ನೇಪಾಳ ದುಸ್ಸಾಹಸ: ಭಾರತದ ಭೂ ಭಾಗ ತನ್ನದೆಂದು ತೋರಿಸುವ ಹೊಸ ಭೂಪಟಕ್ಕೆ ಸಂಪುಟ ಅಂಗೀಕಾರ!

ಭಾರತ- ನೇಪಾಳ ನಡುವೆ ನಡುವೆ ಗಡಿ ವಿವಾದ ತಲೆ ಎತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಭಾರತದ ಭೂ ಪ್ರದೇಶವಾಗಿರುವ ಲಿಪುಲೇಖ್, ಕಾಲಾಪಾನಿ, ಪಿಂಪಿಯಾಧುರ ಪ್ರದೇಶಗಳು ತಮಗೆ ಸೇರಿದ್ದು ಎಂದು ತೋರಿಸುವ ಹೊಸ ರಾಜಕೀಯ ಭೂಪಟ(ಪೊಲಿಟಿಕಲ್ ಮ್ಯಾಪ್)ಕ್ಕೆ ನೇಪಾಳ ಸಚಿವ ಸಂಪುಟ ಅನುಮೋದನೆ ನೀಡಿರುವುದು ತೀವ್ರ ವಿವಾದ ಸೃಷ್ಟಿಸಿದೆ. 
ನೇಪಾಳ ಭೂಪಟ
ನೇಪಾಳ ಭೂಪಟ

ಕಂಠ್ಮಂಡು: ಭಾರತ- ನೇಪಾಳ ನಡುವೆ ನಡುವೆ ಗಡಿ ವಿವಾದ ತಲೆ ಎತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಭಾರತದ ಭೂ ಪ್ರದೇಶವಾಗಿರುವ ಲಿಪುಲೇಖ್, ಕಾಲಾಪಾನಿ, ಪಿಂಪಿಯಾಧುರ ಪ್ರದೇಶಗಳು ತಮಗೆ ಸೇರಿದ್ದು ಎಂದು ತೋರಿಸುವ ಹೊಸ ರಾಜಕೀಯ ಭೂಪಟ(ಪೊಲಿಟಿಕಲ್ ಮ್ಯಾಪ್)ಕ್ಕೆ ನೇಪಾಳ ಸಚಿವ ಸಂಪುಟ ಅನುಮೋದನೆ ನೀಡಿರುವುದು ತೀವ್ರ ವಿವಾದ ಸೃಷ್ಟಿಸಿದೆ. 

ಉಭಯ ದೇಶಗಳ ನಡುವಣ ಗಡಿ ವಿವಾದವನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳುಲಾಗುವುದು ಎಂದು ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ ಹೇಳಿಕೆ ನೀಡಿದ ವಾರದೊಳಗೆ ನೇಪಾಳ ಈ ದುಸ್ಸಾಹಸ ನಡೆಸಿದೆ.

ಅಷ್ಟು ಮಾತ್ರವಲ್ಲ, ಕಾಲಾಪಾನಿ, ಲಿಂಪಿಯಾಧುರ, ಲಿಪುಲೇಖ್ ಗಳನ್ನು ನೇಪಾಳ ಭೂಭಾಗಳಾಗಿದ್ದು ಅವುಗಳನ್ನು ವಾಪಸ್ಸು ನೀಡಬೇಕೆಂದು ಒತ್ತಾಯಿಸಿ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಸಂಸದರೊಬ್ಬರು ಸಂಸತ್ತಿನಲ್ಲಿ ನಿರ್ಣಯವನ್ನು ಮಂಡಿಸಿದ್ದರು.

ಭಾರತ - ನೇಪಾಳ ನಡುವೆ ವಿವಾದಾಸ್ಪದ ಗಡಿ ಪ್ರದೇಶವಾಗಿರುವ ಕಾಲಾಪಾನಿ ಸಮೀಪದ ಪಶ್ಚಿಮ ಸ್ಥಾನ ಲಿಫುಲೇಖ್ ಪಾಸ್, ಭಾರತ, ನೇಪಾಳ ಎರಡೂ ದೇಶಗಳು ಕಾಲಪಾನಿ ತಮ್ಮ ದೇಶದ ಅವಿಭಾಜ್ಯ ಅಂಗ ಎಂದು ಹೇಳುತ್ತಿವೆ. 

ಉತ್ತರಾಖಂಡದಲ್ಲಿ ಪಿತೋರ್ ಗಢ್ ಜಿಲ್ಲೆಗೆ ಈ ಭಾಗ ಸೇರಿದೆ ಎಂದು ಭಾರತ ಹೇಳುತ್ತಿದೆ, ಅದು ತಮ್ಮ ದಾರ್ಚುಲಾ ಜಿಲ್ಲೆಯ ಭಾಗವೆಂದು ನೇಪಾಳ ವಾದಿಸುತ್ತಿದೆ.

ನೇಪಾಳ ಸಂಪುಟ ಅನುಮೋದಿಸಿದ ಹೊಸ ಭೂಪಟ ಸದ್ಯದಲ್ಲೇ ಭೂ ನಿರ್ವಹಣೆ ಸಚಿವಾಲಯ ಮೂಲಕ ಅಧಿಕೃತವಾಗಿ ಬಿಡುಗಡೆ ಗೊಳಿಸಲಾಗುವುದು ಎಂದು ಪ್ರದೀಪ್ ಕುಮಾರ್ ಗ್ಯಾವಲಿ ತಿಳಿಸಿದ್ದಾರೆ. 

ಏಳು ರಾಜ್ಯಗಳು, ೭೭ ಜಿಲ್ಲೆಗಳು, ಲಿಂಪಿಯಾಧುರ, ಲಿಪುಲೇಖ್, ಕಾಲಾಪಾನಿ ಸೇರಿ ೭೫೩ ಸ್ಥೂಲ ಆಡಳಿತ ವಿಭಾಗಗಳನ್ನು ಒಳಗೊಂಡ ನಕ್ಷೆಯನ್ನು ಪ್ರಕಟಿಸಲು ನೇಪಾಳ ಸರ್ಕಾರದ ಮಂತ್ರಿ ಮಂಡಳ ನಿರ್ಣಯಿಸಿದೆ ಎಂದು ಪ್ರದೀಪ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com