ಪುಟಿನ್ ಜೊತೆ ವಿಶೇಷ ಸಂಬಂಧ-ಮೋದಿ, 2020 ರ ವಿಜಯ ದಿನಾಚರಣೆಗೆ ಪ್ರಧಾನಿಗೆ ಆಹ್ವಾನ

ರಷ್ಯಾಅಧ್ಯಕ್ಷ ಪುಟಿನ್ ಜೊತೆ ನಮಗೆ ವಿಶೇಷ ಒಲವು,ಸಂಬಂಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಪುಟಿನ್-ಮೋದಿ
ಪುಟಿನ್-ಮೋದಿ

ವಾಡ್ಲಿವೋಸ್ಟಾಕ್: ರಷ್ಯಾಅಧ್ಯಕ್ಷ ಪುಟಿನ್ ಜೊತೆ ನಮಗೆ ವಿಶೇಷ ಒಲವು,ಸಂಬಂಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಇಂಧನ ಮತ್ತು ಶಸ್ತ್ರಾಸ್ತ್ರ ವ್ಯವಹಾರಗಳಿಗೆ ವಿಶೇಷ ಒತ್ತು ನೀಡಿ ಹೂಡಿಕೆ ಮತ್ತು ವ್ಯಾಪಾರ ವಹಿವಾಟು ಹೆಚ್ಚಿಸಲು ಭಾರತ- ರಷ್ಯಾ ಪರಸ್ಪರ ಸಮ್ಮತಿಸಿವೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತಿಥ್ಯ ನೀಡಿದ ಸಮಯದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಪಾಶ್ಚಿಮಾತ್ಯ ನಿರ್ಬಂಧಗಳ ಮಧ್ಯೆ ಏಷ್ಯಾದ ದೇಶಗಳೊಂದಿಗೆ ಸಹಭಾಗಿತ್ವ ಹೆಚ್ಚಿಸಲು ರಷ್ಯಾ 2015 ರಿಂದಲೂ ವ್ಲಾಡಿವೋಸ್ಟಾಕ್‌ನಲ್ಲಿ ಆಯೋಜಿಸಿರುವ  ಈಸ್ಟರ್ನ್ ಎಕನಾಮಿಕ್ ಫೋರಂನ ಹೊರತಾಗಿ ಇಬ್ಬರೂ ಭೇಟಿಯಾಗಿ ಈ ನಿಲುವಿಗೆ ಬಂದಿದ್ದಾರೆ.  

ರಾಜಕೀಯವಾಗಿ ರಷ್ಯಾ ಮತ್ತು ಭಾರತದ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಆದ್ದರಿಂದ ಇಬ್ಬರು ಕಾರ್ಯತಂತ್ರದ ಪಾಲುದಾರಿಕೆ ಆರ್ಥಿಕ ವಿಷಯಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ. 

ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ರಷ್ಯಾಕ್ಕೆ ಆಗಮಿಸಿದ್ದಾರೆ. ಚೀನಾ ಹೊರತುಪಡಿಸಿ ಹೂಡಿಕೆದಾರರನ್ನು ತನ್ನ ಪೆಸಿಫಿಕ್ ಪ್ರದೇಶಕ್ಕೆ ಆಹ್ವಾನಿಸಲು ರಷ್ಯಾ ಉತ್ಸುಕವಾಗಿದೆ, ಆದ್ದರಿಂದ ಅನೇಕ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ. ಜ್ವೆಜ್ಡಾಕ್ಕೆ ಭೇಟಿ ನೀಡುವ ಮೂಲಕ ಮೋದಿ ಮತ್ತು ಪುಟಿನ್ ಶೃಂಗಸಭೆಗೆ ಚಾಲನೆ ದೊರಕಿದೆ. 

2020 ರ ವಿಜಯ ದಿನಾಚರಣೆಗೆ ಪುಟಿನ್ ಆಹ್ವಾನ: ಮುಂದಿನ ಮೇ ನಲ್ಲಿ ನಡೆಯಲಿರುವ ಎರಡನೇ ಮಹಾಯುದ್ಧ ವಿಜಯದ 75 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ರಷ್ಯಾ ಅಧ್ಯಕ್ಷ  ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ.   

ನಾವು ಮತ್ತೆ  ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರೆಜಿಲ್ ನಲ್ಲಿ  ಭೇಟಿಯಾಗುವುದಾಗಿ ಪುಟಿನ್ ತಿಳಿಸಿದರು ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. 1945 ರಲ್ಲಿ ಜರ್ಮನಿಯಲ್ಲಿ ನಾಜಿಗಳ ಶರಣಾಗತಿಯನ್ನು ಆಚರಿಸುವ ರಜಾ ದಿನವಾಗಿದೆ. ಇದನ್ನು ಮೊದಲ ಬಾರಿಗೆ ಸೋವಿಯತ್ ಒಕ್ಕೂಟದ 15 ಗಣರಾಜ್ಯಗಳಲ್ಲಿ ಉದ್ಘಾಟಿಸಲಾಯಿತು. ಸೋವಿಯತ್ ಸರ್ಕಾರ ಬರ್ಲಿನ್‌ನಲ್ಲಿ ಸಹಿ ಹಾಕಿದ ನಂತರ ಮೇ 9 ರಂದು ವಿಜಯವನ್ನು ಘೋಷಿಸಿತ್ತು ಇದರ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಬರುವಂತೆ ಪುಟಿನ್ ಮೋದಿ ಅವರಿಗೆ ವಿಶೇಷ ಆಹ್ವಾನ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com