ಮ್ಯಾನೇಜ್ ಮೆಂಟ್ ಬೋರ್ಡ್ ಗಳಲ್ಲಿ ಮಹಿಳೆಯರಿಗೆ ಸ್ಥಾನ ಕಡ್ಡಾಯ: ಜರ್ಮನಿ ಐತಿಹಾಸಿಕ ನಿರ್ಣಯ

 ಲಿಂಗ ಸಮಾನತೆಯ ನಿಟ್ಟಿನಲ್ಲಿ ಜರ್ಮನಿ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಮಹಿಳೆಯರು ದೇಶದ ಕಂಪನಿಗಳ ಆಡಳಿತ ನಿರ್ವಹಣಾ ಮಂಡಳಿಯಲ್ಲಿ ಕಡ್ಡಾಯವಾಗಿ ಸದಸ್ಯರಾಗಿರಬೇಕು ಎಂಬ ಕಾನೂನನ್ನು ಅನುಮೋದಿಸಿದೆ.
ಏಂಜೆಲಾ ಮಾರ್ಕೆಲ್
ಏಂಜೆಲಾ ಮಾರ್ಕೆಲ್

ಬರ್ಲಿನ್: ಲಿಂಗ ಸಮಾನತೆಯ ನಿಟ್ಟಿನಲ್ಲಿ ಜರ್ಮನಿ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಮಹಿಳೆಯರು ದೇಶದ ಕಂಪನಿಗಳ ಆಡಳಿತ ನಿರ್ವಹಣಾ ಮಂಡಳಿಯಲ್ಲಿ ಕಡ್ಡಾಯವಾಗಿ ಸದಸ್ಯರಾಗಿರಬೇಕು ಎಂಬ ಕಾನೂನನ್ನು ಅನುಮೋದಿಸಿದೆ.

ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ನೇತೃತ್ವದ ಕ್ರಿಶ್ಚಿಯನ್ ಡೆಮೋಕ್ರಾಟ್ಸ್, ಸೋಷಿಯಲ್ ಡೆಮೋಕ್ರಾಟ್ಸ್ ಸಮ್ಮಿಶ್ರ ಸರ್ಕಾರ ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ.

ಯಾವುದೇ ಕಂಪನಿಯ ನಿರ್ವಹಣಾ ಮಂಡಳಿಯಲ್ಲಿ ಮೂವರು ವ್ಯಕ್ತಿಗಳಿದ್ದರೆ ಅವರಲ್ಲಿ ಕನಿಷ್ಠ ಒಬ್ಬ ಮಹಿಳೆಯಾದರೂ ಇರಬೇಕು ಎಂದು ಸ್ಪಷ್ಪಪಡಿಸಿದೆ.

 ಈವರೆಗೆ ಈ ನಿಯಮ ಸ್ವಯಂ ಪ್ರೇರಿತವಾಗಿ ಜಾರಿಯಲ್ಲಿದೆ. ಆದರೆ, ಲಿಂಗ ಸಮಾನತೆ ರೂಪಿಸುವಲ್ಲಿ ಸ್ವಯಂ ಪ್ರೇರಿತ ನಿಯಮ ಶೋಚನೀಯವಾಗಿ ವಿಫಲವಾಗಿವೆ ಎಂಬ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜರ್ಮನಿ ಈ ಹೊಸ ಕಾನೂನು ಜಾರಿಗೆ ತಂದಿದೆ.ಇನ್ನು ಮುಂದೆ ಎಲ್ಲಾ ಕಂಪನಿಗಳ ಆಡಳಿ ನಿರ್ವಹಣಾ ಮಂಡಳಿಯಲ್ಲಿ ಮಹಿಳೆಯರು ಕಡ್ಡಾಯವಾಗಿ ಇರಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com