ನೀರವ್ ಮೋದಿ
ನೀರವ್ ಮೋದಿ

ಪಿಎನ್ಬಿ ವಂಚನೆ ಪ್ರಕರಣ: ಜುಲೈ 9ರವರೆಗೆ ನೀರವ್ ಮೋದಿ ಕಸ್ಟಡಿ ಅವಧಿ ವಿಸ್ತರಣೆ!

ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಬಹುಕೋಟಿ ವಂಚನೆ ನಂತರ ದೇಶ ಬಿಟ್ಟು ಪಲಾಯನ ಮಾಡಿ ಸದ್ಯ ಲಂಡನ್ ಜೈಲಿನಲ್ಲಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಕಸ್ಟಡಿ ಅವಧಿಯನ್ನು ಜುಲೈ 9ರವರೆಗೆ ವಿಸ್ತರಿಸಲಾಗಿದೆ. 

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಬಹುಕೋಟಿ ವಂಚನೆ ನಂತರ ದೇಶ ಬಿಟ್ಟು ಪಲಾಯನ ಮಾಡಿ ಸದ್ಯ ಲಂಡನ್ ಜೈಲಿನಲ್ಲಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಕಸ್ಟಡಿ ಅವಧಿಯನ್ನು ಜುಲೈ 9ರವರೆಗೆ ವಿಸ್ತರಿಸಲಾಗಿದೆ. 

ಸದ್ಯ ನೈರುತ್ಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿರುವ 49 ವರ್ಷದ ಆಭರಣ ವ್ಯಾಪಾರಿ, ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ರಿಮಾಂಡ್ ವಿಚಾರಣೆಗೆ ವಿಡಿಯೋ-ಕಾಲ್ ಮೂಲಕ ಹಾಜರಾಗಿದ್ದರು.

ಮುಂದಿನ ವಿಚಾರಣೆಯು ಸೆಪ್ಟೆಂಬರ್ 7ರಂದು ನಡೆಯಲಿದ್ದು ಅಂದು ಭಾರತಕ್ಕೆ ಹಸ್ತಾಂತರ ಕುರಿತಂತೆ ವಿಚಾರಣೆಯನ್ನು ವೀಡಿಯೊ ಕಾಲ್ ಮೂಲಕ ನಡೆಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಜಿ ಅವರು ಮೋದಿಗೆ ತಿಳಿಸಿದರು.

ಕಳೆದ ತಿಂಗಳು, ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮೊದಲ ಭಾಗದ ಹಸ್ತಾಂತರ ವಿಚಾರಣೆ ನಡೆದಿತ್ತು. ಇದು ಕೊರೊನಾವೈರಸ್ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ವಿಚಾರಣೆ ಮುಂದೂಡಲಾಗಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ಎರಡನೇ ಭಾಗದ ವಿಚಾರಣೆ ಸೆಪ್ಟೆಂಬರ್ 7ರಿಂದ ಐದು ದಿನಗಳ ನಡೆಯಲಿದೆ ಎಂದು ತಿಳಿಸಿದರು. 

Related Stories

No stories found.

Advertisement

X
Kannada Prabha
www.kannadaprabha.com