ಮಾರಣಹೋಮ: ಬಂದೂಕುಧಾರಿಗಳಿಂದ ಮನಬಂದಂತೆ ಗುಂಡು ಹಾರಿಸಿ 100ಕ್ಕೂ ಹೆಚ್ಚು ಜನರ ಭೀಕರ ಹತ್ಯೆ!

ಇಥಿಯೋಪಿಯಾದ ಪಶ್ಚಿಮ ಬೆನಿಶಾಂಗುಲ್-ಗುಮುಜ್ ಪ್ರಾದೇಶಿಕ ರಾಜ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಮನ ಬಂದಂತೆ ಗುಂಡಿನ ದಾಳಿ ನಡೆಸಿ 100ಕ್ಕೂ ಹೆಚ್ಚು ನಾಗರಿಕರನ್ನು ಭೀಕರವಾಗಿ ಕೊಂದಿದ್ದಾರೆ. 
ಹಳ್ಳಿಗರು
ಹಳ್ಳಿಗರು
Updated on

ಅಡಿಸ್ ಅಬಾಬಾ: ಇಥಿಯೋಪಿಯಾದ ಪಶ್ಚಿಮ ಬೆನಿಶಾಂಗುಲ್-ಗುಮುಜ್ ಪ್ರಾದೇಶಿಕ ರಾಜ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಮನ ಬಂದಂತೆ ಗುಂಡಿನ ದಾಳಿ ನಡೆಸಿ 100ಕ್ಕೂ ಹೆಚ್ಚು ನಾಗರಿಕರನ್ನು ಭೀಕರವಾಗಿ ಕೊಂದಿದ್ದಾರೆ. 

ಈ ಘಟನೆ ಬುಧವಾರ ಮುಂಜಾನೆ ಬೆಕುಜಿ ಕೆಬೆಲ್ಲೆ, ಬುಲೆನ್ ವೆರೆಡಾ ಮತ್ತು ಮೆಟೆಕೆಲ್ ವಲಯದಲ್ಲಿ ಸಂಭವಿಸಿದೆ. ದಾಳಿಕೋರರು ನಿದ್ರೆಯಲ್ಲಿದ್ದ ನಿವಾಸಿಗಳ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.

"ಜನರನ್ನು ಕೊಂದು ಅವರ ಮನೆಗಳನ್ನು ಸಹ ಸುಟ್ಟು ಹಾಕಲಾಗಿದೆ ಎಂದು ನ್ಯಾಷನಲ್ ಆಡಿಸ್ ಸ್ಟ್ಯಾಂಡರ್ಡ್ ಸುದ್ದಿ ನಿಯತಕಾಲಿಕವು ಪ್ರತ್ಯಕ್ಷದರ್ಶಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿದೆ. ಭದ್ರತಾ ಪಡೆಗಳ ಮೇಲೂ ದಾಳಿ ನಡೆಸಲಾಗಿದೆ ಎನ್ನಲಾಗಿದೆ ಆದರೆ ದಾಳಿ ಕೋರರು ಬಂದು ಹೋದ ಮೇಲೆ ಭದ್ರತಾಪಡೆಗಳು ಸ್ಥಳಕ್ಕೆ ಆಗಮಿಸಿದ್ದವು. 

ಇನ್ನು ಭೀಕರ ನರಹತ್ಯೆಗೈದಿದ್ದ ಶಸ್ತ್ರಸರ್ಜಿತ 42 ಮಂದಿಯನ್ನು ಇಥಿಯೋಪಿಯಾ ಸೇನೆ ಹುಡುಕಿ ಹುಡುಕಿ ಕೊಂದು ಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com