ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

"44 ಲಕ್ಷ ಕೊರೊನಾ ಪ್ರಕರಣಗಳು, 3 ಲಕ್ಷ ತಲುಪುತ್ತಿರುವ ಸಾವುಗಳು"

ಪ್ರಪಂಚದಲ್ಲಿ ಪ್ರಸ್ತುತ ಕೊರೊನಾ ಸೃಷ್ಟಿಸಿರುವ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ. ವಿಶ್ವದಾದ್ಯಂತ ಈವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಸುಮಾರು 44 ಲಕ್ಷಕ್ಕೆ ಏರಿಕೆಯಾಗಿದೆ. ಸಾವುಗಳು ಕೂಡಾ 3 ಲಕ್ಷಕ್ಕೆ ತಲುಪಿದೆ. ಈ ಸಂಬಂಧ ವರ್ಲ್ಡ್ ಮೀಟರ್ ವೆಬ್ಸೈಟ್ ಅಂಕಿ-ಅಂಶ ನೀಡಿದೆ.
Published on

ನವದೆಹಲಿ: ಪ್ರಪಂಚದಲ್ಲಿ ಪ್ರಸ್ತುತ ಕೊರೊನಾ ಸೃಷ್ಟಿಸಿರುವ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ. ವಿಶ್ವದಾದ್ಯಂತ ಈವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಸುಮಾರು 44 ಲಕ್ಷಕ್ಕೆ ಏರಿಕೆಯಾಗಿದೆ. ಸಾವುಗಳು ಕೂಡಾ 3 ಲಕ್ಷಕ್ಕೆ ತಲುಪಿದೆ. ಈ ಸಂಬಂಧ ವರ್ಲ್ಡ್ ಮೀಟರ್ ವೆಬ್ಸೈಟ್ ಅಂಕಿ-ಅಂಶ ನೀಡಿದೆ.

ಈ ವೆಬ್ ಸೈಟ್ ಪ್ರಕಾರ, 2019 ಡಿಸೆಂಬರ್ ನಲ್ಲಿ ಕೊರೊನಾ ಸಾಂಕ್ರಾಮಿಕ ಪ್ರಪಂಚದ ಮೇಲೆ ದಂಡೆತ್ತಿಬಂದ ದಿನದಿಂದ ಈವರೆಗೆ ಜಗತ್ತಿನೆಲ್ಲೆಡೆ  43,97,000 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. 2,95,870 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ ಕೊರೊನಾದಿಂದ ಗುಣಮುಖ ಹೊಂದಿದವರ ಸಂಖ್ಯೆ 16,38,630 ರಷ್ಟಿದೆ ಎಂದು ತಿಳಿಸಿದೆ.

ಇನ್ನೂ ಕೊರೊನಾ ಜನಿಸಿದ್ದು  ಚೈನಾದಲ್ಲಾದರೂ, ತೀವ್ರ ನಷ್ಟವಾಗಿರುವುದು ಮಾತ್ರ ಅಗ್ರ ರಾಷ್ಟ್ರ ಅಮೆರಿಕಾಗೆ, ಈ ವರೆಗೆ ಸುಮಾರು 14,19,040 ಕೋವಿಡ್ -19 ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ. 84,200 ಮಂದಿ ಕೊರೊನಾ ಕಾರಣದಿಂದ ಮೃತಪಟ್ಟಿದ್ದಾರೆ.

ಅಮೆರಿಕಾ ನಂತರ 2,71,095 ಪ್ರಕರಣಗಳೊಂದಿಗೆ ಸ್ಪೇನ್ ಎರಡನೇ ಸ್ಥಾನದಲ್ಲಿದಲ್ಲಿದೆ, ಈ ದೇಶದಲ್ಲಿ 27,104 ಸಾವುಗಳು ಸಂಭವಿಸಿವೆ. 2,42,270 ಪ್ರಕರಣಗಳೊಂದಿಗೆ ರಷ್ಯಾ ಮೂರನೇ ಸ್ಥಾನದಲ್ಲಿದ್ದರೂ ಸಾವಿನ ಸಂಖ್ಯೆಯಲ್ಲಿ ಮಾತ್ರ 2,135 ಸಂಭವಿಸಿವೆ. ಕೊರೊನಾ ಪ್ರಕರಣಗಳ ವಿಷಯದಲ್ಲಿ 2,29,700 ಪ್ರಕರಣಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಮರಣದ ವಿಷಯದಲ್ಲಿ ಮಾತ್ರ 33,186 ಎರಡನೇ ಸ್ಥಾನದಲ್ಲಿದೆ. 1,78, 225 ಪ್ರಕರಣಗಳೊಂದಿಗೆ ಐದನೇ ಸ್ಥಾನದಲ್ಲಿರುವ ಇಟಲಿಯಲ್ಲಿ ಈವರೆಗೆ 31, 106 ಮಂದಿ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com