ಅತ್ಯಾಚಾರ ಪ್ರಕರಣ: ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ಗೆ 23 ವರ್ಷ ಜೈಲು

ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಪ್ರಸಿದ್ಧ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ಗೆ ನ್ಯೂಯಾರ್ಕ್ ಕೋರ್ಟ್  ಬುಧವಾರ 23 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 
ಹಾರ್ವೆ ವೈನ್ಸ್ಟೈನ್
ಹಾರ್ವೆ ವೈನ್ಸ್ಟೈನ್

ನ್ಯೂಯಾರ್ಕ್: ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಪ್ರಸಿದ್ಧ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ಗೆ ನ್ಯೂಯಾರ್ಕ್ ಕೋರ್ಟ್  ಬುಧವಾರ 23 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ವಿವಾದಿತ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ಸ್ಟೈನ್. ಖ್ಯಾತ ನಟಿಯರಾದ ಆಂಜೆಲಿನಾ ಜೂಲಿ, ಗ್ವಿನೆತ್ ಪಾಲ್ಟ್ರೋ, ಕಾರಾ ಡೆಲಿವಿಂಗ್ನೆ, ಸೇರಿ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊಂದಿದ್ದರು.ಇನ್ನು ಈ ಪ್ರಕರಣ ಬೆಳಕು ಕಾಣುತ್ತಿದ್ದಂತೆಯೇ ಹಾಲಿವುಡ್ ಮಿಟೂ ಚಳುವಳಿ ಪ್ರಾರಂಭವಾಗಿತ್ತು. ವೈನ್ಸ್ಟೈನ್ ನಿಂದ ಲೈಂಗಿಕವಾಗಿ ದುರುಪಯೋಗಕ್ಕೀಡಾಗಿದ್ದ ಹಾಗು ಹಲ್ಲೆಗೊಳಗಾಗಿದ್ದ ಅನೇಕ ನಟಿಯರು ತಮ್ಮ ಅನುಭವವನ್ನು ಹೇಳಿಕೊಂಡಂತೆ ಪ್ರಬಲ ಅಥವಾ ಅಧಿಕಾರದಲ್ಲಿರುವ ಪುರುಷರಿಂಡ ಲೈಂಗಿಕ ಕಿರುಕುಳಕ್ಕೆ ಒಲಗಾದ ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಮಿಟೂ’ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

67 ವರ್ಷದ ವೈನ್ಸ್ಟೈನ್ ತೀರ್ಪು ಆಲಿಸಲು ಗಾಲಿಕುರ್ಚಿ ಹಾಗೂ ಕೈಗವಸುಗಳನ್ನು ತೊಟ್ಟು ಆಗಮಿಸಿದ್ದರು.

ಪ್ರಥಮ ದರ್ಜೆಯ ಕ್ರಿಮಿನಲ್ ಲೈಂಗಿಕ ಕ್ರಿಯೆ ಮತ್ತು ಮೂರನೇ ಹಂತದ ಅತ್ಯಾಚಾರದ ಆರೋಪಗಳನ್ನು ಎದುರಿಸಿದ್ದ. ವೈನ್ಸ್ಟೈನ್ ಗೆ ನ್ಯೂಯಾರ್ಕ್ ನ್ಯಾಯಾಲಯ ಮಿರಿಯಮ್ ಹ್ಯಾಲೆ ಮತ್ತು ಜೆಸ್ಸಿಕಾ ಮನ್ ಅವರ ಸಾಕ್ಷ್ಯವನ್ನು ಆಧರಿಸಿ ಶಿಕ್ಷೆ ವಿಧಿಸಿದೆ.

ಇದೇ ವೇಳೆ ವೈನ್ಸ್ಟೈನ್ ಅವರನ್ನು ಮತ್ತೆರಡು ಲೈಂಗಿಕ ದೌರ್ಜನ್ಯದ ಗಂಭೀರ ಪ್ರಕರಣಗಳಿಂದ ಖುಲಾಸೆಗೊಳಿಸಲಾಗಿದೆ. ಇದಕ್ಕಾಗಿ ಅವರು ಜೀವಾವಧಿ ಶಿಕ್ಷೆಗೀಡಾಗುವ ಸಾಧ್ಯತೆ ಇದ್ದಿತಾದರೂ ಈಗ ಅದರಿಂದ ಅವರು ಬಚಾವ್ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com