ಸುದ್ದಿಮನೆಗಳು ಸುಳ್ಳು ಸುದ್ದಿ ಕೊಡಬಾರದು, ಮೂಲವನ್ನು ಹೆಸರಿಸಬೇಕು:ವರದಿಗಾರ್ತಿ ಮೇಲೆ ಹರಿಹಾಯ್ದ ಡೊನಾಲ್ಡ್ ಟ್ರಂಪ್

ಅಮೆರಿಕದ ಪ್ರಮುಖ ಮಾಧ್ಯಮಗಳು ಅಪ್ರಮಾಣಿಕವಾಗಿ ವರ್ತಿಸುತ್ತಿವೆ, ಸುಳ್ಳು ವರದಿಗಳನ್ನು ನೀಡುತ್ತಿವೆ ಎಂದು ಹರಿಹಾಯ್ದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುದ್ದಿಗಳನ್ನು, ವರದಿಗಳನ್ನು ಮಾಡುವಾಗ ಅದರ ಮೂಲವನ್ನು ಕಡ್ಡಾಯವಾಗಿ ಹೆಸರಿಸಬೇಕೆಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕದ ಪ್ರಮುಖ ಮಾಧ್ಯಮಗಳು ಅಪ್ರಮಾಣಿಕವಾಗಿ ವರ್ತಿಸುತ್ತಿವೆ, ಸುಳ್ಳು ವರದಿಗಳನ್ನು ನೀಡುತ್ತಿವೆ ಎಂದು ಹರಿಹಾಯ್ದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುದ್ದಿಗಳನ್ನು, ವರದಿಗಳನ್ನು ಮಾಡುವಾಗ ಅದರ ಮೂಲವನ್ನು ಕಡ್ಡಾಯವಾಗಿ ಹೆಸರಿಸಬೇಕೆಂದು ಹೇಳಿದ್ದಾರೆ.

ನಿನ್ನೆ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯೂಯಾರ್ಕ್ ಟೈಮ್ಸ್ ನ ಶ್ವೇತಭವನದ ವರದಿಗಾರ್ತಿ ಮತ್ತು ಸಿಎನ್ಎನ್ ನ ರಾಜಕೀಯ ವಿಶ್ಲೇಷಕಿ ಮ್ಯಾಗಿ ಹ್ಯಾಬರ್ಮನ್ ಮೇಲೆ ವಾಗ್ದಾಳಿ ನಡೆಸಿ ಅಸಮರ್ಪಕ ಮೂಲಗಳಿಂದ ವರದಿ ಬರೆದಿರುವುದಕ್ಕೆ ಹರಿಹಾಯ್ದರು.

ಸುದ್ದಿಮೂಲಗಳನ್ನು ಸರಿಯಾಗಿ ತಿಳಿದುಕೊಂಡು ನೀವು ಈ ಸುದ್ದಿ ಮಾಡಿದ್ದೀರಾ ಎಂದು ವರದಿಗಾರ್ತಿಯನ್ನು ಕೇಳಿದರು. ಸುದ್ದಿಯ ಮೂಲವನ್ನು ನೀವು ಕಡ್ಡಾಯವಾಗಿ ಹೆಸರಿಸಬೇಕು. ಸುದ್ದಿಯ ಮೂಲಗಳು ಸಿಕ್ಕಿದರೆ ವರದಿ, ಲೇಖನದಲ್ಲಿ ಅದನ್ನು ಸೂಚಿಸಿ, ನೀವು ಮಾಡಿರುವ ಈ ಸುದ್ದಿಗೆ ಮೂಲವಿದೆ ಎಂದು ನನಗೆ ಅನಿಸುವುದಿಲ್ಲ ಎಂದರು.

ತನ್ನ ಸಹೋದ್ಯೋಗಿ ಜೊನತನ್ ಮಾರ್ಟಿನ್ ಜೊತೆಗೆ ಬರೆದಿರುವ ವರದಿಯಲ್ಲಿ ಮ್ಯಾಗಿ ಹ್ಯಾಬರ್ಮನ್, ಕೊರೋನಾ ವೈರಸ್ ವ್ಯಾಪಕವಾಗಿ ಹರಡಲು ಚೀನಾ ಕಾರಣ ಎಂದು ಜಗತ್ತಿನ ಎದುರು ಬಿಂಬಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಗೆಲ್ಲಲು ಇರುವ ಕಠಿಣ ಹಾದಿಯಿಂದ ಹೊರಬರಲು ರಿಪಬ್ಲಿಕನ್ ಪಕ್ಷ ಕಂಡುಕೊಂಡಿರುವ ಕ್ರಮ ಎಂದು ವರದಿ ಪ್ರಕಟಿಸಿದ್ದರು.

ಶ್ವೇತಭವನದ ಮುಖ್ಯ ಸಿಬ್ಬಂದಿ ಮಾರ್ಕ್ ಮೀಡೊಸ್ ಅಲ್ಲಿ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದು ಇತ್ತೀಚೆಗೆ ಶ್ವೇತಭವನದಲ್ಲಿ ತಮ್ಮ ಸದಸ್ಯರೊಂದಿಗೆ ನಡೆದ ಸಭೆಯ ವೇಳೆ ಅತ್ತಿದ್ದರು ಎಂದು ಕೆಲ ದಿನಗಳ ಹಿಂದೆ ಹ್ಯಾಬರ್ಮನ್ ವರದಿ ಮಾಡಿದ್ದರು.

ಈ ವರದಿಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೆರಳಿಸಿವೆ. ಈ ಸುದ್ದಿಗಳು ನಿಜವಲ್ಲ, ಇದರ ಮೂಲ ಎಲ್ಲಿಂದ ಸಿಕ್ಕಿತು ಹೇಳಿ ಎಂದು ಕೇಳಿದರು.  ರಷ್ಯಾ ಬಗ್ಗೆ ಬರೆದ ವರದಿಗಾಗಿ ಆಕೆಗೆ ಖ್ಯಾತ ಪುಲಿಟ್ಜರ್ ಪ್ರಶಸ್ತಿ ಬಂದಿರಬಹುದು. ಆದರೆ ಅವರು ರಷ್ಯಾ ಬಗ್ಗೆ ಬರೆದಿದ್ದು ತಪ್ಪು. ಹಾಗೆಯೇ ಬೇರೆಯವರು ಕೂಡ.ಅವರೆಲ್ಲರೂ ಪುಲಿಟ್ಜರ್ ಪ್ರಶಸ್ತಿಯನ್ನು ಹಿಂದಕ್ಕೆ ನೀಡಬೇಕು. ಹ್ಯಾಬರ್ಮನ್ ನ್ಯೂಯಾರ್ಕ್ ಟೈಮ್ಸ್ ನ ಮೂರನೇ ದರ್ಜೆಯ ವರದಿಗಾರ್ತಿ ಎಂದು ನೇರವಾಗಿ ಟ್ರಂಪ್ ಆರೋಪಿಸಿದರು.

ತಾವು ಕೊರೋನಾ ವೈರಸ್ ವಿರುದ್ಧ ಮಾಡುತ್ತಿರುವ ಕೆಲಸದ ಬಗ್ಗೆ ಕೆಲವು ಮಾಧ್ಯಮಗಳು ತಪ್ಪಾಗಿ ವರದಿ ಮಾಡುತ್ತಿವೆ. ಈ ಬಗ್ಗೆ ತಮ್ಮ ಕಚೇರಿ ತಯಾರಿಸಿದ ವಿಡಿಯೊ ಕ್ಲಿಪ್ ವೊಂದನ್ನು ಕಳೆದ ವಾರ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com