ಅಮೆರಿಕ ಅಧ್ಯಕ್ಷೀಯ ಚುನಾವಣೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ

ಅಮೆರಿಕ ಚುನಾವಣೆ 2020: ನೀವು ತಿಳಿದುಕೊಳ್ಳಬೇಕಾದ ರಾಜಕೀಯ ಪರಿಭಾಷೆ ಇಲ್ಲಿವೆ

ಪ್ರತಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ತನ್ನದೇ ಆದ ರಾಜಕೀಯ ಪರಿಭಾಷೆಯನ್ನು ಹೊಂದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತಂತೆ ನೆಟಿಜನ್ ಗಳು ಹಲವಾರು ಪದಗಳನ್ನು ಚಲಾವಣೆಗೆ ತಂದಿದ್ದಾರೆ. 

ಪ್ರತಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ತನ್ನದೇ ಆದ ರಾಜಕೀಯ ಪರಿಭಾಷೆಯನ್ನು ಹೊಂದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತಂತೆ ನೆಟಿಜನ್ ಗಳು ಹಲವಾರು ಪದಗಳನ್ನು ಚಲಾವಣೆಗೆ ತಂದಿದ್ದಾರೆ. 

ಈ ಪದಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ 2020 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ.

ನೆಕೆಡ್ ಬ್ಯಾಲೆಟ್

ಪೆನ್ಸಲ್ವೇನಿಯಾ ಸೇರಿದಂತೆ ಅಮೆರಿಕಾದ 16 ರಾಜ್ಯಗಳು ಮತದಾರರು ಅಂಚೆ ಮತಗಳನ್ನು ರಹಸ್ಯವಾದ ಲಕೋಟೆಯಲ್ಲಿ ಕಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 

ಗೌಪ್ಯ ಲಕೋಟೆಯಲ್ಲಿ ಕಳಿಸದೇ ಇರುವ ಮತಗಳನ್ನು ನೆಕೆಡ್ ಎಂದು ಪರಿಗಣಿಸಿ ಅನರ್ಹಗೊಳಿಸಲಾಗುತ್ತದೆ. ಇದನ್ನೇ ನೆಕೆಡ್ ಬ್ಯಾಲಟ್ ಎಂದು ಹೇಳಲಾಗುತ್ತಿದೆ ಹಾಗೂ ಸೆಲೆಬ್ರಿಟಿಗಳಾದ ನವೋಮಿ ಕ್ಯಾಂಪ್ಬೆಲ್, ಕ್ರಿಸ್ ರಾಕ್, ಸಾರಾ ಸಿಲ್ವರ್‌ಮನ್ ತಾವು ಸ್ವತಃ ನಗ್ನರಾಗುವುದರ ಮೂಲಕ ನೆಕೆಡ್ ಬ್ಯಾಲಟ್ ಕುರಿತು ಜನ ಜಾಗೃತಿ ಮೂಡಿಸಿದ್ದಾರೆ.

ರೆಡ್ ಮಿರಾಜ್/ ಬ್ಲೂ ಶಿಫ್ಟ್ 

ಕೊರೋನಾ ವೈರಸ್ ನಿಂದಾಗಿ ಈ ಬಾರಿ ಲಕ್ಷಾಂತರ ಅಮೆರಿಕನ್ನರು ಪ್ರಮುಖವಾಗಿ ಡೆಮಾಕ್ರಾಟ್ ಗಳು ಅಂಚೆ ಮತದಾನ ಮಾಡುವುದನ್ನು ಅನಿವಾರ್ಯಗೊಳಿಸಿದ್ದು, ಮತ ಎಣಿಕೆ ದಿನಗಟ್ಟಲೆ ತೆಗೆದುಕೊಳ್ಳುತ್ತದೆ.  ನ.-03 ರ ನಂತರ ಮೂರು ದಿನಗಳ ಬಳಿಕ ಚುನಾವಣಾ ದಿನದಂದು ಪ್ರಾರಂಭಿಕ ಫಲಿತಾಂಶದಲ್ಲಿ ರಿಪಬ್ಲಿಕನ್ ಗಳು ಪೆನ್ಸಲ್ವೇನಿಯಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವುದು ಕಂಡುಬರುತ್ತದೆ. ಮತ ಎಣಿಕೆ ಚುರುಕುಗೊಂಡ ನಂತರ ರೆಡಿ ಮಿರಾಜ್ ಬ್ಲೂ ಶಿಫ್ಟ್ ಗೆ ದಾರಿ ಮಾಡಿಕೊಡಲಿದೆ. ಫ್ಲೋರಿಡಾ ಹಾಗೂ ನಾರ್ತ್ ಕರೋಲಿನಾದಲ್ಲಿ ಬ್ಲೂ ಮಿರಾಜ್ ಹಾಗೂ ರೆಡ್ ಶಿಫ್ಟ್ ಕಂಡುಬರುವ ಸಾಧ್ಯತೆ ಇದೆ.

ಸ್ಪಾಯಿಲ್ಡ್ ಬ್ಯಾಲಟ್ (ಹಾಳಾದ ಬ್ಯಾಲೆಟ್‌ಗಳು)

ಹೆಸರೇ ಹೇಳುವಂತೆ ಇದು ತಿರಸ್ಕೃತಗೊಂಡ ಅಥವಾ ಹಾಳಾದ ಬ್ಯಾಲೆಟ್ ಗಳು. ಅಕ್ಟೋಬರ್ 27 ರಂದು ಟ್ರಂಪ್ ಮಾಡಿದ್ದ ಕ್ಯಾನ್ ಐ ಚೇಂಜ್ ಮೈ ಓಟ್ ಎಂಬ ಶಬ್ದ ಟ್ವೀಟ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ತಮಗೆ ಹೊಸ ಬ್ಯಾಲಟ್ ನೀಡುವಂತೆ ಅಮೆರಿಕನ್ನರಿಗೆ ಮನವಿ ಮಾಡಿದ್ದರು.

ಡ್ಯುಲಿಂಗ್ ಎಲೆಕ್ಟರ್ಸ್: ಅಮೆರಿಕಾದಲ್ಲಿ ಪಾಪ್ಯುಲರ್ ಓಟ್ ಹಾಗೂ ಎಲೆಕ್ಟೊರೋಲ್ ಓಟ್ ಎಂಬ ವಿಧಾನಗಳಿವೆ. ಪಾಪ್ಯುಲರ್ ಓಟ್ ಗಳನ್ನು ಸೋತರೂ ಸಹ ಎಲೆಕ್ಟೋರೋಲ್ ಮತಗಳ ಮೂಲಕ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಬಹುದು 2016 ರಲ್ಲಿ ಹಿಲರಿ ಕ್ಲಿಂಟನ್ 3 ಮಿಲಿಯನ್ ಮತಗಳಿಂದ ಪಾಪ್ಯುಲರ್ ಓಟ್ ನ್ನು ಗೆದ್ದಿದ್ದರೂ ಸಹ ಡೊನಾಲ್ಡ್ ಟ್ರಂಪ್ ಎಲೆಕ್ಟೊರೋಲ್ ಮತಗಳಲ್ಲಿ ಶೇ.57 ರಷ್ಟು ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ರೀತಿಯಾಗಿ ಪಾಪ್ಯುಲರ್ ಓಟ್ ಗಳಲ್ಲಿ ಸೋತು ಎಲೆಕ್ಟೊರೋಲ್ ಮತಗಳಿಂದ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದವರು ಹಲವು ಮಂದಿ ಇದ್ದಾರೆ. 

ಪಾಪ್ಯುಲರ್ ಓಟ್ ಗಳು ಕಾಂಗ್ರೆಸ್ ನ ಸದಸ್ಯರು, ಮೇಯರ್ ಗಳು, ಗೌರ್ನರ್ ಗಳು, ಸ್ಥಳೀಯ ಜನಪ್ರತಿನಿಧಿಗಳ ಆಯ್ಕೆಯನ್ನು ನಿರ್ಣಯಿಸುತ್ತವೆ. ಈ ಮತಗಳು ಅಮೆರಿಕ ಅಧ್ಯಕ್ಷರು ಯಾರಾಗಬೇಕೆಂಬುದನ್ನು ನೇರವಾಗಿ ನಿರ್ಧರಿಸುವುದಿಲ್ಲ. ಎಲೆಕ್ಟೊರೋಲ್ ಮತಗಳು ಮಾತ್ರ ಅಮರಿಕ ಅಧ್ಯಕ್ಷರ ಆಯ್ಕೆಯನ್ನು ನಿರ್ಣಯಿಸುತ್ತವೆ. ಇದನ್ನೆ ಡ್ಯುಲಿಂಗ್ ಎಲೆಕ್ಟರ್ಸ್ ಎನ್ನುತ್ತಾರೆ.   

Related Stories

No stories found.

Advertisement

X
Kannada Prabha
www.kannadaprabha.com