ಪಾಕ್ ಧ್ವಜ
ಪಾಕ್ ಧ್ವಜ

ಪಿಒಕೆ ಇಲ್ಲದ ಭೂಪಟ, ಜಿನ್ನಾ ಕುರಿತು ಅಸ್ಪಷ್ಟ ಮಾಹಿತಿ, 100ಕ್ಕೂ ಪಠ್ಯಪುಸ್ತಕ ಬ್ಯಾನ್ ಮಾಡಿ ಪಾಕ್!

ಪಾಕಿಸ್ತಾನದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ನಮೂದಿಸಿಲ್ಲದ, ಪಾಕ್ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಕುರಿತ ಅಸ್ಪಷ್ಟ ಮಾಹಿತಿ ಇದ್ದ 100ಕ್ಕೂ ಹೆಚ್ಚು ಪಠ್ಯಪುಸ್ತಕವನ್ನು ಪಾಕಿಸ್ತಾನದ ಪಂಜಾಬ್ ಸರ್ಕಾರ ರದ್ದುಗೊಳಿಸಿದೆ. 
Published on

ಲಾಹೋರ್: ಪಾಕಿಸ್ತಾನದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ನಮೂದಿಸಿಲ್ಲದ, ಪಾಕ್ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಕುರಿತ ಅಸ್ಪಷ್ಟ ಮಾಹಿತಿ ಇದ್ದ 100ಕ್ಕೂ ಹೆಚ್ಚು ಪಠ್ಯಪುಸ್ತಕವನ್ನು ಪಾಕಿಸ್ತಾನದ ಪಂಜಾಬ್ ಸರ್ಕಾರ ರದ್ದುಗೊಳಿಸಿದೆ. 

ಮೊಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ದಾಂತವನ್ನು ಖಂಡಿಸುವ ಸಾಲುಗಳು ಮತ್ತು ರಾಷ್ಟ್ರಕವಿ ಮೊಹಮ್ಮದ್ ಇಕ್ಬಾಲ್ ಅವರ ಜನ್ಮ ದಿನಾಂಕವನ್ನು ಪಠ್ಯ ಪುಸ್ತಕದಲ್ಲಿ ತಪ್ಪಾಗಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪುಸ್ತಕಗಳನ್ನು ಬ್ಯಾನ್ ಮಾಡಿದೆ. 

ಪಂಜಾಬ್ ಪಠ್ಯಪುಸ್ತಕ ಬೋರ್ಡ್ ನ ವ್ಯವಸ್ಥಾಪಕ ನಿರ್ದೇಶಕ ರಾಯ್ ಮನ್ಜೂರ್ ನಾಸೀರ್ ಅವರು ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಲಿಂಕ್ ಇಂಟರ್ ನ್ಯಾಷನಲ್, ಪಾರಾಗಾನ್ ಬುಕ್ಸ್ ಪ್ರಕಾಶನಗಳ 10 ಸಾವಿರ ಆಕ್ಷೇಪಾರ್ಹ ಪುಸ್ತಕಗಳನ್ನು ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಂದ ವಾಪಸ್ ಪಡೆಯಲಾಗಿದೆ ಎಂದರು.

X

Advertisement

X
Kannada Prabha
www.kannadaprabha.com