ನ್ಯೂಯಾರ್ಕ್: ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿದ್ದಾರೆ ಜೊ ಬೈಡನ್. ಅವರಿಗೆ 273 ಎಲೆಕ್ಟೊರಲ್ ಮತಗಳು ಸಿಕ್ಕಿವೆ.
ಈ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಬೆಂಬಲಿಗರು ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ರಿಪಬ್ಲಿಕನ್ ನ್ಯಾಶನಲ್ ಕಮಿಟಿ ಅರಿಝೊನಾದಲ್ಲಿ ನಿನ್ನೆ ಮೊಕದ್ದಮೆ ಹೂಡಿದ್ದು ಮೆಟ್ರೊ ಫಿಯೊನಿಕ್ಸ್ ನಲ್ಲಿ ಸಾವಿರಾರು ಎಲೆಕ್ಷನ್ ಡೇ ಬ್ಯಾಲಟ್ ಗಳನ್ನು ಕೈಯಿಂದಲೇ ತಪಾಸಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಮತ ಎಣಿಕೆ ಕಾರ್ಯಕರ್ತರು ಎಣಿಕೆ ಮಾಡುವ ಸಂದರ್ಭದಲ್ಲಿ ಅಕ್ರಮ ನಡೆಸಿದ್ದು ಕೆಲವು ಬ್ಯಾಲಟ್ ಮತಪತ್ರ ಆಯ್ಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ.
ಇನ್ನು ಟ್ರಂಪ್ ಬೆಂಬಲಿಗರು ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳುವಂತೆ ಕಾಣುತ್ತಿಲ್ಲ. ಇದು ಇಲ್ಲಿಗೆ ಮುಗಿದಿಲ್ಲ, ಕದಿಯುವುದನ್ನು ನಿಲ್ಲಿಸಿ ಎಂದು ಟ್ರಂಪ್ ಬೆಂಬಲಿಗರು ನಿನ್ನೆ ದೇಶಾದ್ಯಂತ ಎಲ್ಲಾ ರಾಜ್ಯಗಳ ಕೇಂದ್ರಗಳಲ್ಲಿ ಬೀದಿಗಳಲ್ಲಿ ಪ್ರತಿಭಟಿಸುತ್ತಾ ಸಾಗಿದ್ದಾರೆ.
ಅಟ್ಲಾಂಟಾ ಮತ್ತು ತಲ್ಲಹಸ್ಸಿಯಿಂದ ಆಸ್ಟಿನ್, ಬಿಸ್ಮಾರ್ಕ್, ಬೋಯಿಸ್ ಮತ್ತು ಫೀನಿಕ್ಸ್ ವರೆಗೆ, ಕೆಲವು ಡಜನ್‌ಗಳಿಂದ ಕೆಲವು ಸಾವಿರದವರೆಗಿನ ಜನಸಮೂಹ ಟ್ರಂಪ್ ಬೆಂಬಲಿಗರು ಬಹಿರಂಗವಾಗಿ ಬಂದೂಕುಗಳನ್ನು ಹೊತ್ತುಕೊಂಡು ಸಾಗಿದರು. ಜೊ ಬೈಡನ್ ಗೆಲುವಿನ ಸುದ್ದಿಯನ್ನು ನಿರಾಕರಿಸಿದರು. ಕೆಲವು ನಗರಗಳಲ್ಲಿ ಬೈಡನ್ ಮತ್ತು ಟ್ರಂಪ್ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ರಿಪಬ್ಲಿಕನ್ ಬೆಂಬಲಿಗರು ಹೆಚ್ಚಾಗಿರುವ ಜಾರ್ಜಿಯಾದ ರಾಜಧಾನಿ ಅಟ್ಲಾಂಟಾದಲ್ಲಿ ಬೈಡನ್ ಅವರನ್ನು ಬಂಧಿಸಿ ಎಂದು ಸಾವಿರಕ್ಕೂ ಹೆಚ್ಚು ಟ್ರಂಪ್ ಬೆಂಬಲಿಗರು ಕೂಗಿದರು. ಬೈಡನ್ ಗೆದ್ದಿದ್ದಾರೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಇಲ್ಲ, ಇದು ಸಾಧ್ಯವಿಲ್ಲ, ಈ ರೇಸ್ ಇಲ್ಲಿಗೆ ಮುಗಿದಿಲ್ಲ, ಇದು ಸುಳ್ಳು ಸುದ್ದಿ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಅಮೆರಿಕದ ರಸ್ತೆಗಳಲ್ಲಿ ದೇಶದ ಧ್ವಜ ಮತ್ತು ಟ್ರಂಪ್ ಪರ ಬ್ಯಾನರ್ ಗಳು ರಾರಾಜಿಸಿದವು.
ನಿನ್ನೆ ಪ್ರತಿಭಟನೆ ತಕ್ಷಣ ಹಿಂಸಾರೂಪಕ್ಕೆ ಪಡೆದ ವರದಿಗಳು ಕೇಳಿಬಂದಿಲ್ಲ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಟ್ರಂಪ್ ಬೆಂಬಲಿಗರು ಮತ್ತು ವಿರೋಧಿಗಳನ್ನು ಪ್ರತ್ಯೇಕಿಸಿದರು. ಜಾರ್ಜಿಯಾದಲ್ಲಿ 1992ರ ನಂತರ ಇದೇ ಮೊದಲ ಬಾರಿಗೆ ಡೆಮಾಕ್ರಟಿಕ್ ಪಕ್ಷ ಗೆದ್ದಿದೆ.
ಟ್ರಂಪ್ ಬೆಂಬಲಿಗರು ಆರೋಪದಂತೆ ಯಾವುದೇ ಮತ ಎಣಿಕೆಯಲ್ಲಿ ವಂಚನೆಯಾದ ಬಗ್ಗೆ ಸಾಕ್ಷಿಗಳಿಲ್ಲ.
ಇನ್ನೊಂದೆಡೆ ಜೊ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆಗಳು ವಿಶ್ವ ನಾಯಕರಿಂದ ಮುಂದುವರಿದಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು, 40 ವರ್ಷಗಳಿಂದ ನಾವು ಉತ್ತಮ ವೈಯಕ್ತಿಕ ಸಂಬಂಧ ಹೊಂದಿದ್ದೇವೆ. ನೀವು ಇಸ್ರೇಲ್ ನ ಉತ್ತಮ ಸ್ನೇಹಿತ ಎಂದು ನನಗೆ ಗೊತ್ತಿದೆ, ಅಮೆರಿಕ ಮತ್ತು ಇಸ್ರೇಲ್ ನಡುವೆ ಮುಂದಿನ ದಿನಗಳಲ್ಲಿ ಸಂಬಂಧ ಬಲವರ್ಧನೆಯನ್ನು ಎದುರು ನೋಡುತ್ತೇನೆ ಎಂದಿದ್ದಾರೆ.
ನೆತನ್ಯಾಹು ಡೊನಾಲ್ಡ್ ಟ್ರಂಪ್ ಅವರ ಸ್ನೇಹಿತನೂ ಹೌದು.
Thank you @realDonaldTrump for the friendship you have shown the state of Israel and me personally, for recognizing Jerusalem and the Golan, for standing up to Iran, for the historic peace accords and for bringing the American-Israeli alliance to unprecedented heights.
— PM of Israel (@IsraeliPM) November 8, 2020
Advertisement