್ನುಸಣ್ಣ,ಮತ್ತು ಹೆಚ್ಚು ಸುಕ್ಷೇಮವಾಗಿ ನಿರ್ವಹಿಸಬಹುದಾದ ಪ್ರಶ್ನೆಗಳಾಗಿ ವಿಂಗಡಿಸುತ್ತದೆ - ಉದಾಹರಣೆಗೆ, ಮಕ್ಕಳ ಆರೋಗ್ಯವನ್ನು ಸುಧಾರಿಸುವ ಅತ್ಯಂತ ಪರಿಣಾಮಕಾರಿ ಮಧ್ಯಸ್ಥಿಕೆ" ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಡೆಯುತ್ತಿರುವ ಭಾರತೀಯರ ಪೈಕಿ ಅಭಿಜಿತ್ ಬ್ಯಾನರ್ಜಿ ಎರಡನೆಯವರಾಗಿದ್ದಾರೆ. ಈ ಹಿಂದೆ ಅಮರ್ತ್ಯ ಸೇನ್ ಅವರಿಗೆ 1998ರ ವರ್ಷದ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಅವರು ಮಾನವ ಕಲ್ಯಾಣ ಅರ್ಥಶಾಸ್ತ್ರ ಮತ್ತು ಸಾಮಾಜಿಕ ಆಯ್ಕೆಗಳ ಪ್ರತಿಪಾದನೆಗಳಲ್ಲಿ ಮಾಡಿರುವ ಮಹತ್ವದ ಕೆಲಸಕ್ಕೆ ಈ ಪುರಸ್ಕಾರ ಲಭಿಸಿತ್ತು.

ಇನ್ನು ಈ ಸಾಲಿನಲ್ಲಿ ನೊಬೆಲ್ ಪುರಸ್ಕೃತರಾದ ಎಸ್ತರ್ ಡುಫ್ಲೋ ಅರ್ಥಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಗಳಿಸಿದ ಎರಡನೇ ಮಹಿಳೆಯಾಗಿದ್ದಾರೆ. ಅಲ್ಲದೆ ಅತ್ಯಂತ ಕಿರಿಯರೆಂದೂ ದಾಖಲಾಗಿದ್ದಾರೆ.

ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ ಕಿರು ಪರಿಚಯ

ಅಭಿಜಿತ್ ವಿನಾಯಕ್ ಬ್ಯಾನರ್ಜಿ ಒಬ್ಬ ಭಾರತೀಯ-ಅಮೇರಿಕನ್ ಅರ್ಥಶಾಸ್ತ್ರಜ್ಞ. ಜಾಗತಿಕ ಬಡತನವನ್ನು ನಿವಾರಿಸಲು ನಿರ್ದಿಷ್ಟವಾಗಿ ನಿಯಮಾವಳಿಗಳನ್ನು ರೂಪಿಸಿಅಭಿವೃದ್ಧಿ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕಾಗಿ ಅವರಿಗೆ ಈ ಸಾಲಿನ ನೊಬೆಲ್ ಬಹುಮಾನ ಲಭಿಸಿದೆ.ಇವರು ಎಂಐಟಿಯಲ್ಲಿ ಫೋರ್ಡ್ ಫೌಂಡೇಶನ್ ಇಂಟರ್ನ್ಯಾಷನಲ್ ಎಕನಾಮಿಕ್ಸ್ ಪ್ರೊಫೆಸರ್ ಆಗಿದ್ದಾರೆ.

 ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆಕ್ಷನ್ ಲ್ಯಾಬ್ ಅನ್ನು ಅರ್ಥಶಾಸ್ತ್ರಜ್ಞರಾದ ಎಸ್ತರ್ ಡುಫ್ಲೋ ಮತ್ತು ಸೆಂಧಿಲ್ ಮುಲೈನಾಥನ್ ಅವರೊಂದಿಗೆ ಸೇರಿ ಬ್ಯಾನರ್ಜಿ ಸ್ಥಾಪನೆ ಮಾಡಿದ್ದಾರೆ.ಅಲ್ಲದೆ ಅವರು ಇನ್ನೋವೇಶನ್ಸ್ ಫಾರ್ ಪಾವರ್ಟಿ ಆಕ್ಷನ್ ನ ಸಂಶೋಧನಾ ಅಂಗಸಂಸ್ಥೆ ಹಾಗೂ  Consortium on Financial Systems and Poverty. ಸದಸ್ಯರಾಗಿದ್ದಾರೆ.ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್‌ನ ಸಂಶೋಧನಾ ಸಹವರ್ತಿ, ಸೆಂಟರ್ ಫಾರ್ ಎಕನಾಮಿಕ್ ಪಾಲಿಸಿ ರಿಸರ್ಚ್‌ನ ಸಂಶೋಧನಾ ಸಹೋದ್ಯೋಗಿ, ಕೀಲ್ ಇನ್‌ಸ್ಟಿಟ್ಯೂಟ್‌ನ ಅಂತರರಾಷ್ಟ್ರೀಯ ಸಂಶೋಧನಾ ಸಹೋದ್ಯೋಗಿ ಆಗಿಯೂ ಬ್ಯಾನರ್ಜಿ ಗುರುತಿಸಿಕೊಂಡಿದ್ದಾರೆ.ಅಲ್ಲದೆ ಅವರು ಸೆಂಟರ್ ಫಾರ್ ಎಕನಾಮಿಕ್ ಪಾಲಿಸಿ ರಿಸರ್ಚ್ ನ ಫೆಲೋ ಆಗಿದ್ದರು.ಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್, ಮತ್ತು ಇಕೋನೊಮೆಟ್ರಿಕ್ ಸೊಸೈಟಿಯಲ್ಲಿ ಸಹವರ್ತಿ. ಅವರು ಗುಗೆನ್ಹೀಮ್ ಫೆಲೋ ಮತ್ತು ಆಲ್ಫ್ರೆಡ್ ಪಿ. ಸ್ಲೋನ್ ಫೆಲೋ ಆಗಿದ್ದಾರೆ.

ಕಲ್ಕತ್ತಾದ ಸಾಮಾಜಿಕ ವಿಜ್ಞಾನ ಕೇಂದ್ರದ ಅರ್ಥಶಾಸ್ತ್ರದ ಪ್ರಾಧ್ಯಾಪಕ ನಿರ್ಮಲಾ ಬ್ಯಾನರ್ಜಿ ಮತ್ತು ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ದೀಪಕ್ ಬ್ಯಾನರ್ಜಿಅವರ ಪುತ್ರರಾದ ಅಭಿಜಿತ್ ಬ್ಯಾನರ್ಜಿಅವರು ಕಲ್ಕತ್ತಾದ ಸೌತ್ ಪಾಯಿಂಟ್ ಶಾಲೆ ಮತ್ತು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು, 1981ರಲ್ಲಿ ಅರ್ಥಶಾಸ್ತ್ರದಲ್ಲಿ ಬಿಎಸ್ ಪದವಿ ಪಡೆದಿದ್ದ ಬ್ಯಾನರ್ಜಿ 1983 ರಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಮುಗಿಸಿದರು 1988 ರಲ್ಲಿ ಹಾರ್ವರ್ಡ್ ನಲ್ಲಿ  ಅರ್ಥಶಾಸ್ತ್ರದಲ್ಲಿ. ಅವರ ಡಾಕ್ಟರೇಟ್ ವ್ಯಾಸಂಗ ನಡೆದಿದ್ದು  "Essays in Information Economics."ಎಂಬ ವಿಷಯದ ಪ್ರಬಂಧ ಮಂಡಿಸಿ ಅವರು ಪಿ.ಎಚ್.ಡಿ. ಪದವಿ ಹೊಂದಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com