ನೂರ್ ವಾಲಿ ಮೆಹ್ಸೂದ್ ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಣೆ: ಪಾಕಿಸ್ತಾನಕ್ಕೆ ಮುಖಭಂಗ
ನ್ಯೂಯಾರ್ಕ್: ಅಲ್-ಖೈದಾ ಉಗ್ರ ಸಂಘಟನೆಗೆ ಹಣಕಾಸು ಪೂರೈಕೆ, ಪಿತೂರಿ ಮತ್ತಿತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪಾಕಿಸ್ತಾನದ ತೆಹ್ರಿಕ್ -ಇ- ತಾಲಿಬಾನ್ ಉಗ್ರ ಸಂಘಟನೆಯ ಮುಖಂಡ ನೂರ್ ವಾಲಿ ಮೆಹ್ಸೂದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಐಸ್ ಐಎಲ್ ಮತ್ತು ಅಲ್ ಖೈದಾ ನಿರ್ಬಂಧ ಕಮಿಟಿ ಮೆಹ್ಸೂದ್ ನನ್ನು (42) ಗುರುವಾರ ಅಲ್ ಖೈದಾ ನಿರ್ಬಂಧ ಪಟ್ಟಿಗೆ ಸೇರಿಸಿದ್ದು, ಪಾಕಿಸ್ತಾನದ ಆತನ ಆಸ್ತಿ ವಶಪಡಿಸಿಕೊಂಡು, ಪ್ರಯಾಣ ಮತ್ತು ಶಸಾಸ್ತ್ರ ನಿರ್ಬಂಧವನ್ನು ಘೋಷಿಸಲಾಗಿದೆ.
ಅಲ್ ಖೈದಾ ಉಗ್ರ ಸಂಘಟನೆಗೆ ಹಣಕಾಸು ಪೂರೈಕೆ, ಪಿತೂರಿ ಮತ್ತಿತರ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಮೆಹ್ಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲಾಗಿದೆ ಎಂದು ನಿರ್ಬಂಧ ಸಮಿತಿ ತಿಳಿಸಿದೆ.
ಮಾಜಿ ಟಿಟಿಪಿ ನಾಯಕ ಮೌಲಾನಾ ಫಜಲುಲ್ಲಾ ಸಾವಿನ ಬಳಿಕ ಜೂನ್ 2018ರಲ್ಲಿ ಮೆಹ್ಸೂದ್ ತೆಹ್ರಿಕ್-ಇ- ತಾಲಿಬಾನ್
ಸಂಘಟನೆಯ ನಾಯಕತ್ವ ವಹಿಸಿದ್ದ. ಅಲೈ ಖೈದಾ ಸಂಘಟನೆಯೊಂದಿಗೆ ಸಹಭಾಗಿತ್ವದ ಹಿನ್ನೆಲೆಯಲ್ಲಿ 2011 ಜುಲೈ 29 ರಂದು ಟಿಟಿಪಿ ವಿಶ್ವಸಂಸ್ಥೆಯ ಕಪ್ಪು ಪಟ್ಟಿಗೆ ಸೇರಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ