ಕುಲಭೂಷಣ್ ಜಾಧವ್ ಪರ ವಾದಿಸಲು ಭಾರತವೇ ವಕೀಲರ ನೇಮಕ ಮಾಡಲಿ: ಪಾಕ್ ಹೈಕೋರ್ಟ್

ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ತಮ್ಮ ಅಪರಾಧದ ವಿರುದ್ಧ ಪರಿಶೀಲನಾ ಅರ್ಜಿ ಸಲ್ಲಿಸಿರುವ ಅವರನ್ನು ಪ್ರತಿನಿಧಿಸಲು ಭಾರತವೇ ವಕೀಲರನ್ನು ನೇಮಕ ಮಾಡಲು ಅವಕಾಶ ನೀಡಬೇಕು ಎಂದು ಪಾಕಿಸ್ತಾನ ನ್ಯಾಯಾಲಯ ಸೋಮವಾರ ತಿಳಿಸಿದೆ. 
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್
Updated on

ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ತಮ್ಮ ಅಪರಾಧದ ವಿರುದ್ಧ ಪರಿಶೀಲನಾ ಅರ್ಜಿ ಸಲ್ಲಿಸಿರುವ ಅವರನ್ನು ಪ್ರತಿನಿಧಿಸಲು ಭಾರತವೇ ವಕೀಲರನ್ನು ನೇಮಕ ಮಾಡಲು ಅವಕಾಶ ನೀಡಬೇಕು ಎಂದು ಪಾಕಿಸ್ತಾನ ನ್ಯಾಯಾಲಯ ಸೋಮವಾರ ತಿಳಿಸಿದೆ. 

ಇಸ್ಲಾಮಾಬಾದ್ ಹೈಕೋರ್ಟ್‌ನ ವಿಶೇಷ ನ್ಯಾಯಪೀಠ ಜಾಧವ್ ಪ್ರಕರಣವನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿದೆ.

ಜಾಧವ್ ಅವರನ್ನು ಪ್ರತಿನಿಧಿಸುವ ವಕೀಲರು ಪಾಕಿಸ್ತಾನಿ ಪ್ರಜೆಯಾಗಿರಬೇಕು ಎಂದು ಷರತ್ತು ವಿಧಿಸಿದ ಕೋರ್ಟ್ ಮಾಜಿ ನೌಕಾ ಅಧಿಕಾರಿಗೆ ಕಾನೂನು ಪ್ರತಿನಿಧಿಯನ್ನು ನೇಮಿಸಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ

ಜಾಧವ್ ಅವರಿಗೆ ವಕೀಲರನ್ನು ನೇಮಕ ಮಾಡಲು ಎರಡನೇ ಅವಕಾಶ ನೀಡಲಾಗುವುದು ಎಂದು ಹೈಕೋರ್ಟ್ ಹೇಳಿದೆ. "ಫೆಡರಲ್ ಸರ್ಕಾರ ಸ್ವತಃ ವಕೀಲರನ್ನು ತೊಡಗಿಸಿಕೊಳ್ಳಬೇಕೆಂದು ಬಯಸುತ್ತದೆ" ಎಂದು ಸೋಮವಾರದ ವಿಚಾರಣೆಗೆ ಹಾಜರಾದ ಪಾಕಿಸ್ತಾನದ ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಜಾಧವ್ ಪರವಾಗಿ ಭಾರತೀಯ ವಕೀಲರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಹಾಜರಾಗಬಹುದೇ ಎಂದು ಸುದ್ದಿಗಾರರ ಪ್ರಶ್ನೆಗೆ, ಖಾನ್ "ಪಾಕಿಸ್ತಾನದ ವಕೀಲರು ಮತ್ತು ಪಾಕಿಸ್ತಾನದಲ್ಲಿ ಅಭ್ಯಾಸ ಮಾಡಲು ಅರ್ಹರಾದವರನ್ನು ಮಾತ್ರ" ಈ ಪ್ರಕರಣಕ್ಕೆ ನೇಮಕ ಮಾಡಬಹುದು ಎಂದು ಹೇಳಿದರು.

ಜಾಧವ್‌ಗಾಗಿ ನೇಮಕವಾಗುವ  ಯಾವುದೇ ಪಾಕಿಸ್ತಾನಿ ಸಲಹೆಗಾರರಿಗೆ ಭಾರತೀಯ ವಕೀಲರು ಸಹಾಯ ಮಾಡಬಹುದೇ ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಖಾನ್, "ಈ ಆಯ್ಕೆಯನ್ನು ಈಗ ಪರಿಗಣಿಸಲಾಗಿಲ್ಲ" ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com