ಬಹ್ರೈನ್ ನ ದೀರ್ಘಾವಧಿ ಪ್ರಧಾನಿ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ ಇನ್ನಿಲ್ಲ

ಸುದೀರ್ಘ ಕಾಲ ಬಹ್ರೇನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಪ್ರಧಾನಿ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ (84) ನಿಧನರಾಗಿದ್ದಾರೆ ಎಂದು ಬಹ್ರೇನ್  ರಾಯಲ್ ಕೋರ್ಟ್ ಮಾಹಿತಿ ನೀಡಿದೆ.
ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ
ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ

ಸುದೀರ್ಘ ಕಾಲ ಬಹ್ರೇನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಪ್ರಧಾನಿ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ (84) ನಿಧನರಾಗಿದ್ದಾರೆ ಎಂದು ಬಹ್ರೇನ್  ರಾಯಲ್ ಕೋರ್ಟ್ ಮಾಹಿತಿ ನೀಡಿದೆ.

ಕೊರೋನಾ ಕಾರಣದಿಂದಾಗಿ ಅತ್ಯಂತ ಆಪ್ತವಲಯದವರ ಸಮ್ಮುಖದಲ್ಲಷ್ಟೇ ಅಂತ್ಯಕ್ರಿಯೆ ನಡೆಯಲಿದೆ.

1970 ರಿಂದ ಬಹ್ರೇನ್ ಗೆ ಸೇವೆ ಸಲ್ಲಿಸಿದ್ದ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ ಆಗಸ್ಟ್ 15, 1971 ರಂದು ಬಹ್ರೇನ್ ಸ್ವಾತಂತ್ರ್ಯಗೊಂಡಾಗಿನಿಂದ ಅಲ್ಲಿನ ಪ್ರಧಾನಿಯಾಗಿದ್ದರು. ಅವರು ವಿಶ್ವದ ಯಾವುದೇ ಸರ್ಕಾರದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಎನಿಸಿದ್ದಾರೆ.

ಖಲೀಫಾ ನಿಧನಕ್ಕೆ ಬಹ್ರೇನ್​ ದೊರೆ ಹಮೀದ್​ ಬಿನ್​​  ಸಂತಾಪ ಸೂಚಿಸಿದ್ದು ದೇಶಾದ್ಯಂತ ಒಂದು ವಾರಗಳ ಕಾಲ ಶೋಕಾಚರಣೆ ಘೊಷಿಸಿದ್ದಾರೆ. ಖಲೀಫಾ ನಿಧನಕ್ಕೆ ಇಸ್ರೇಲ್​ ಪ್ರಧಾನಿ ಸೇರಿದಂತೆ ವಿಶ್ವದ ನಾನಾ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com