ದಾಳಿ
ವಿದೇಶ
ಮುಗ್ಧ ಹಳ್ಳಿಗರ ಮೇಲೆ ಬಂದೂಕುಧಾರಿಗಳಿಂದ ಗುಂಡಿನ ದಾಳಿ; 50 ಜನರ ಹತ್ಯೆ
ಸ್ಥಳೀಯ ಆಡಳಿತಕ್ಕೆ ಸೇರಿದ ಆರು ಹಳ್ಳಿಗಳಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿ ಒಟ್ಟು 50 ಜನರ ಹತ್ಯೆಗೈದಿದ್ದಾರೆ.
ಲಾಗೋಸ್: ಸ್ಥಳೀಯ ಆಡಳಿತಕ್ಕೆ ಸೇರಿದ ಆರು ಹಳ್ಳಿಗಳಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿ ಒಟ್ಟು 50 ಜನರ ಹತ್ಯೆಗೈದಿದ್ದಾರೆ.
ಗುಂಡಿನೇಟಿಗೆ ಬಲಿಯಾದವರಲ್ಲಿ ಹಸುಗೂಸುಗಳೂ ಸೇರಿದ್ದು, ಭಾನುವಾರ ಈ ರಕ್ತಪಾತ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ಯದ ಉತ್ತರ ಭಾಗದಲ್ಲಿರುವ ಗಿವಾ, ಬಿರ್ಮಿನ್ ಗ್ವಾರಿ ಮತ್ತು ಇಗಾಬಿ ವಲಯದ ಆರು ಹಳ್ಳಿಗಳಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

