ಕೋವಿಡ್-19: ಬ್ರಿಟನ್ ನಲ್ಲಿರುವ ವಿದೇಶಿ ನೌಕರರಿಗೆ ಭಾರತ ಮೂಲದ ಹಣಕಾಸು ಸಚಿವ ರಿಷಿ ಕೊಡುಗೆ! 

ಬ್ರಿಟನ್ ನಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ನೌಕರರಿಗೆ ಭಾರತ ಮೂಲದ ಅಲ್ಲಿನ ಹಣಕಾಸು ಸಚಿವ ರಿಷಿ ಸುನಕ್ ಕೆಲವು ಪರಿಹಾರ ಘೋಷಣೆಗಳನ್ನು ಮಾಡಿದ್ದಾರೆ. 
ರಿಷಿ ಸುನಕ್
ರಿಷಿ ಸುನಕ್

ಲಂಡನ್: ಬ್ರಿಟನ್ ನಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ನೌಕರರಿಗೆ ಭಾರತ ಮೂಲದ ಅಲ್ಲಿನ ಹಣಕಾಸು ಸಚಿವ ರಿಷಿ ಸುನಕ್ ಕೆಲವು ಪರಿಹಾರ ಘೋಷಣೆಗಳನ್ನು ಮಾಡಿದ್ದಾರೆ. 

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಭಾರತೀಯರೂ ಸೇರಿದಂತೆ ಹೆಚ್ಚು ನುರಿತ ವಿದೇಶಿ ನೌಕರರಿಗೆ ತಾತ್ಕಾಲಿಕವಾಗಿ ಮೊದಲ 3 ತಿಂಗಳವರೆಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದಾರೆ. 

ಭಾರತೀಯ ಮೂಲದ ರಿಷಿ ಸುನಕ್ ಹೌಸ್ ಆಫ್ ಕಾಮನ್ಸ್ ಖಜಾನೆ ಸಮಿತಿಗೆ ಪತ್ರ ಬರೆದಿದ್ದು, ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಬ್ರಿಟನ್ ನ ನಿವಾಸಿಗಳೆಂದು ಪರಿಗಣಿಸಲು ನಡೆಸಲಾಗುವ ರೆಸಿಡೆನ್ಸ್ ಟೆಸ್ಟ್ (ಎಸ್ ಆರ್ ಟಿ) ಗೆ ಮಾ.1 ರಿಂದ ಜೂ.1 ವರೆಗೆ ವಿನಾಯಿತಿ ನೀಡಬೇಕೆಂದು ಸೂಚನೆ ನೀಡಿದ್ದಾರೆ. ಪರಿಣಾಮ ಕೋವಿಡ್-19 ವಿರುದ್ಧ ಹೋರಾಡಲು ಬ್ರಿಟನ್ ಸರ್ಕಾರದ ಜೊತೆ ತೊಡಗಿಸಿಕೊಳ್ಳುವ ವಿದೇಶಿ ನುರಿತ ನೌಕರರಿಗೆ ತೆರಿಗೆ ಲಾಭ ದೊರೆಯಲಿದೆ. 

ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಬ್ರಿಟನ್ ಗೆ ಸಹಕರಿಸುವ ಅರಿವಳಿಕೆ ತಜ್ಞರು, ವೆಂಟಿಲೇಟರ್ ನ್ನು ವಿನ್ಯಾಸಗೊಳಿಸಿ ಉತ್ಪಾದಿಸುವ ಇಂಜಿನಿಯರ್ ಗಳ ಪರಿಣತಿ ಮತ್ತು ಸಂಪನ್ಮೂಲಗಳನ್ನು ನೀಡಲಿರುವವರನ್ನು ಸ್ವಾಗತಿಸುತ್ತೇವೆ ಎಂದು ರಿಷಿ ಸುನಕ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com