ಕೊರೋನಾಗೆ ರಾಮಬಾಣವಾಗುತ್ತಾ ರೆಮ್ಡೇಸಿವಿರ್: ಅನುಮೋದನೆಗೆ ಇನ್ನೊಂದೇ ಹಂತ, ಪ್ರಯೋಗ ತಂಡದಲ್ಲಿ ಭಾರತೀಯ!

ಕೋವಿಡ್-19 ಕ್ಕೆ ಸೂಕ್ತ ಮದ್ದು ಅರೆಯುವ ನಿಟ್ಟಿನಲ್ಲಿ ಅಮೆರಿಕದ ತಂಡ ಹಗಲಿರುಳು ಶ್ರಮಿಸುತ್ತಿದ್ದು ಅಮೆರಿಕಾದಲ್ಲಿರುವ ಭಾರತೀಯರು ಈ ಕೆಲಸದಲ್ಲಿ ಮುಂಚೂಣಿಯಲ್ಲಿದ್ದಾರೆ. 
ಕೊರೋನಾಗೆ ರಾಮಬಾಣವಾಗುತ್ತಾ ರೆಮ್ಡೇಸಿವಿರ್:ಅನುಮೋದನೆಗೆ ಇನ್ನೊಂದೇ ಹಂತ
ಕೊರೋನಾಗೆ ರಾಮಬಾಣವಾಗುತ್ತಾ ರೆಮ್ಡೇಸಿವಿರ್:ಅನುಮೋದನೆಗೆ ಇನ್ನೊಂದೇ ಹಂತ

ವಾಷಿಂಗ್ ಟನ್: ಕೋವಿಡ್-19ಗೆ ಸೂಕ್ತ ಮದ್ದು ಅರೆಯುವ ನಿಟ್ಟಿನಲ್ಲಿ ಅಮೆರಿಕದ ತಂಡ ಹಗಲಿರುಳು ಶ್ರಮಿಸುತ್ತಿದ್ದು ಅಮೆರಿಕಾದಲ್ಲಿರುವ ಭಾರತೀಯರು ಈ ಕೆಲಸದಲ್ಲಿ ಮುಂಚೂಣಿಯಲ್ಲಿದ್ದಾರೆ. 

ಕೊರೋನಾ ವೈರಸ್ ಪೀಡಿತರ ಪೈಕಿ ಶೇ.50 ರಷ್ಟು ಮಂದಿಗೆ ರೆಮ್ಡೇಸಿವಿರ್ ಎಂಬ ಔಷಧವನ್ನು ನೀಡಲಾಗಿದ್ದು, 5ದಿನಗಳ ಡೋಸೇಜ್ ನೀಡಿದ ಬಳಿಕ ಗುಣಮುಖರಾಗಿದ್ದಾರೆ. ಕೋವಿಡ್-19 ಗೆ ರೆಮ್ಡೇಸಿವಿರ್ ಎಂಬ ಔಷಧಕ್ಕೆ ಅಧಿಕೃತವಾಗಿ ಅನುಮೋದನೆ ನೀಡುವುದಕ್ಕೆ ಮೂರು ಹಂತಗಳಲ್ಲಿ    ಪ್ರಯೋಗ ನಡೆಸಲಾಗುತ್ತಿದ್ದು, ಈ ಪ್ರಯೋಗದಲ್ಲಿ ತೊಡಗಿರುವವರ ತಂಡದ ನೇತೃತ್ವವನ್ನು ಭಾರತೀಯ ಅಮೆರಿಕನ್ನರಾದ ಅರುಣಾ ಸುಬ್ರಹ್ಮಣಿಯನ್ ವಹಿಸಿಕೊಂಡಿದ್ದಾರೆ. 

ಭಾರತೀಯ ಅಮೆರಿಕನ್ ವೈದ್ಯರಾದ ಅರುಣಾ ಸುಬ್ರಹ್ಮಣಿಯನ್ ಅವರು ಇರುವ ತಂಡ ರೆಮ್ಡೇಸಿವಿರ್ ಔಷಧದ ಕ್ಲಿನಿಕಲ್ ಟ್ರಯಲ್ ನಲ್ಲಿ ತೊಡಗಿವೆ. ಈ ಔಷಧ ಕೋವಿಡ್-19 ಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕನ್ ಫಾರ್ಮಾ ಸಂಸ್ಥೆ ಹೇಳಿದೆ. ಕ್ಯಾಲಿಫೋರ್ನಿಯ ಮೂಲದ ಫಾರ್ಮಾ ಸಂಸ್ಥೆಯಾಗಿರುವ ಗಿಲ್ಯಾಡ್ ಸೈನ್ಸಸ್ ಈ ಬಗ್ಗೆ ಮಾಹಿತಿ ನೀಡಿದ್ದು, ರೆಮ್ಡೇಸಿವಿರ್ ಔಷಧ ಪಡೆದ  ಕೋವಿಡ್-19 ರೋಗಿಗಳ ಪೈಕಿ ಶೇ.50 ರಷ್ಟು ಮಂದಿ ಚೇತರಿಕೆ ಕಂಡಿದ್ದಾರೆ ಹಾಗೂ ಅರ್ಧಕ್ಕೂ ಹೆಚ್ಚು ಜನರು ಎರಡು ವಾರಗಳ ಒಳಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಿದ್ದಾರೆ. 

ಈ ಔಷಧದ ಅನುಮೋದನೆಗಾಗಿ ಮೂರು ಹಂತಗಳಲ್ಲಿ ಪ್ರಯೋಗ ನಡೆಸಲಾಗುತ್ತಿದ್ದು ಕೊನೆಯ ಹಂತದ ಪ್ರಯೋಗದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com