ಕೊರೋನಾ ನಿಯಂತ್ರಣ ಕಷ್ಟ ಸಾಧ್ಯ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಕೊರೋನಾವೈರಸ್ ಮತ್ತೊಂದು ಸ್ಥಳೀಯ ವೈರಸ್ ಆಗಿ ಮುಂದೆ ಸಂಪೂರ್ಣವಾಗಿ ನಿವಾರಣೆಯಾಗದೆಯೂ  ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕಳವಳ ವ್ಯಕ್ತಪಡಿಸಿದೆ.
ಡಬ್ಲ್ಯುಎಚ್ಒ ನಿರ್ದೇಶಕ ಮೈಕ್ ರಯಾನ್
ಡಬ್ಲ್ಯುಎಚ್ಒ ನಿರ್ದೇಶಕ ಮೈಕ್ ರಯಾನ್

ವಾಷಿಂಗ್ಟನ್ : ಕೊರೋನಾವೈರಸ್ ಮತ್ತೊಂದು ಸ್ಥಳೀಯ ವೈರಸ್ ಆಗಿ ಮುಂದೆ ಸಂಪೂರ್ಣವಾಗಿ ನಿವಾರಣೆಯಾಗದೆಯೂ  ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕಳವಳ ವ್ಯಕ್ತಪಡಿಸಿದೆ.

ಹೀಗಾಗಿ ಜನತೆ  ಕರೋನ ಜೊತೆ ಬಡಿದಾಡಿಕೊಂಡೇ ಜೀವನ ಮಾಡುವಂತಹ ದಾರುಣ ಪರಿಸ್ಥಿತಿ ಬರಬಹುದು.ಎಚ್ಐವಿ ಇಂದಿಗೂ ಇದೆ. ನಾವು ವಾಸ್ತವಿಕವಾಗಿರಬೇಕು, ಯಾವಾಗ ಕೊರೋನಾ ವೈರಸ್ ರೋಗವು ಸಂಪೂರ್ಣವಾಗಿ ಕೊನೆಗೊಳ್ಳಲಿದೆ ಎಂದು  ನಮಗೆ ತಿಳಿದಿಲ್ಲ. 

ನಾವು  ಕೊರೋನಾವನ್ನು ಸಂಪೂರ್ಣವಾಗಿ ನಿವಾರಿಸುವ  ಔಷಧಿ ಕಂಡು ಹಿಡಿದರೆ  ಅದನ್ನು ಪ್ರಪಂಚದ ಎಲ್ಲಾ ಅಗತ್ಯವಿರುವ ಜನರಿಗೆ ಪೂರೈಕೆ ಮಾಡಿದರೆ  ಕೊರೋನಾ ಸೋಂಕು  ನಿಯಂತ್ರಣಕ್ಕೆ ಬರಬಹುದು 'ಎಂದು ಆರೋಗ್ಯ ತುರ್ತು ಕಾರ್ಯಕ್ರಮದ ನಿರ್ದೇಶಕ ಡಬ್ಲ್ಯುಎಚ್ಒ ನಿರ್ದೇಶಕ ಮೈಕ್ ರಯಾನ್ ಹೇಳಿದ್ದಾರೆ.

ವಿಶ್ವದ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಮುಂದುವರೆಸಿರುವ ಮಾರಕ ಕೊರೋನಾ ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 290,269 ಹಾಗೂ ಸೋಂಕಿತರ ಸಂಖ್ಯೆ 4,238,703ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com