ನೇಪಾಳ: ಜ.1 ರಿಂದ ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯಲು ಕೆಪಿ ಒಲಿ ಸರ್ಕಾರ ಶಿಫಾರಸು 

ನೇಪಾಳದಲ್ಲಿ ರಾಜಕೀಯ ಅಸ್ಥಿರತೆಯ ನಡುವೆಯೇ ಕೆಪಿ ಶರ್ಮಾ ಒಲಿ ನೇತೃತ್ವದ ಸರ್ಕಾರ ರಣತಂತ್ರ ಹೆಣೆಯುತ್ತಿದ್ದು, ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯುವುದಕ್ಕೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ.
ನೇಪಾಳ: ಜ.1 ರಿಂದ ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯಲು ಕೆಪಿ ಒಲಿ ಸರ್ಕಾರದ ಶಿಫಾರಸು
ನೇಪಾಳ: ಜ.1 ರಿಂದ ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯಲು ಕೆಪಿ ಒಲಿ ಸರ್ಕಾರದ ಶಿಫಾರಸು
Updated on

ಕಠ್ಮಂಡು: ನೇಪಾಳದಲ್ಲಿ ರಾಜಕೀಯ ಅಸ್ಥಿರತೆಯ ನಡುವೆಯೇ ಕೆಪಿ ಶರ್ಮಾ ಒಲಿ ನೇತೃತ್ವದ ಸರ್ಕಾರ ರಣತಂತ್ರ ಹೆಣೆಯುತ್ತಿದ್ದು, ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯುವುದಕ್ಕೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ. 

ಪ್ರತಿನಿಧಿಗಳ ಸಭೆಯನ್ನು ವಿಸರ್ಜನೆ ಮಾಡಿದ ಒಂದು ವಾರದ ನಂತರ ಈ ಶಿಫಾರಸು ಕಳಿಸಿದ್ದು, ಜ.1 ರಂದು ಸಭೆ ಕರೆಯುವುದಕ್ಕೆ ಕೇಳಿದೆ.

ಪ್ರಧಾನಿಗಳ ಶಿಫಾರಸಿನ ಆಧಾರದಲ್ಲಿ ವಿದ್ಯಾದೇವಿ ಭಂಡಾರಿ ಕಳೆದ ವಾರ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನ್ನು ವಿಸರ್ಜನೆ ಮಾಡಿದ್ದು, ಮಧ್ಯಂತರ ಚುನಾವಣೆಯನ್ನು ಘೋಷಿಸಿದ್ದರು. ಇದಕ್ಕೆ ಆಡಳಿತಾರೂಢ ಪಕ್ಷ ಹಾಗೂ ವಿಪಕ್ಷಗಳಿಂದ ಪ್ರತಿಭಟನೆಯೂ ವ್ಯಕ್ತವಾಗಿತ್ತು.

ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷ ಈಗ ಅಕ್ಷರಸಹ ಇಬ್ಭಾಗವಾಗಿದ್ದು,  ಪ್ರಚಂಡ ಅವರ ಬಣ ಹಾಗೂ ಕೆಪಿ ಶರ್ಮಾ ಒಲಿ ಬಣದ ನಡುವೆ ತಿಕ್ಕಾಟ ಉಂಟಾಗಿದೆ. ಈಗ ಪ್ರತಿನಿಧಿಗಳ ಸಭೆಯನ್ನು ವಿಸರ್ಜನೆ ಮಾಡಿದ ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ ನ್ಯಾಷನಲ್ ಅಸೆಂಬ್ಲಿಯ ಚಳಿಗಾಲದ ಅಧಿವೇಶನವನ್ನು ಜ.1 ರಿಂದ ಕರೆಯುವಂತೆ ಶಿಫಾರಸು ಕಳಿಸಲಾಗಿದೆ. 

ಪ್ರತಿನಿಧಿಗಳ ಸಭೆಯನ್ನು ವಿಸರ್ಜನೆ ಮಾಡಿದ ಬಳಿಕ ಪ್ರಚಂಡ ನೇತೃತ್ವದ ಬಣದ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.  ಈಗ ಎರಡೂ ಬಣದ ನಾಯಕರು ಪಕ್ಷದ ಮೇಲೆ ಹಕ್ಕು ಸ್ಥಾಪನೆಗಾಗಿ ಯತ್ನಿಸುತ್ತಿದ್ದು, ಚುನಾವಣಾ ಚಿಹ್ನೆಯನ್ನು ಪಡೆಯುವುದಕ್ಕೂ ಯತ್ನಿಸುತ್ತಿದ್ದಾರೆ, ಎನ್ ಸಿ ಪಿಯ ಯಾವ ಬಣ ಪಕ್ಷದ ಚಿಹ್ನೆ ಹಾಗೂ ಹೆಸರನ್ನು ಚುನಾವಣೆಗೆ ಬಳಸಿಕೊಳ್ಳುವುದಕ್ಕೆ ಕಾನೂನು ಬದ್ಧವಾಗಿ ಅಧಿಕಾರ ಹೊಂದಿದೆ ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com