ನಿರ್ಭಯಾ ಹಂತಕರಿಗೆ ಗಲ್ಲು: ಮರಣದಂಡನೆ ಶಿಕ್ಷೆ ರದ್ದುಗೊಳಿಸಲು ಸದಸ್ಯ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ

ನಿರ್ಭಯಾ ಸಾಮೂಹಿಕ ಅತ್ಯಾಚಾರ ಕೊಲೆ ಆರೋಪಿಗಳನ್ನು ನೇಣಿಗೇರಿಸಿದ ಒಂದು ದಿನದ ತರುವಾಯ ಮರಣದಂಡನೆ ಶಿಕ್ಷೆಯನ್ನು ನಿಲ್ಲಿಸುವಂತೆ ಅಥವಾ ಅದರ ಮೇಲೆ ನಿಷೇಧ ಹೇರುವಂತೆ ವಿಶ್ವಸಂಸ್ಥೆ ತನ್ನೆಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.
ವಿಶ್ವಸಂಸ್ಥೆ
ವಿಶ್ವಸಂಸ್ಥೆ

ಯುನೈಟೆಡ್ ನೇಷನ್ಸ್: ನಿರ್ಭಯಾ ಸಾಮೂಹಿಕ ಅತ್ಯಾಚಾರ ಕೊಲೆ ಆರೋಪಿಗಳನ್ನು ನೇಣಿಗೇರಿಸಿದ ಒಂದು ದಿನದ ತರುವಾಯ ಮರಣದಂಡನೆ ಶಿಕ್ಷೆಯನ್ನು ನಿಲ್ಲಿಸುವಂತೆ ಅಥವಾ ಅದರ ಮೇಲೆ ನಿಷೇಧ ಹೇರುವಂತೆ ವಿಶ್ವಸಂಸ್ಥೆ ತನ್ನೆಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.

'ನಿರ್ಭಯಾ' ಎಂದು ಹೆಸರಾದ ಯುವ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ  ನಡೆದ ಏಳು ವರ್ಷಗಳ ನಂತರ,ನಾಲ್ವರು ಅಪರಾಧಿಗಳಿಗೆ ಶುಕ್ರವಾರ ಮುಂಜಾನೆ ಮರಣದಂಡನೆ ಶಿಕ್ಷೆಯಾಗಿದೆ. 

ಇದೀಗ ಭಾರತದಲ್ಲಿ ನಡೆದ ಗಲ್ಲುಶಿಕ್ಷೆ ಕುರಿತು ಪ್ರತಿಕ್ರಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಕ್ತಾರರು "ವಿಶ್ವವ್ಯಾಪಿ ಮರಣದಂಡನೆ ಶಿಕ್ಷೆ ಜಾರಿಗೊಳ್ಳುವುದನ್ನು ನಿಲ್ಲಿಸಬೇಕು ಇಲ್ಲವೇ ಅದರ ಮೇಲೆ ನಿಷೇಧ ಹೇರಬೇಕು" ಎಂದು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಕರೆ ಕೊಟ್ಟಿದ್ದಾರೆ.

"ನಮ್ಮ ನಿಲುವು ಸ್ಪಷ್ಟವಾಗಿದೆ, ಮರಣದಂಡನೆಯ ಬಳಕೆಯನ್ನು ನಿಲ್ಲಿಸುವಂತೆ ನಾವು ಎಲ್ಲಾ ರಾಜ್ಯಗಳಿಗೆ ಕರೆ ನೀಡುತ್ತೇವೆ ಅಥವಾ ಕನಿಷ್ಠ ಇದಕ್ಕೆ ನಿಷೇಧವನ್ನು ಹಾಕಬೇಕಿದೆ"ಪ್ರಧಾನ ಕಾರ್ಯದ್ರ್ಶಿಯವರ ವಕ್ತಾರ  ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

 ಡಿಸೆಂಬರ್ 16, 2012 ರಂದು ನಡೆದಿದ್ದ ನಿರ್ಭಯಾ ಪ್ರಕರಣ ಆರೋಪಿಗಳು ತಮಗೆ ಒದಗಿದ ನೇಣುಶಿಕ್ಷೆಯಿಂದ ಪಾರಾಗಲು ಕಡೇಕ್ಷಣದವರೆಗೆ ಹೋರಾಟ ನಡೆಸಿದ್ದರು. ವ್ಯಾಪಕ ಪ್ರತಿಭಟನೆಗಳು ತರುವಾಯ ಭಾರತದ ಅತ್ಯಾಚಾರ ಕಾನೂನುಗಳಲ್ಲಿ ಬದಲಾವಣೆಗೆ  ಈ ನಿರ್ಭಯಾ ಪ್ರಕರಣ ನಾಂದಿ ಹಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com