
ನ್ಯೂಯಾರ್ಕ್: ತಾಯಿಯ ಎದೆ ಹಾಲು ಕೋವಿಡ್ -19 ಸೋಂಕು ಹರಡಿಸುವ ಸಾಧ್ಯತೆ ಇಲ್ಲ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ, ಅಧ್ಯಯನದ ಪ್ರಕಾರ ಕೊರೋನಾವೈರಸ್ ಎದೆಹಾಲುಣಿಸಿದ ತಾಯಿಯಿಂದ ಶಿಶುಗಳಿಗೆ ಹರಡುವುದು ಸಾಧ್ಯವಿಲ್ಲ.
ತೀವ್ರ ಉಸಿರಾಟದ ತೊಂದರೆ ಕೊರೋನಾಸೋಂಕಿತ ಯುನೈಟೆಡ್ ಸ್ಟೇಟ್ಸ್‌ನ 18 ಮಹಿಳೆಯರಿಂದ ಬಯೋರೆಪೊಸಿಟರಿ ಸಂಗ್ರಹಿಸಿದ 64 ಎದೆ ಹಾಲಿನ ಮಾದರಿಗಳನ್ನು ಪರಿಶೀಲಿಸಿ ಈ ವರದಿ ತಯಾರಾಗಿದ್ದು JAMA ಜರ್ನಲ್‌ನಲ್ಲಿ ಬುಧವಾರ ಪ್ರಕಟವಾಗಿದೆ,
ಒಂದು ಮಾದರಿಯು ವೈರಲ್ ಆರ್‌ಎನ್‌ಎಗೆ ಪಾಸಿಟಿವ್ ಎಂದು ಕಂಡುಬಂದರೂ , ನಂತರದ ಪರೀಕ್ಷೆಗಳಲ್ಲಿ ವೈರಸ್ ಪುನರಾವರ್ತನೆ ಕಾಣಿಸಿಲ್ಲ, ಇದರಿಂದಾಗಿ ಎದೆಹಾಲು ಕುಡಿದ ಶಿಶುಗಳಲ್ಲಿ ಸೋಂಕು ಉಂಟಾಗಲು ಸಾಧ್ಯವಾಗಲಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
"ವೈರಲ್ ಆರ್ಎನ್ಎ ಪತ್ತೆ ಸೋಂಕಿಗೆ ಸಮನಾಗಿಲ್ಲ. ಏಕೆಂದರೆ ಸೋಂಕು ಸಾಂಕ್ರಾಮಿಕ ರೋಗವಾಗಲು ಇದಿನ್ನೂ ಬೆಳಯಬೇಕು, ನಮ್ಮ ಯಾವುದೇ ಮಾದರಿಗಳಲ್ಲಿ ನಾವು ಅದನ್ನು ಕಂಡುಕೊಂಡಿಲ್ಲ. " ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿನ ಅಧ್ಯಯನದ ಸಹ ಪ್ರಧಾನ ಸಂಶೋಧಕ ಮತ್ತು ಪ್ರಾಧ್ಯಾಪಕ ಕ್ರಿಸ್ಟಿನಾ ಚೇಂಬರ್ಸ್ ಹೇಳಿದ್ದಾರೆ.
"ನಮ್ಮ ಸಂಶೋಧನೆಗಳು ಎದೆ ಹಾಲು ಶಿಶುವಿಗೆ ಸೋಂಕಿನ ಮೂಲವಲ್ಲ ಎಂದು ಸೂಚಿಸುತ್ತದೆ"
ಸ್ತನ್ಯಪಾನ ಮಾಡುವಾಗ ಪ್ರಸರಣವನ್ನು ತಡೆಗಟ್ಟುವ ಪ್ರಸ್ತುತ ಶಿಫಾರಸುಗಳು ಕೈನ ಶುದ್ದತೆಮತ್ತು ಪ್ರತಿ ಬಳಕೆಯ ನಂತರ ಪಂಪಿಂಗ್ ಸಾಧನಗಳನ್ನು ಕ್ರಿಮಿನಾಶಗೊಳಿಸುವುದಕ್ಕೆ ಮಾತ್ರ ಸೀಮಿತವಾಗಿದೆ, "ಮಾಹಿತಿಯ ಕೊರತೆಯಿಂದಾಗಿ, ಸಾರ್ಸ್ ಕೋವ್ 2 ಸೋಂಕಿತ ( SARS-CoV-2) ಕೆಲವು ಮಹಿಳೆಯರು ಹಾಲೂಡಿಸದೆ ಇರಲು ನಿರ್ಧರಿಸಿದ್ದರು."ಎಂದು ಯುಸಿ ಲಾಸ್ ಏಂಜಲೀಸ್‌ನ ಗ್ರೇಸ್ ಅಲ್ಡ್ರೊವಾಂಡಿ ಹೇಳಿದರು"ನಮ್ಮ ಫಲಿತಾಂಶಗಳು ಮತ್ತು ಭವಿಷ್ಯದ ಅಧ್ಯಯನಗಳು ಮಹಿಳೆಯರಿಗೆ ಸ್ತನ್ಯಪಾನ ಮಾಡಿಸಲು ಅಗತ್ಯವಾದ ಧೈರ್ಯವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಮಾನವ ಹಾಲು ತಾಯಿ ಮತ್ತು ಮಗುವಿಗೆ ಅಮೂಲ್ಯವಾದ ಪ್ರಯೋಜನಗಳನ್ನು ನೀಡುತ್ತದೆ" ಎಂದು ಅಲ್ಡ್ರೊವಾಂಡಿ ಹೇಳಿದರು.
ಆರಂಭಿಕ ಸ್ತನ್ಯಪಾನವು ಮಕ್ಕಳಲ್ಲಿ ಹಠಾತ್ ಶಿಶು ಮರಣ ಸಿಂಡ್ರೋಮ್ ಮತ್ತು ಸ್ಥೂಲಕಾಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ, ಜೊತೆಗೆ ರೋಗನಿರೋಧಕ ಆರೋಗ್ಯ ಮತ್ತು ದೇಹದ ನಾನಾ ಅಂಗಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ತಾಯಂದಿರಲ್ಲಿ, ಸ್ತನ್ಯಪಾನವು ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್, ಹೃದಯರಕ್ತನಾಳದ ಕಾಯಿಲೆ ಮತ್ತು ಟೈಪ್ 2 ಮಧುಮೇಹ ಉಂಟಾಗುವಿಕೆಯ ಅಪಾಯವನ್ನು ತಗ್ಗಿಸಲಿದೆ ಎಂದು ಅವರು ಹೇಳಿದರು.
Advertisement