ಕೋವಿಡ್-19 ಸಾಂಕ್ರಾಮಿಕ ರೋಗದ ಘೋಷಣೆ ಬಳಿಕ ಭಾರತದಲ್ಲಿ ಅತಿಹೆಚ್ಚು ಮಕ್ಕಳ ಜನನದ ನಿರೀಕ್ಷೆ!

ಕೋವಿಡ್-19 ನ್ನು ಸಾಂಕ್ರಾಮಿಕ ರೋಗ ಎಂದು ಮಾರ್ಚ್ ನಲ್ಲಿ ಘೋಷಣೆ ಮಾಡಿದ ಬಳಿಕ ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಜನನವಾಗುವ ನಿರೀಕ್ಷೆ ಇದೆ. 
ಕೋವಿಡ್-19 ಸಾಂಕ್ರಾಮಿಕ ರೋಗದ ಘೋಷಣೆ ಬಳಿಕ ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಜನನದ ನಿರೀಕ್ಷೆ!
ಕೋವಿಡ್-19 ಸಾಂಕ್ರಾಮಿಕ ರೋಗದ ಘೋಷಣೆ ಬಳಿಕ ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಜನನದ ನಿರೀಕ್ಷೆ!
Updated on

ವಿಶ್ವಸಂಸ್ಥೆ: ಕೋವಿಡ್-19 ನ್ನು ಸಾಂಕ್ರಾಮಿಕ ರೋಗ ಎಂದು ಮಾರ್ಚ್ ನಲ್ಲಿ ಘೋಷಣೆ ಮಾಡಿದ ಬಳಿಕ ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಜನನವಾಗುವ ನಿರೀಕ್ಷೆ ಇದೆ. 

ವಿಶ್ವಸಂಸ್ಥೆಯ ಭಾಗವಾಗಿರುವ ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಯ ಪ್ರಕಾರ ಕೊರೋನಾ ಸಾಂಕ್ರಾಮಿಕ ರೋಗವೆಂದು ಘೋಷಿಸಿದ ಬಳಿಕ ಮಾರ್ಚ್ ನಿಂದ ಡಿಸೆಂಬರ್ ವರೆಗೆ 20 ಮಿಲಿಯನ್ ಮಕ್ಕಳು ಜನಿಸಲಿವೆ ಎಂದು ಹೇಳಿದೆ. 

116 ಮಿಲಿಯನ್ ಮಕ್ಕಳು ಕೋವಿಡ್-19 ಸಾಂಕ್ರಾಮಿಕ ರೋಗದ ಕರಿಛಾಯೆಯ ನಡುವೆಯೇ ಜನ್ಮಿಸಲಿವೆ ಎಂದು ವಿಶ್ವ ತಾಯಂದಿರ ದಿನವಾದ ಮೇ.10 ಕ್ಕೂ ಮುನ್ನ ವಿಶ್ವ ಸಂಸ್ಥೆಯ ಮಕ್ಕಳ ನಿಧಿ ಹೇಳಿದೆ.

9 ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ಪ್ರಮಾಣದ ಜನನ ಇದಾಗಿರಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಚೀನಾದಲ್ಲಿ 13.5 ಮಿಲಿಯನ್ ಮಕ್ಕಳು, ನೈಜೀರಿಯಾದಲ್ಲಿ 6.4 ಮಿಲಿಯನ್ ಮಕ್ಕಳು ಪಾಕಿಸ್ತಾನದಲ್ಲಿ 5 ಮಿಲಿಯನ್ ಮಕ್ಕಳು, ಇಂಡೋನೇಷ್ಯಾದಲ್ಲಿ 4 ಮಿಲಿಯನ್ ಮಕ್ಕಳು ಜನಿಸಲಿವೆ ಎಂದು ವಿಶ್ವಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com