ಇಸ್ಲಾಮಾಬಾದ್: ಭಾರತೀಯ ರಾಯಭಾರಿಗೆ ಐಎಸ್ಐ ಗೂಢಚಾರರಿಂದ ಕಿರುಕುಳ

ಇಸ್ಲಾಮಾಬಾದ್ ನಲ್ಲಿ ಭಾರತೀಯ ರಾಯಭಾರಿಗೆ ಐಎಸ್ಐ ಗೂಢಚಾರು ಕಿರುಕುಳ ನೀಡಿ, ಬೆದರಿಕೆ ಹಾಕಿದ್ದಾರೆ. 
ಇಸ್ಲಾಮಾಬಾದ್: ಭಾರತೀಯ ರಾಯಭಾರಿಗೆ ಐಎಸ್ಐ ಗೂಢಚಾರರಿಂದ ಕಿರುಕುಳ
ಇಸ್ಲಾಮಾಬಾದ್: ಭಾರತೀಯ ರಾಯಭಾರಿಗೆ ಐಎಸ್ಐ ಗೂಢಚಾರರಿಂದ ಕಿರುಕುಳ
Updated on

ನವದೆಹಲಿ: ಇಸ್ಲಾಮಾಬಾದ್ ನಲ್ಲಿ ಭಾರತೀಯ ರಾಯಭಾರಿಗೆ ಐಎಸ್ಐ ಗೂಢಚಾರು ಕಿರುಕುಳ ನೀಡಿ, ಬೆದರಿಕೆ ಹಾಕಿದ್ದಾರೆ. 

ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ನ ಅಧಿಕಾರಿಗಳನ್ನು ಗೂಢಚಾರಿಕೆ ಆರೋಪದಡಿ ಗಡಿಪಾರು ಮಾಡಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಭಾರತದ ಅಧಿಕಾರಿ ಗೌರವ್ ಅಹ್ಲುವಾಲಿಯ ಅವರ ನಿವಾಸದ ಎದುರು ಬೈಕ್ ಹಾಗೂ ಕಾರುಗಳಲ್ಲಿ ಗೂಢಚಾರರನ್ನು ಐಎಸ್ಐ ನಿಯೋಜಿಸಿದ್ದು ಅಹ್ಲುವಾಲಿಯಾ ವಾಹನವನ್ನು ಹಿಂಬಾಲಿಸುತ್ತಿದ್ದಾರೆ.

ಅಹ್ಲುವಾಲಿಯಾ ಅವರ ವಾಹನವನ್ನು ಗೂಢಚಾರರು ಹಿಂಬಾಲಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಈ ಬೆಳವಣಿಗೆ ಬಗ್ಗೆ ಭಾರತ ಸರ್ಕಾರ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com