ಕೋವಿಡ್ ವಿರುದ್ಧದ ಹೋರಾಟಕ್ಕೆ 1 ಟ್ರಿಲಿಯನ್ ಡಾಲರ್ ಸಾಲ ಸಾಮರ್ಥ್ಯ- ಐಎಂಎಫ್

ಜಾಗತಿಕವಾಗಿ ಮಾರಕ ಕೋವಿಡ್ -19 ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡುತ್ತಿರುವ ರಾಷ್ಟ್ರಗಳಿಗೆ ಬೆಂಬಲಿಸಲು ತನ್ನೆಲ್ಲಾ 1 ಟ್ರಿಲಿಯನ್ ಡಾಲರ್ ನಷ್ಟಿರುವ ಸಾಲ ಸಾಮರ್ಥ್ಯವನ್ನು ಬಳಸಿಕೊಳ್ಳಲು ಯೋಚಿಸಿರುವುದಾಗಿ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ತಿಳಿಸಿದ್ದಾರೆ.
ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ
ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ

ವಾಷಿಂಗ್ಟನ್: ಜಾಗತಿಕವಾಗಿ ಮಾರಕ ಕೋವಿಡ್ -19 ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡುತ್ತಿರುವ ರಾಷ್ಟ್ರಗಳಿಗೆ ಬೆಂಬಲಿಸಲು ತನ್ನೆಲ್ಲಾ 1 ಟ್ರಿಲಿಯನ್ ಡಾಲರ್ ನಷ್ಟಿರುವ ಸಾಲ ಸಾಮರ್ಥ್ಯವನ್ನು ಬಳಸಿಕೊಳ್ಳಲು ಯೋಚಿಸಿರುವುದಾಗಿ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ 189 ಸದಸ್ಯ ರಾಷ್ಟ್ರಗಳ ಪೈಕಿಯಲ್ಲಿ 102 ರಾಷ್ಟ್ರಗಳು ಕೊರೋನಾವೈರಸ್ ತಡೆಗಾಗಿ ನೆರವನ್ನು ಯಾಚಿಸುತ್ತಿರುವುದಾಗಿ ಎಐಎಂಫ್ ಮ್ಯಾನೇಜಿಂಗ್ ಡೈರೆಕ್ಟರ್ ಜಾರ್ಜೀವಾ ಹೇಳಿದ್ದಾರೆ. 

ಈ ರೀತಿಯ ಬಿಕ್ಕಟ್ಟು ನೋಡಿರಲಿಲ್ಲ, ಮಹಾ ಆರ್ಥಿಕ ಕುಸಿತದ ನಂತರ ಇದೀಗ ನಾವು ಸಂದಿಗ್ಧತೆಯ ಸಂದರ್ಭ ಎದುರಿಸುತ್ತಿದ್ದೇವೆ. ಜಾಗತಿಕ ಜಿಡಿಪಿ ಶೇ, 3 ರಷ್ಟು ಕುಗಿದ್ದು, ಮೂರು ತಿಂಗಳ ಹಿಂದೆ ನಿರೀಕ್ಷಿಸಲಾಗಿದ್ದ 170 ರಾಷ್ಟ್ರಗಳ ತಲಾ ಆದಾಯ ಕಡಿಮೆಯಾಗಿದೆ ಎಂದು ಜಾರ್ಜೀವಾ ಐಎಂಎಫ್ ಹಾಗೂ ವಿಶ್ವಬ್ಯಾಂಕ್ ವಾರ್ಷಿಕ ಸಭೆಯಲ್ಲಿ ತಿಳಿಸಿದರು. 

ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾನಿಲಯದ ಮಾಹಿತಿ ಪ್ರಕಾರ, ಸುಮಾರು 2 ಮಿಲಿಯನ್ ಜನರು ಕೊರೋನಾವೈರಸ್ ಸೋಂಕಿತರಾಗಿದ್ದಾರೆ. ಜಾಗತಿಕವಾಗಿ 136,000 ಹೆಚ್ಚು ಜನರು ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

ತುರ್ತುಪರಿಸ್ಥಿತಿಯಿಂದ ಎರಡುಪಟ್ಟು ಆರ್ಥಿಕ ನೆರವಿಗೆ ಐಎಂಎಫ್ ಪ್ರಸ್ತಾಪಿಸಿದೆ. ಪ್ರಸ್ತುತ 100 ಬಿಲಿಯನ್ ಡಾಲರ್ ನಷ್ಟ ನೆರವು ನೀಡಲಾಗುತಿತ್ತು, ಇದನ್ನು 50 ಬಿಲಿಯನ್ ಡಾಲರ್ ನಷ್ಟು ನೀಡುವ ಗುರಿ ಹೊಂದಲಾಗಿದೆ. ಇಂತಹ ನೆರವಿಗೆ ಈಗ ಹೆಚ್ಚಿನ ಬೇಡಿಕೆಯಿದ್ದು,  ಅರ್ಧದಷ್ಟು ಭಾಗವನ್ನು ಮಂಡಳಿಯು ಅನುಮೋದಿಸಿದೆ, 102 ದೇಶಗಳು ಅದನ್ನು ಕೇಳುತ್ತಿವೆ ಎಂದು ಜಾರ್ಜೀವಾ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com