ಇರಾನ್ ಸೇನಾ ಉನ್ನತಾಧಿಕಾರಿ ಹತ್ಯೆ: ಮಧ್ಯ ಪ್ರಾಚ್ಯಾದಲ್ಲಿ ಹೆಚ್ಚುವರಿ ಸೇನಾಪಡೆ ನಿಯೋಜಿಸಿದ ಅಮೆರಿಕಾ 

ಇರಾನ್ ನ ಸೇನಾಧಿಕಾರಿಯ ಹತ್ಯೆಯ ನಂತರ ತನ್ನ ಸೇನೆಯನ್ನು ಬಲಪಡಿಸಲು ಅಮೆರಿಕಾ ಮಧ್ಯ ಪ್ರಾಚ್ಯಾಕ್ಕೆ ಸುಮಾರು 3 ಸಾವಿರ ಸೇನಾಪಡೆಯನ್ನು ಕಳುಹಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಅಮೆರಿಕಾ ಸೇನಾಪಡೆ
ಅಮೆರಿಕಾ ಸೇನಾಪಡೆ

ವಾಷಿಂಗ್ಟನ್: ಇರಾನ್ ನ ಸೇನಾಧಿಕಾರಿಯ ಹತ್ಯೆಯ ನಂತರ ತನ್ನ ಸೇನೆಯನ್ನು ಬಲಪಡಿಸಲು ಅಮೆರಿಕಾ ಮಧ್ಯ ಪ್ರಾಚ್ಯಾಕ್ಕೆ ಸುಮಾರು 3 ಸಾವಿರ ಸೇನಾಪಡೆಯನ್ನು ಕಳುಹಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.


ಉತ್ತರ ಕ್ಯಾರೊಲಿನಾದ ಫೋರ್ಟ್ ಬ್ರಗ್ಗ್ ನ 82ನೇ ಏರ್ ಬೋರ್ನ್ ವಲಯದಿಂದ ಸೇನಾಪಡೆ ಮಧ್ಯ ಪ್ರಾಚ್ಯಾಕ್ಕೆ ಹೋಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಮೆರಿಕಾದ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.


ಈ ವಾರದ ಆರಂಭದಲ್ಲಿ ಕುವೈತ್ ನಲ್ಲಿ ನಿಯೋಜನೆಗೊಂಡಿರುವ 82ನೇ ಏರ್ ಬೋರ್ನ್ ನ 700 ಸೈನಿಕರಿಗೆ ಹೆಚ್ಚುವರಿಯಾಗಿ ನಿನ್ನೆ 3 ಸಾವಿರಕ್ಕೂ ಹೆಚ್ಚು ಸೇನಾಪಡೆಯನ್ನು ಕಳುಹಿಸಲಾಗಿದೆ. 


ಇರಾನ್ ನ ಸೇನಾಧಿಕಾರಿಯ  ಹತ್ಯೆಯ ನಂತರ ಬಾಗ್ದಾದ್ ನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿ ಹೊರಗೆ ಅಲ್ಲಿನ ಸೈನಿಕರು ಮತ್ತು ಅವರ ಬೆಂಬಲಿಗರು ದಾಳಿ ನಡೆಸಲು ಹೊಂಚು ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತೀವ್ರ ಭದ್ರತೆ ಕ್ರಮವಾಗಿ ಅಮೆರಿಕಾ ಈ ಕ್ರಮ ಕೈಗೊಂಡಿದೆ.


ಇರಾನ್ ನ ಕುಡ್ಸ್ ಪಡೆಯ ಕಮಾಂಡರ್ ಜನರಲ್ ಸೊಲೈಮಾನಿ ಅವರ ಹತ್ಯೆಗೆ ಪ್ರತೀಕಾರವಾಗಿ ಇರಾನ್ ದಾಳಿಗೆ ಮುಂದಾಗಬಹುದು ಎಂಬ ಯೋಜನೆಯಿಂದಲೇ ಅಮೆರಿಕಾ ಹೆಚ್ಚುವರಿ ಸೇನಾಪಡೆ ಕಳುಹಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com