Source : The New Indian Express
ನ್ಯೂಯಾರ್ಕ್: ಭಯೋತ್ಪಾದನೆ ವಿರುದ್ಧ ಇಡೀ ಜಗತ್ತು ಒಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನಿಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ಬಾಷಣ ಮಾಡುತ್ತಿರುವ ಮೋದಿ ಅಭಿವೃದ್ಧಿ, ಶಾಂತಿ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ವಿಶ್ವ ವೇದಿಕೆಯಲ್ಲಿ ದೇಶದ ಪಾತ್ರವನ್ನು ವಿವರಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಿಎಂ ಮೋದಿ ಭಾಷಣದ ಕೆಲ ಸಾಲುಗಳು ಹೀಗಿದೆ-
ನಾವು ಜಗತ್ತಿಗೆ ಬುದ್ಧನನ್ನು ಕೊಟ್ಟಿದ್ದೇವೆ. ಅದಕ್ಕಾಗಿಯೇ ಭಯೋತ್ಪಾದನೆಯನ್ನು ಎದುರಿಸಲು ಪ್ರಾಮಾಣಿಕತೆ ಮತ್ತು ಕೋಪ ಎರಡೂ ಇದೆ.. ಭಯೋತ್ಪಾದನೆ ಮಾನವೀಯ ವಿಶ್ವದ ಮುಂದಿರುವ ದೊಡ್ಡ ಸವಾಲಾಗಿದೆ.ಇದು ವಿಶ್ವಸಂಸ್ಥೆಯ ನಿರ್ಮಾಣಕ್ಕೆ ಕಾರಣವಾಗಿರುವ ತತ್ವಗಳಿಗೆ ವಿರುದ್ಧವಾಗಿದೆ.
ಭಯೋತ್ಪಾದನೆ ತೊಡೆಯಲು ಜಗತ್ತು ಒಂದಾಗಬೇಕು. ಭಯೋತ್ಪಾದನೆಯನ್ನು ಎದುರಿಸಲು ಒಮ್ಮತದಿಂದ ಮುನ್ನುಗ್ಗಬೇಕು.ವಿಭಜನೆ ಯಾರ ಹಿತದೃಷ್ಟಿಯಿಂದಲೂ ಒಳಿತಲ್ಲ.
ಸ್ವಾಮಿ ವಿವೇಕಾನಂದರು ಧರ್ಮ ಸಂಸತ್ತಿಗೆ ಸಾಮರಸ್ಯ ಮತ್ತು ಶಾಂತಿಯ ಸಂದೇಶವನ್ನು ನೀಡಿದ್ದರು ಹೊರತು ಭಿನ್ನಾಭಿಪ್ರಾಯವನ್ನಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಇಂದಿಗೂ ಸಹ ಅದೇ ಸಂದೇಶವನ್ನು ಸಾರುತ್ತದೆ. : ಸಾಮರಸ್ಯ ಮತ್ತು ಶಾಂತಿ ಜಗತ್ತಿನ ಸೌಖ್ಯಕ್ಕೆ ಬುನಾದಿಯಾಗಿದೆ.