ಕೊನೆಗೂ ಸೋಲೊಪ್ಪಿಕೊಂಡರೇ ಡೊನಾಲ್ಡ್ ಟ್ರಂಪ್?: ಜೊ ಬೈಡನ್ ಗೆ ಅಧಿಕಾರ ಪರಿವರ್ತನೆ ಪ್ರಕ್ರಿಯೆಗೆ ಆದೇಶ

ಕೊನೆಗೂ ತಮ್ಮ ಸೋಲೊಪ್ಪಿಕೊಂಡು ಅಮೆರಿಕದ ಅಧಿಕಾರದ ಶಕ್ತಿ ಕೇಂದ್ರ ಶ್ವೇತಭವನದ ಅಧಿಕಾರವನ್ನು ಡೊನಾಲ್ಡ್ ಟ್ರಂಪ್ ಅವರು ಬಿಟ್ಟುಕೊಡುವ ಲಕ್ಷಣ ಕಾಣುತ್ತಿದೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಕೊನೆಗೂ ತಮ್ಮ ಸೋಲೊಪ್ಪಿಕೊಂಡು ಅಮೆರಿಕದ ಅಧಿಕಾರದ ಶಕ್ತಿ ಕೇಂದ್ರ ಶ್ವೇತಭವನದ ಅಧಿಕಾರವನ್ನು ಡೊನಾಲ್ಡ್ ಟ್ರಂಪ್ ಅವರು ಬಿಟ್ಟುಕೊಡುವ ಲಕ್ಷಣ ಕಾಣುತ್ತಿದೆ. 

ಡೊನಾಲ್ಡ್ ಟ್ರಂಪ್ ಅವರು ನಿನ್ನೆ ಅಧಿಕಾರಿಗಳಿಗೆ ಅಧಿಕಾರ, ಆಡಳಿತ ಪರಿವರ್ತನೆ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊ ಬೈಡನ್ ಅವರಿಗೆ ಶ್ವೇತಭವನಕ್ಕೆ ಕಾಲಿಡಲು ಅಗತ್ಯವಾದ ಸರ್ಕಾರದ ಸಂಪನ್ಮೂಲಗಳನ್ನು ಒದಗಿಸಲು ಮುಂದಾಗಿರುವುದಾಗಿ ಫೆಡರಲ್ ಏಜೆನ್ಸಿಯ ಮುಖ್ಯಸ್ಥರು ಹೇಳಿದ್ದಾರೆ.

ಆದರೂ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಜೊ ಬೈಡನ್ ವಿರುದ್ಧ ತಮ್ಮ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಬೆಂಬಲಿಗರು ಮತದಾನದಲ್ಲಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ತಪ್ಪುಗಳಾಗಿವೆ ಎಂದು ಕಾನೂನು ಮೊಕದ್ದಮೆಗಳನ್ನು ಹೂಡಿದ್ದಾರೆ, ಅವುಗಳಲ್ಲಿ ಕೆಲವನ್ನು ನ್ಯಾಯಾಲಯ ವಜಾಗೊಳಿಸಿದೆ.

ಜನರಲ್ ಸರ್ವಿಸಸ್ ಅಡ್ಮಿನಿಸ್ಟ್ರೇಟರ್(ಜಿಎಸ್ಎ) ಎಮಿಲಿ ಮುರ್ಫಿ ಚುನಾಯಿತ ಅಧ್ಯಕ್ಷ ಜೊ ಬೈಡನ್ ಅವರಿಗೆ ಪತ್ರ ಬರೆದು ಟ್ರಂಪ್ ಸರ್ಕಾರ ಆಡಳಿತ ಪ್ರಕ್ರಿಯೆಯನ್ನು ಹಸ್ತಾಂತರಿಸಲು ಪರಿವರ್ತನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಹೇಳಿದ್ದು ಈ ಬಗ್ಗೆ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಈ ನಿರ್ಧಾರವನ್ನು ನಾನು ವೈಯಕ್ತಿಕವಾಗಿ ಮಾಡಿದ್ದು ಕಾನೂನು ಮತ್ತು ವಾಸ್ತವ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಮಾಡುತ್ತಿದ್ದೇನೆ. ನನ್ನ ಮೇಲೆ ಶ್ವೇತಭವನದ ಅಥವಾ ಜಿಎಸ್ಎಯ ಯಾವ ಆಡಳಿತಾತ್ಮಕ ಅಧಿಕಾರಿಗಳ ಒತ್ತಡ ಕೂಡ ಇಲ್ಲ. ನನ್ನ ನಿರ್ಧಾರವನ್ನು ವಿಳಂಬ ಮಾಡಲು ಕೂಡ ನನಗೆ ಯಾವುದೇ ಒತ್ತಡ ಅಥವಾ ಆದೇಶಗಳಿಲ್ಲ ಎಂದು ಎಮಿಲಿ ಮುರ್ಫಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಧಿಕಾರ ಹಸ್ತಾಂತರಿಸಲು ಫೆಡರಲ್ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಜೊ ಬೈಡನ್ ಅವರಿಗೆ ಅವಕಾಶ ನೀಡದ್ದಕ್ಕಾಗಿ ಮುರ್ಫಿ ವಿರುದ್ಧ ಅಮೆರಿಕದಲ್ಲಿ ಮೊನ್ನೆ ಚುನಾವಣೆಯಾದ ನಂತರ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಡೆಮಾಕ್ರಟ್ ಮತ್ತು ರಿಪಬ್ಲಿಕನ್ ಪಕ್ಷದ ಸಾಕಷ್ಟು ಜನಪ್ರತಿನಿಧಿಗಳು ಈ ಬಗ್ಗೆ ಆಕೆಯನ್ನು ದೂರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com