ಯುರೋಪಿಯನ್ ಸಂಸತ್ ನಲ್ಲಿ ಭಾರತದ ಸಿಎಎ ವಿರೋಧಿ ಮತ ಪ್ರಕ್ರಿಯೆ ಮುಂದೂಡಿಕೆ!

ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಯುರೋಪಿಯನ್ ಸಂಸತ್ ಸದಸ್ಯರು ಮಂಡಿಸಿದ್ದ ನಿರ್ಣಯದ ಮೇಲಿನ ಮತ ಪ್ರಕ್ರಿಯೆ ಮುಂದೂಡಲ್ಪಟ್ಟಿದೆ. 
ಯುರೋಪಿಯನ್ ಸಂಸತ್ ನಲ್ಲಿ ಭಾರತದ ಸಿಎಎ ವಿರೋಧಿ ಮತ ಪ್ರಕ್ರಿಯೆ ಮುಂದೂಡಿಕೆ!
ಯುರೋಪಿಯನ್ ಸಂಸತ್ ನಲ್ಲಿ ಭಾರತದ ಸಿಎಎ ವಿರೋಧಿ ಮತ ಪ್ರಕ್ರಿಯೆ ಮುಂದೂಡಿಕೆ!

ನವದೆಹಲಿ: ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಯುರೋಪಿಯನ್ ಸಂಸತ್ ಸದಸ್ಯರು ಮಂಡಿಸಿದ್ದ ನಿರ್ಣಯದ ಮೇಲಿನ ಮತ ಪ್ರಕ್ರಿಯೆ ಮುಂದೂಡಲ್ಪಟ್ಟಿದೆ. 

ಚರ್ಚೆಗೆ ಸಿಎಎ ವಿರೋಧಿ ನಿರ್ಣಯವನ್ನು ಚರ್ಚೆಗೆ ತೆಗೆದುಕೊಂಡಿದೆ. ಆದರೆ ನಿರ್ಣಯದ ಮೇಲಿನ ಮತ ಪ್ರಕ್ರಿಯೆಯನ್ನು ಮಾರ್ಚ್ ಗೆ ಮುಂದೂಡಲಾಗಿದೆ. 

ಮಾರ್ಚ್ ನಲ್ಲಿ ಮಹಾಧಿವೇಶನ (ಪ್ಲೀನರಿ ಸೆಷನ್) ನಡೆಯಲಿದ್ದು ಆ ಅಧಿವೇಶನದಲ್ಲೇ ಸಿಎಎ ಗೆ ಸಂಬಂಧಿಸಿದ ಮತ ಪ್ರಕ್ರಿಯೆ ಚಾಲನೆ ನೀಡಲು ಸಂಸತ್ ಸದಸ್ಯರು ತೀರ್ಮಾನಿಸಿದ್ದಾರೆ. ಉಳಿದಂತೆ ನಿರ್ಣಯದ ಮೇಲಿನ ಚರ್ಚೆ ನಿಗದಿಯಂತೆಯೇ ನಡೆಯಲಿದೆ.

ಮತ ಪ್ರಕ್ರಿಯೆ ಮುಂದೂಡುವುದಕ್ಕೆ ಇದ್ದ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ ಆದರೂ ಯುರೋಪಿಯನ್ ಸಂಸತ್ ನಲ್ಲಿ ಸಿಎಎ ಸಂಬಂಧ ಮತ ಎಣಿಕೆ ವಿರುದ್ಧವಾಗಿ ಭಾರತ ಸರ್ಕಾರದ ಪ್ರಯತ್ನಗಳಿಗೆ ಸದ್ಯಕ್ಕೆ ಯಶಸ್ವಿಯಾದಂತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com