ಅನಿಲ್ ಅಂಬಾನಿಗೆ ಮತ್ತೆ ಹೊಡೆತ: ಚೀನಾದ ಬ್ಯಾಂಕುಗಳಿಗೆ 717 ಮಿಲಿಯನ್ ಡಾಲರ್ ಕಟ್ಟಿ ಎಂದ ಇಂಗ್ಲೆಂಡ್ ಕೋರ್ಟ್
ಲಂಡನ್: ಸಾಲ ಒಪ್ಪಂದದ ಪ್ರಕಾರ 21 ದಿನಗಳೊಳಗೆ ಚೀನಾದ ಮೂರು ಬ್ಯಾಂಕುಗಳಿಗೆ ಸುಮಾರು 717 ಮಿಲಿಯನ್ ಡಾಲರ್ ನೀಡುವಂತೆ ಲಂಡನ್ ನ ಕೋರ್ಟ್ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಆದೇಶ ನೀಡಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಯುಕೆ ಹೈಕೋರ್ಟ್ ಮತ್ತು ಲಂಡನ್ ವೇಲ್ಸ್ ನಲ್ಲಿ ಆದೇಶ ನೀಡಿದ ನ್ಯಾಯಾಧೀಶ ನಿಗೆಲ್ ಟೀರ್, ಪ್ರತಿವಾದಿಯ ಮೇಲೆ ಖಾತರಿ ಆರೋಪಕ್ಕೆ ಸಂಬಂಧಪಟ್ಟದ್ದಾಗಿದ್ದು ತಪ್ಪಿತಸ್ಥ ಎಂದು ಸಾಬೀತಾಗಿದೆ. ಹೀಗಾಗಿ ಅನಿಲ್ ಅಂಬಾನಿ ಚೀನಾದ ಬ್ಯಾಂಕಿಗೆ ಮೊತ್ತವನ್ನು ಭರಿಸಬೇಕು ಎಂದು ತೀರ್ಪು ನೀಡಿದರು.
2012 ರಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (ಆರ್‌ಕಾಮ್) ಪಡೆದ ಕಾರ್ಪೊರೇಟ್ ಸಾಲಕ್ಕೆ ವೈಯಕ್ತಿಕ ಖಾತರಿಯ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಇದು ಅನಿಲ್ ಅಂಬಾನಿಯವರು ಪಡೆದ ವೈಯಕ್ತಿಕ ಸಾಲವಲ್ಲ. ಚೀನಾದ ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಸಾಲದ ಮೇಲೆ ಖಾತರಿ ಹಾಕಿದ ಆರೋಪ ಮಾಡುತ್ತಿದ್ದು ಅದನ್ನು ಅನಿಲ್ ಅಂಬಾನಿಯವರು ನಿರಾಕರಿಸುತ್ತಲೇ ಬಂದಿದ್ದಾರೆ. ಅಂಬಾನಿಯವರು ತಮ್ಮ ಪರವಾಗಿ ಯಾರಿಗೂ ಸಾಲ ಪಡೆಯುವಾಗ ಖಾತರಿ ಹಾಕಿರಲಿಲ್ಲ ಎಂದು ಅನಿಲ್ ಅಂಬಾನಿ ವಕ್ತಾರರು ತಿಳಿಸಿದ್ದಾರೆ.
ಯುಕೆ ಕೋರ್ಟ್ ನ ತೀರ್ಪಿಗೆ ಆಧಾರವಾಗಿ ಭಾರತದಲ್ಲಿ ಸದ್ಯಕ್ಕೆ ಯಾವುದೇ ನಿರ್ದೇಶನ ಉದ್ಭವಿಸುವುದಿಲ್ಲ. ಕಾನೂನು ಸಲಹೆ ಪಡೆದು ಅನಿಲ್ ಅಂಬಾನಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ