ಅಫ್ಘಾನಿಸ್ತಾನದಲ್ಲಿ ಯುದ್ಧವನ್ನು ಕೊನೆಗೊಳಿಸುವ ಗುರಿ: ಐತಿಹಾಸಿಕ ಒಪ್ಪಂದಕ್ಕೆ ಅಮೆರಿಕಾ-ತಾಲಿಬಾನ್ ಸಹಿ

ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು” ಮುಂದಾಗಿರುವ ಅಮೆರಿಕಾ ತಾಲಿಬಾನ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಅಫ್ಘಾನಿಸ್ತಾನದಲ್ಲಿ ಯುದ್ಧವನ್ನು ಕೊನೆಗೊಳಿಸುವ ಗುರಿ: ಐತಿಹಾಸಿಕ ಒಪ್ಪಂದಕ್ಕೆ ಅಮೆರಿಕಾ-ತಾಲಿಬಾನ್ ಸಹಿ
ಅಫ್ಘಾನಿಸ್ತಾನದಲ್ಲಿ ಯುದ್ಧವನ್ನು ಕೊನೆಗೊಳಿಸುವ ಗುರಿ: ಐತಿಹಾಸಿಕ ಒಪ್ಪಂದಕ್ಕೆ ಅಮೆರಿಕಾ-ತಾಲಿಬಾನ್ ಸಹಿ
Updated on

ದೋಹಾ: ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು” ಮುಂದಾಗಿರುವ ಅಮೆರಿಕಾ ತಾಲಿಬಾನ್ ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ಒಪ್ಪಂದಕ್ಕೆ ಸಹಿ ಹಾಕುವ ಮೊದಲು, ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, "ತಾಲಿಬಾನ್ ಬದ್ಧತೆಗಳ ಅನುಸರಣೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ ಮತ್ತು ಅವರ ಕಾರ್ಯದಿಂದಾಗಿ ನಾವು ಸೇನೆಯನ್ನು ಹಿಂಪಡೆಯುವ ವೇಗದ ಮಾಪನ ಮಾಡುತೇವೆ. ಅಫ್ಘಾನಿಸ್ತಾನವು ಎಂದಿಗೂ ಅಂತರರಾಷ್ಟ್ರೀಯ ಭಯೋತ್ಪಾದಕರಿಗೆ ನೆಲೆಯಾಗುವುದಿಲ್ಲಎಂದು ನಾವು ಖಚಿತಪಡಿಸುತ್ತೇವೆ." ಎಂದರು.

"ತಾಲಿಬಾನ್ ನಿಜವಾದ ಶಾಂತಿಯನ್ನು ಅನುಸರಿಸಲು ಮತ್ತು ಅಲ್ ಖೈದಾ ಮತ್ತು ಇತರ ವಿದೇಶಿ ಭಯೋತ್ಪಾದಕ ಗುಂಪುಗಳೊಂದಿಗೆ ತಮ್ಮ ಸಂಬಂಧವನ್ನು ಕೊನೆಗೊಳಿಸಲು ಆಸಕ್ತಿ ತೋರಿಸಿದಾಗ ಮಾತ್ರ ಪ್ರಯತ್ನ ಸಫಲಆಗಲಿದೆ. ನಾವು ಇಂದು ಸಹಿ ಮಾಡುವ ಒಪ್ಪಂದವು ಈ ಪ್ರಯತ್ನದ ನಿಜವಾದ ಪರೀಕ್ಷೆಯಾಗಿದೆ" ಎಂದು ಅವರು ಹೇಳಿದರು

ವಾಷಿಂಗ್ಟನ್ ಮತ್ತು ಅಫಘಾನ್ ಸರ್ಕಾರದ ಜಂಟಿ ಘೋಷಣೆಯ ಪ್ರಕಾರ, ಯುಎಸ್ ತನ್ನ ಎಲ್ಲಾ ಪಡೆಗಳನ್ನು ಅಫ್ಘಾನಿಸ್ತಾನದಿಂದ 14 ತಿಂಗಳಲ್ಲಿ ಹಿಂತೆಗೆದುಕೊಳ್ಳಲಿದೆ. ಈ ಯೋಜನೆ 'ಯುಎಸ್-ತಾಲಿಬಾನ್ ಒಪ್ಪಂದದ ಅಡಿಯಲ್ಲಿ ತಾಲಿಬಾನ್ ತನ್ನ ಬದ್ಧತೆಗಳನ್ನು ಈಡೇರಿಸುವುದಕ್ಕೆ ಒಳಪಟ್ಟಿರುತ್ತದೆ'.

'ಅಫಘಾನ್ ಭದ್ರತಾ ಪಡೆಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಬೆಂಬಲ ನೀಡುವ ಬಗ್ಗೆ ಅಮೆರಿಕಾ ತನ್ನ ಬದ್ಧತೆಗಳನ್ನು ಪುನರುಚ್ಚರಿಸುತ್ತದೆ, ಆಂತರಿಕ ಮತ್ತು ಬಾಹ್ಯ ಬೆದರಿಕೆಗಳನ್ನು ತಡೆಯಲು ಮತ್ತು ಪ್ರತಿಕ್ರಿಯಿಸಲು ಅಫಘಾನ್ ಭದ್ರತಾ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ನಿರಂತರ ಪ್ರಯತ್ನಗಳ ಮೂಲಕ, ಅಸ್ತಿತ್ವದಲ್ಲಿರುವ ಭದ್ರತಾ ಒಪ್ಪಂದಗಳ ಅಡಿಯಲ್ಲಿ ಅದರ ಬದ್ಧತೆಗಳಿಗೆ ಅನುಗುಣವಾಗಿ ಇದು ನಡೆಯಲಿದೆ.ಈ ಕುರಿತು ಎರಡೂ ರಾಷ್ಟ್ರಗಳು ಜಂಟಿ ಘೋಷಣೆ ಹೊರಡಿಸಿದೆ. ಎಂದು  ಟೋಲೊ ನ್ಯೂಸ್ ವರದಿ ಮಾಡಿದೆ.

ಘೋಷಣೆಯ ಪ್ರಕಾರ, ಯುಎಸ್ ಅಫ್ಘಾನಿಸ್ತಾನದಲ್ಲಿ ಯುಎಸ್ ಮಿಲಿಟರಿ ಪಡೆಗಳ ಸಂಖ್ಯೆಯನ್ನು 8,600 ಕ್ಕೆ ಇಳಿಸುತ್ತದೆ. ಹಾಗೆಯೇ ತಾಲಿಬಾನ್ ಒಪ್ಪಂದವನ್ನು ಜಾರಿಗೊಳಿಸಿದ ನಂತರದ  135 ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com