ಜೋ ಬೈಡನ್ ಸಂಪುಟದಲ್ಲಿ ಇಬ್ಬರು ಭಾರತೀಯ ಅಮೆರಿಕನ್ನರಿಗೆ ಪ್ರಮುಖ ಸ್ಥಾನ
ವಾಷಿಂಗ್ ಟನ್: ಅಮೆರಿಕದ ನಿಯೋಜಿತ ನೂತನ ಅಧ್ಯಕ್ಷ ಜೋ ಬೈಡನ್ ಸಚಿವ ಸಂಪುಟದಲ್ಲಿ ಇಬ್ಬರು ಭಾರತೀಯ ಅಮೆರಿಕನ್ನರಿಗೆ ಪ್ರಮುಖ ಖಾತೆಗಳು ಲಭ್ಯವಾಗಲಿದೆ.
ಅಲ್ಲಿನ ಮಾಧ್ಯಮಗಳ ವರದಿಗಳ ಪ್ರಕಾರ ಅಮೆರಿಕದ ಸರ್ಜನ್ ಜನರಲ್ ವಿವೇಕ್ ಮೂರ್ತಿ ಹಾಗೂ ಸ್ಟ್ಯಾಂಡ್ ಫೋರ್ಡ್ ವಿವಿಯ ಪ್ರೊಫೆಸರ್ ಆಗಿರುವ ಅರುಣ್ ಮಜುಮ್ದಾರ್ ಅವರಿಗೆ ಜೋ ಬೈಡನ್-ಕಮಲ ಹ್ಯಾರಿಸ್ ಆಡಳಿತದಲ್ಲಿ ಪ್ರಮುಖ ಖಾತೆಗಳು ಲಭ್ಯವಾಗಲಿದೆ.
ವಿವೇಕ್ ಮೂರ್ತಿ ಕೋವಿಡ್-19 ಗೆ ಸಂಬಂಧಿಸಿದಂತೆ ಈಗಾಗಲೇ ಜೋ ಬೈಡನ್ ಅವರ ಪ್ರಮುಖ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ, ಇವರಿಗೆ ಅಮೆರಿಕದ ಆರೋಗ್ಯ ಹಾಗೂ ಮಾನವ ಸೇವೆಗಳ ಖಾತೆಯ ಹೊಣೆಗಾರಿಕೆ ಸಿಗಲಿದೆ ಹಾಗೂ ಸ್ಟ್ಯಾಂಡ್ ಫೋರ್ಡ್ ವಿವಿಯ ಪ್ರೊಫೆಸರ್ ಆಗಿರುವ ಅರುಣ್ ಮಜುಮ್ದಾರ್ ಅವರನ್ನು ಇಂಧನ ಖಾತೆ ಸಚಿವರನ್ನಾಗಿ ಮಾಡಲಾಗುತ್ತದೆ ಎಂದು ವಾಷಿಂಗ್ ಟನ್ ಪೋಸ್ಟ್ ಹಾಗೂ ಪೊಲಿಟಿಕೋ ಪತ್ರಿಕೆಗಳಲ್ಲಿ ವಿಶ್ಲೇಷಿಸಲಾಗಿದೆ.
ಮಜುಮ್ದಾರ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಏಜೆನ್ಸಿ-ಎನರ್ಜಿಯ ಯೋಜನಾ ಸಂಶೋಧನೆಯ ಪ್ರಥಮ ನಿರ್ದೇಶಕರಾಗಿ ಇವರು ಕಾರ್ಯನಿರ್ವಹಿಸಿದ್ದು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೈಡನ್ ಗೆ ಉನ್ನತ ಮಟ್ಟದ ಸಲಹೆಗಾರರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ