ದ್ವೇಷ ಭಾಷಣಗಳ ಪ್ರಸಾರ: ಝಾಕೀರ್ ನಾಯಕ್ ಒಡೆತನದ ಪೀಸ್ ಟಿವಿಗೆ 300,000 ದಂಡ

ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕೀರ್ ನಾಯಕ್ ಪೀಸ್ ಟಿವಿ ನೆಟ್ವರ್ಕ್ ಜಿಬಿಪಿ  ಮೇಲೆ  ಯುಕೆ ಮಾಧ್ಯಮ ನಿಯಂತ್ರಕ  ಆಫ್ಕಾಮ್"ದ್ವೇಷ ಭಾಷಣ" ಮತ್ತು "ಹೆಚ್ಚು ಆಕ್ರಮಣಕಾರಿ" ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ  300,000 ಫೌಂಡ್ ದಂಡ ವಿಧಿಸಿದೆ. ಯುಕೆನಲ್ಲಿನ ಸಂವಹನ ಸೇವೆಗಳಿಗಾಗಿ ಲಂಡನ್ ಮೂಲನಿಯಂತ್ರಣ ಸಂಸ್ಥೆ  ತನ್ನ ಪ್ರಸಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೀ
ಝಾಕೀರ್ ನಾಯಕ್
ಝಾಕೀರ್ ನಾಯಕ್
Updated on

ಲಂಡನ್: ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕೀರ್ ನಾಯಕ್ ಪೀಸ್ ಟಿವಿ ನೆಟ್ವರ್ಕ್ ಜಿಬಿಪಿ  ಮೇಲೆ  ಯುಕೆ ಮಾಧ್ಯಮ ನಿಯಂತ್ರಕ  ಆಫ್ಕಾಮ್"ದ್ವೇಷ ಭಾಷಣ" ಮತ್ತು "ಹೆಚ್ಚು ಆಕ್ರಮಣಕಾರಿ" ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ  300,000 ಫೌಂಡ್ ದಂಡ ವಿಧಿಸಿದೆ. ಯುಕೆನಲ್ಲಿನ ಸಂವಹನ ಸೇವೆಗಳಿಗಾಗಿ ಲಂಡನ್ ಮೂಲನಿಯಂತ್ರಣ ಸಂಸ್ಥೆ  ತನ್ನ ಪ್ರಸಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೀಸ್ ಟಿವಿ ಉರ್ದು ಜಿಬಿಪಿ ಗೆ  200,000 ಮತ್ತು ಪೀಸ್ ಟಿವಿ ಜಿಬಿಪಿ ಗೆ 100,000 ಫೌಂಡ್ ದಂಡ ಹಾಕಲಾಗಿದೆ. 

ದೆ. "ನಮ್ಮ ತನಿಖೆಗಳು ಪೀಸ್ ಟಿವಿ ಉರ್ದು ಮತ್ತು ಪೀಸ್ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ದ್ವೇಷದ ಮಾತು ಮತ್ತು ಹೆಚ್ಚು ಆಕ್ರಮಣಕಾರಿ ವಿಷಯವನ್ನು ಒಳಗೊಂಡಿವೆ ಎಂದು  ಗಮನಿಸಿದೆ. ಇದು ಅಪರಾಧವನ್ನು ಪ್ರಚೋದಿಸುವ ಸಾಧ್ಯತೆಯಿದೆ" ಎಂದು ಅದು ಹೇಳಿದೆ. "ವಿಷಯವು ನಮ್ಮ ಪ್ರಸಾರ ನಿಯಮಗಳ ಅನುಸರಣೆಯ ಗಂಭೀರ ಉಲ್ಲಂಘನೆಯನ್ನು ಮಾಡಲಾಗಿದ್ದು ಅದಕ್ಕಾಗಿ ದಂಡ ವಿಧಿಸಲಾಗಿದೆ. 

ಪೀಸ್ ಟಿವಿಲಾರ್ಡ್ ಪ್ರೊಡಕ್ಷನ್ಸ್ ಲಿಮಿಟೆಡ್ ಒಡೆತನದಲ್ಲಿದೆ, ಮತ್ತು ಕ್ಲಬ್ ಟಿವಿ ಪೀಸ್ ಟಿವಿ ಉರ್ದು ಪರವಾನಗಿಯನ್ನು ಹೊಂದಿದೆ. ಎರಡೂ ಚಾನಲ್ ಗಳು ಯುನಿವರ್ಸಲ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್ ಲಿಮಿಟೆಡ್ ಅನ್ನು ತಮ್ಮ ಮೂಲ ಕಂಪನಿ ಎಂದು ತೋರಿಸಿದೆ. ದು ಮುಂಬೈನ 54 ವರ್ಷದ ಟೆಲಿವಾಂಜೆಲಿಸ್ಟ್ ಮತ್ತು ಇಸ್ಲಾಮಿಕ್ ಬೋಧಕ ನಾಯಕ್ ಅವರ ಒಡೆತನದಲ್ಲಿದೆ.  ಕ್ಲಬ್ ಟಿವಿ ಮತ್ತು ಲಾರ್ಡ್ ಪ್ರೊಡಕ್ಷನ್ ಈಗ ಕ್ರಮವಾಗಿ 200,000 ಪೌಂಡ್ ಮತ್ತು 100,000 ಪೌಂಡ್‌ಗಳ ದಂಡದ ಶಿಕ್ಷೆಗೆ ಗುರಿಯಾಗಿದ್ದಾರೆ. 

ಪೀಸ್ ಟಿವಿ ಎನ್ನುವುದು ಲಾಭದ ಉದ್ದೇಶವಿಲ್ಲದ ಸ್ಯಾಟಲೈಟ್ ದೂರದರ್ಶನ ಜಾಲವಾಗಿದ್ದು, ದುಬೈನಿಂದ ಇಂಗ್ಲಿಷ್, ಬಂಗಾಳಿ ಮತ್ತು ಉರ್ದು ಭಾಷೆಗಳಲ್ಲಿ ಉಚಿತ-ಪ್ರಸಾರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಪೀಸ್ ಟಿವಿಯ ಸ್ಥಾಪಕ ಮತ್ತು ಅಧ್ಯಕ್ಷ ಝಾಕೀರ್ ನಾಯಕ್ ವಿವಾದಾತ್ಮಕ ಬೋಧಕನನ್ನು ಭಾರತದಲ್ಲಿ ಮನಿ ಲಾಂಡರಿಂಗ್ ಮತ್ತು ದ್ವೇಷ ಭಾಷಣಗಳ ಮೂಲಕ ಉಗ್ರವಾದವನ್ನು ಪ್ರಚೋದಿಸುವ ಆರೋಪ ಇವರ ಮೇಲಿದೆ. ಅವರು 2016 ರಲ್ಲಿ ಭಾರತವನ್ನು ತೊರೆದು ಮಲೇಷ್ಯಾಕ್ಕೆ ತೆರಳಿದರು, ಅಲ್ಲಿ ಅವರಿಗೆ ಶಾಶ್ವತ ನಾಗರಿಕತ್ವ ನೀಡಲಾಗಿದೆ. ಕಳೆದ ವಾರ, ಭಾರತ ಅವನನ್ನು ಹಸ್ತಾಂತರಿಸುವಂತೆ ಮಲೇಷ್ಯಾ ಸರ್ಕಾರಕ್ಕೆ ಔಪಚಾರಿಕ ವಿನಂತಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com