ಕೊರೋನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಬಹುದು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

ಕಳೆದ ಒಂದು ತಿಂಗಳಿಂದ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕೂಡ ವೈರಸ್ ನ್ನು ನಿಯಂತ್ರಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ(ಸಂಗ್ರಹ ಚಿತ್ರ)
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ(ಸಂಗ್ರಹ ಚಿತ್ರ)

ಜಿನೀವಾ: ಕಳೆದ ಒಂದು ತಿಂಗಳಿಂದ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕೂಡ ವೈರಸ್ ನ್ನು ನಿಯಂತ್ರಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇಟಲಿ, ಸ್ಪೈನ್, ದಕ್ಷಿಣ ಕೊರಿಯಾ ಮತ್ತು ಭಾರತದ ಅತಿದೊಡ್ಡ ಕೊಳಚೆ ಪ್ರದೇಶ ಮುಂಬೈಯ ಧಾರಾವಿ ಪ್ರದೇಶವನ್ನು ಉದಾಹರಣೆಯಾಗಿ ಕೊಟ್ಟು, ಎಷ್ಟೇ ವೇಗವಾಗಿ ಕೊರೋನಾ ಹರಡುತ್ತಿದ್ದರೂ ಕೂಡ ಅದನ್ನು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವ ಮೂಲಕ ತಡೆಗಟ್ಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅದನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಕಳೆದ ಒಂದು-ಒಂದೂವರೆ ತಿಂಗಳಿನಿಂದ ಕೊರೋನಾ ಪ್ರಕರಣಗಳು ದುಪ್ಪಟ್ಟಾಗಿದೆ. ತೀವ್ರ ಮಟ್ಟದಲ್ಲಿ ಹೆಚ್ಚಾಗುತ್ತಿದ್ದರೂ ಕೂಡ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದು ವಿಶ್ವದ ಹಲವೆಡೆಯ ಉದಾಹರಣೆಗಳ ಮೂಲಕ ಹೇಳಬಹುದು ಎಂದು ನಿನ್ನೆ ಟೆಡ್ರೊಸ್ ಜಿನಿವಾದಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಹೇಳಿದ್ದಾರೆ.

ಸಮುದಾಯಗಳ ಮೇಲೆ ಗಮನ ಕೇಂದ್ರೀಕರಿಸಿ ಮೂಲಭೂತ ಅಂಶಗಳಾದ ಕೊರೋನಾ ಪರೀಕ್ಷೆ, ಕೊರೋನಾ ಸೋಂಕಿತರನ್ನು ಪತ್ತೆಹಚ್ಚುವಿಕೆ, ಅವರನ್ನು ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವುದು, ಸೋಂಕಿತರನ್ನು ಪ್ರತ್ಯೇಕಿಸುವುದು, ಸೋಂಕಿತರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಿ ನಿವಾರಿಸಬಹುದು ಎಂದು ಸಲಹೆ ನೀಡಿದ್ದಾರೆ.

ಕೊರೋನಾ ವೈರಸ್ ಗೆ ವಿಶ್ವದಾದ್ಯಂತ ಇದುವರೆಗೆ 5 ಲಕ್ಷದ 55 ಸಾವಿರ ಜನ ಮೃತಪಟ್ಟಿದ್ದಾರೆ. ಸುಮಾರು 12.3 ದಶಲಕ್ಷ ಮಂದಿಗೆ ಸೋಂಕು ತಗುಲಿದೆ ಎಂದು ವಿಶ್ವದ 196 ದೇಶಗಳು ಮತ್ತು ಪ್ರಾಂತ್ಯಗಳಿಂದ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com