ಎಡ್ವರ್ಡ್ ಫಿಲಿಫ್  ರಾಜೀನಾಮೆ: ಫ್ರಾನ್ಸ್ ನೂತನ ಪ್ರಧಾನಿಯಾಗಿ ಜೀನ್ ಕ್ಯಾಸ್ಟೆಕ್ಸ್  ನೇಮಕ 

2022 ರ ಚುನಾವಣೆಗೆ ಮುಂಚಿತವಾಗಿ ತನ್ನ ಅಧ್ಯಕ್ಷ ಸ್ಥಾನವನ್ನು ಗಟ್ಟಿಗೊಳಿಸುವ ಮತ್ತು ಕೊರೋನಾವೈರಸ್ ಬಿಕ್ಕಟ್ಟಿನಿಂದ ಆರ್ಥಿಕ ಚೇತರಿಕೆ ಪ್ರಾರಂಭಿಸುವ ಉದ್ದೇಶದಿಂದ ಫ್ರಾನ್ಸ್‌ನ ಅಧ್ಯಕ್ಷ ಮ್ಯಾಕ್ರೊನ್ ಲಾಕ್‌ಡೌನ್ ತಜ್ಞ ಜೀನ್ ಕ್ಯಾಸ್ಟೆಕ್ಸ್  ಅವರನ್ನು ಫ್ರಾನ್ಸ್ ನ ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಜೀನ್ ಕ್ಯಾಸ್ಟೆಕ್ಸ್
ಜೀನ್ ಕ್ಯಾಸ್ಟೆಕ್ಸ್

ಪ್ಯಾರೀಸ್: 2022 ರ ಚುನಾವಣೆಗೆ ಮುಂಚಿತವಾಗಿ ತನ್ನ ಅಧ್ಯಕ್ಷ ಸ್ಥಾನವನ್ನು ಗಟ್ಟಿಗೊಳಿಸುವ ಮತ್ತು ಕೊರೋನಾವೈರಸ್ ಬಿಕ್ಕಟ್ಟಿನಿಂದ ಆರ್ಥಿಕ ಚೇತರಿಕೆ ಪ್ರಾರಂಭಿಸುವ ಉದ್ದೇಶದಿಂದ ಫ್ರಾನ್ಸ್‌ನ ಅಧ್ಯಕ್ಷ ಮ್ಯಾಕ್ರೊನ್ ಲಾಕ್‌ಡೌನ್ ತಜ್ಞ ಜೀನ್ ಕ್ಯಾಸ್ಟೆಕ್ಸ್  ಅವರನ್ನು ಫ್ರಾನ್ಸ್ ನ ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಕೊರೋನಾವೈರಸ್  ಲಾಕ್‌ಡೌನ್‌ನಿಂದ ಫ್ರಾನ್ಸ್‌ನ ಆರ್ಥಿಕ ಕುಸಿತವನ್ನು ನಿಭಾಯಿಸಲು ಏಪ್ರಿಲ್‌ನಲ್ಲಿಮ್ಯಾಕ್ರೊನ್ ಎಡ್ವರ್ಡ್ ಫಿಲಿಫ್  ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕ್ಯಾಸ್ಟೆಕ್ಸ್  ಅವರ ಹೆಸರು ಸೂಚಿಸಿದ್ದಾರೆ.೪

ಶುಕ್ರವಾರ ಸಂಜೆ ಹೋಟೆಲ್ ಡಿ ಮ್ಯಾಟಿಗ್ನಾನ್‌ನಲ್ಲಿರುವ ಪ್ರಧಾನ ಮಂತ್ರಿಯವರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಫಿಲಿಫ್  ಕ್ಯಾಸ್ಟೆಕ್ಸ್  ಅವರಿಗೆ ಪ್ರಧಾನಿ ಸ್ಥಾನವನ್ನು ವರ್ಗಾಯಿಸಿದ್ದಾರೆ.  ಈ ವೇಳೆ ಮಾತನಾಡಿದ ನೂತನ ಪ್ರಧಾನಿ ಕ್ಯಾಸ್ಟೆಕ್ಸ್  "ಕೊರೋನಾವೈರಸ್ ಹಾವಳಿ ನಿಂತಿಲ್ಲ ಆದರೆ  ಅದು ಪ್ರಚೋದಿಸಿದ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟು ಸಾಕಷ್ಟು ಜಟಿಲವಾಗಿದೆ" ಎಂದರು. ಅಲ್ಲದೆ ಈ ಬಿಕ್ಕಟ್ಟನ್ನು ಎದುರಿಸಲು ನಾವು ಎಂದಿಗಿಂತಲೂ ಹೆಚ್ಚು ಒಗ್ಗಟ್ಟನ್ನು ಪ್ರದರ್ಶಿಆಬೇಕು ಎಂದು ಅಭಿಪ್ರಾಯಪಟ್ಟರು. 

ಕಳೆದ ಮೂರು ವರ್ಷಗಳಿಂಡ ಫ್ರಾಸ್ನ್ ತೀವ್ರ ತರದ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದಕ್ಕಾಗಿಯೇ ಪ್ರಧಾನಿ ಸ್ಥಾನದಲ್ಲಿ ಬದಲಾವಣೆ ತರಲಾಗಿದೆ. ಅಧ್ಯಕ್ಷ ಮ್ಯಾಕ್ರೊನ್ ಆಡಳಿತ ಸುಧಾರಣೆ ಮಾಡಲು ಮುಂದಾಗಿದ್ದು ನೂತನ ಪ್ರಧಾನ ಮಂತ್ರಿ ಶೀಘ್ರವೇ ಸಂಪುಟ ರಚನೆ ಮಾಡಲಿದ್ದಾರೆ ಎಂದು ವರದಿಯಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com