ಹೊಸ ದೇಶಗಳಿಗೂ ವ್ಯಾಪಿಸಿದ ಕೊರೋನಾ ಸೋಂಕು: ಜಾಗತಿಕ ವೈರಸ್ ನಿಂದ ಹೆಚ್ಚಾದ ಅಪಾಯ-ಡಬ್ಲ್ಯುಎಚ್ ಒ 

ಕೊರೋನಾ ಸಾಂಕ್ರಾಮಿಕ ರೋಗವು ಸಹರನ್  ಆಫ್ರಿಕಾಕ್ಕೆ ಹರಡಿದ ನಂತರ ಮತ್ತು ಆರ್ಥಿಕ ಮಾರುಕಟ್ಟೆ ಕುಸಿತಕ್ಕೆ ಕಾರಣವಾದ ನಂತರ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ಅಪಾಯಕಾರಿಯಾಗಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಜಿನಿವಾ: ಕೊರೋನಾ ಸಾಂಕ್ರಾಮಿಕ ರೋಗವು ಸಹರನ್  ಆಫ್ರಿಕಾಕ್ಕೆ ಹರಡಿದ ನಂತರ ಮತ್ತು ಆರ್ಥಿಕ ಮಾರುಕಟ್ಟೆ ಕುಸಿತಕ್ಕೆ ಕಾರಣವಾದ ನಂತರ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ಅಪಾಯಕಾರಿಯಾಗಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. 

ಇತ್ತೀಚಿನ ದಿನಗಳಲ್ಲಿ ಹೊಸ ದೇಶಗಳಲ್ಲೂ ಕೊರೋನಾ ವೈರಸ್ ಹರಡುತ್ತಿದ್ದು, ಪ್ರಕರಣದ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ಅಪಾಯ  ಕೂಡಾ ಹೆಚ್ಚಾಗಿ ಆಗುತ್ತಿವೆ ಎಂದು ಡಬ್ಲ್ಯೂಹೆಚ್ ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ. 

ಈ ಬೆಳವಣಿಗೆ ಬಹಳ ಅಪಾಯಕಾರಿಯಾಗಿದೆ ಎಂದು ಟೆಡ್ರೊಸ್ ಜಿನಿವಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪ್ರಕರಣಗಳನ್ನು ಮೊದಲೇ ಪತ್ತೆಹಚ್ಚಲು, ರೋಗಿಗಳನ್ನು ಪ್ರತ್ಯೇಕಿಸಲು ಮತ್ತು ಕಾಳಜಿ ವಹಿಸಲು ದೃಢವಾದ ಕ್ರಮಗಳನ್ನು ಕೈ ಗೊಂಡರೆ ಈ ವೈರಸ್ ಹರಡದಂತೆ ನೋಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ಕಳೆದ 24 ಗಂಟೆಗಳ ಅವಧಿಯಲ್ಲಿ ಚೀನಾದ ಹೊರಭಾಗದಲ್ಲಿ ಸಾವಿರಕ್ಕೂ ಹೆಚ್ಚು ಕೋವಿದ್ ಸೋಂಕಿತ ಪ್ರಕರಣಗಳನ್ನು ಗುರುತಿಸಿದೆ. 

ಚೀನಾ ಹೊರತುಪಡಿಸಿ ಇತರ 51 ದೇಶಗಳಲ್ಲಿ ಸೋಂಕು ಪ್ರಕರಣಗಳು 1027ರಿಂದ 4621ಕ್ಕೆ ಏರಿಕೆಯಾಗಿವೆ. ಮೃತರ ಸಂಖ್ಯೆ ಕೂಡ 10ರಿಂದ 67ಕ್ಕೇರಿದೆ ಎಂದು ಡಬ್ಲ್ಯುಎಚ್ ಒ ತಿಳಿಸಿದೆ. 

ಚೀನಾದಲ್ಲಿ ಇಲ್ಲಿಯವರೆಗೆ ಸೋಂಕಿನಿಂದ 2835 ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 79251 ತಲುಪಿದೆ.
ಈ ನಡುವೆ  ಕೋವಿದ್ -19 ಸೊಂಕಿನ ಹರಡುವಿಕೆ ಭೀತಿಯಿಂದ ಷೇರು ಮಾರುಕಟ್ಟೆ ಹೀನಾಯ ಕುಸಿತ ಕಾಣುವ ಸಾಧ್ಯತೆಯಿದೆ ಎಂದು ಅಮೆರಿಕದ ಶ್ವೇತಭವನದ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಹೇಳಿಕೆ ನೀಡಿದ್ದಾರೆ. 

ಆರ್ಥಿಕ ಷೇರು ಮಾರುಕಟ್ಟೆ ಬದಲಾಗಬಹುದು ಮತ್ತು ಇನ್ನಷ್ಟು ದುಸ್ತಿತಿಗಿಳಿಯಬಹುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ವಾರ ಕೋವಿದ್ ಸೋಂಕಿನ ಭೀತಿಯಿಂದ ಅಮೆರಿಕದ ಷೇರು ಮಾರುಕಟ್ಟೆ ಭಾರಿ ಕುಸಿತ ಕಂಡಿತ್ತು. ಡೌ ಜಾನ್ಸ್ ಕೈಗಾರಿಕಾ ಸಂಸ್ಥೆಯ ಷೇರು 1000 ಅಂಕಗಳು ಅಂದರೆ ಶೇ. 3.8ರಷ್ಟು ಕುಸಿತ ಕಂಡ ನಂತರ ಎಲ್ಲಾ ಷೇರುಗಳ ಮೌಲ್ಯ ಇಳಿಕೆಯಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com