ಫೆಬ್ರವರಿ ಕೊನೆ ವಾರದಲ್ಲಿ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಟ್ರಂಪ್...?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ.
ಫೆಬ್ರವರಿ ಕೊನೆ ವಾರದಲ್ಲಿ  ಭಾರತಕ್ಕೆ  ಅಮೆರಿಕಾ ಅಧ್ಯಕ್ಷ  ಟ್ರಂಪ್...?
ಫೆಬ್ರವರಿ ಕೊನೆ ವಾರದಲ್ಲಿ  ಭಾರತಕ್ಕೆ  ಅಮೆರಿಕಾ ಅಧ್ಯಕ್ಷ  ಟ್ರಂಪ್...?
Updated on

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಟ್ರಂಪ್ ಭಾರತ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸಲು ವಾಷಿಂಗ್ಟನ್‌ನಿಂದ ಭದ್ರತಾ ಹಾಗೂ ಲಾಜಿಸ್ಟಿಕ್ ತಂಡಗಳು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿವೆ ಎಂದು ಉನ್ನತ ರಾಜತಾಂತ್ರಿಕ ಮೂಲಗಳು ತಿಳಿಸಿವೆ. 

ಟ್ರಂಪ್  ಭಾರತ ಭೇಟಿಯ ಬಗ್ಗೆ  ಈವರೆಗೆ  ಯಾವುದೇ ಅಧಿಕೃತ  ಹೇಳಿಕೆ  ಹೊರಬಿದ್ದಿಲ್ಲವಾದರೂ,   ಟ್ರಂಪ್  ಭಾರತ  ಭೇಟಿಯ  ಸಾಧ್ಯತೆಯನ್ನು  ಅಮೆರಿಕಾದ  ಅಧಿಕೃತ ಮೂಲಗಳು ಖಚಿತಪಡಿಸಿವೆ. 

ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಡೋನಾಲ್ಡ್  ಟ್ರಂಪ್ ಅವರನ್ನು ಪ್ರಧಾನಿ  ಮೋದಿ  ಕೋರಿದ್ದರು  ಆದರೆ, ಟ್ರಂಪ್ ನಿರಾಕರಿದ್ದರುಎಂದು ವರದಿಯಾಗಿದೆ. ಆದರೆ, ತಮ್ಮ ಭಾರತ ಭೇಟಿಗೆ ಶೀಘ್ರದಲ್ಲಿಯೇ ವ್ಯವಸ್ಥೆ ಕೈಗೊಳ್ಳುವಂತೆ ಸೂಚನೆ  ನೀಡಿದ್ದಾರೆ ಎಂದು ಶ್ವೇತ ಭವನ ಮೂಲಗಳು ಹೇಳಿವೆ.  

ಜನವರಿ 7 ರಂದು ನಡೆದ ದೂರವಾಣಿ ಮಾತುಕತೆಯಲ್ಲಿ ಪ್ರಧಾನಿ ಮೋದಿ ಈ  ಅಂಶವನ್ನು ಪ್ರಸ್ತಾಪಿಸಿದ್ದರು ಎಂದು ವರದಿಯಾಗಿದೆ. 
ಅಮೆರಿಕಾ ಅಧ್ಯಕ್ಷರು ಫೆಬ್ರವರಿ ಕೊನೆಯ ವಾರದಲ್ಲಿ ಭಾರತ ಭೇಟಿ ಸಾಧ್ಯವಾಗಬಹುದು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷಿ ಶ್ರೀಂಗ್ಲಾ ತಿಳಿಸಿದ್ದಾರೆ. 

ತಮ್ಮ ಭಾರತ ಪ್ರವಾಸಕ್ಕೆ ವ್ಯವಸ್ಥೆ ಮಾಡುವಂತೆ ಟ್ರಂಪ್ ಈಗಾಗಲೇ ತಮ್ಮ ತಂಡಕ್ಕೆ ಸೂಚನೆ ನೀಡಿದ್ದಾರೆ ಅವರು ಹೇಳಿದ್ದಾರೆ.
ಟ್ರಂಪ್  ಭಾರತ ಭೇಟಿಯ ವೇಳೆ ಉಭಯ ದೇಶಗಳ ನಡುವೆ 2018ರಿಂದ ಬಾಕಿ ಉಳಿದುಕೊಂಡಿರುವ ಹಲವು ವ್ಯಾಪಾರ ಒಪ್ಪಂದಗಳು   ಇತ್ಯರ್ಥಗೊಳ್ಳುವ ನಿರೀಕ್ಷೆಯಿದೆ. ಜೂನ್ 2019 ರಲ್ಲಿ ಭಾರತಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಅಮೆರಿಕಾ ರದ್ದುಗೊಳಿಸಿತ್ತು, ಅದು ಪುನರುಜ್ಜೀವನಗೊಳ್ಳುವ ಸಾಧ್ಯತೆಯಿದೆ. ಅಮೆರಿಕಾದಲ್ಲಿ ಭಾರತದ ಹೂಡಿಕೆಗಳು ಮತ್ತು ತೈಲ ಉತ್ಪನ್ನಗಳ ಆಮದನ್ನು ಹೆಚ್ಚಿಸುವ ಬಗ್ಗೆ ಮಾತುಕತೆಗಳು ನಡೆಯುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com